ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಮಿತಿ ಮೀರಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಕ್ಸಿಜನ್ ಕೊರತೆ ದೊಡ್ಡ ಪ್ರಮಾಣದಲ್ಲಿ ಕಾಡ್ತಿದೆ. ಪರಿಣಾಮ ಸೋಂಕಿತರು ಜೀವ ಕಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದನ್ನ ಅರಿತ ಅನೇಕ ಸಂಘ, ಸಂಸ್ಥೆಗಳು ಸೋಂಕಿತರಿಗೆ ತಮ್ಮದೇ ರೀತಿಯಲ್ಲಿ ಆಕ್ಸಿಜನ್ ನೀಡಿ ಮಾನವೀಯತೆ ಮೆರೆಯಲು ಮುಂದೆ ಬಂದಿವೆ.

Image

ಅದರಂತೆ ಭುವನಂ ಪ್ರತಿಷ್ಠಾನ ಆಯೋಜಿಸಿರುವ ‘ಶ್ವಾಸ ಆಕ್ಸಿಜನ್ ಎಕ್ಸ್​ಪ್ರೆಸ್ ಹಾಗೂ ಬಾಂಧವ ಉಚಿತ ಆಟೋ ಸೇವೆ ವಾಹನಗಳಿಗೆ ಆರೋಗ್ಯ ಸಚಿವ ಡಾ.ಸುಧಾಕರ್  ಚಾಲನೆ ನೀಡಿದರು.

 

ಬಳಿಕ ಟ್ವೀಟ್ ಮಾಡಿ ಭುವನಂ ಪ್ರತಿಷ್ಠಾನದ ಈ ಸೇವೆಯನ್ನ ಕೊಂಡಾಡಿದರು. ಭುವನಂ ಪ್ರತಿಷ್ಠಾನ ವತಿಯಿಂದ ಆಯೋಜಿಸಲಾಗಿರುವ ಶ್ವಾಸ ಆಕ್ಸಿಜನ್ ಎಕ್ಸ್ ಪ್ರೆಸ್ ಹಾಗೂ ಬಾಂಧವ ಉಚಿತ ಆಟೋ ಸೇವೆ ವಾಹನಗಳಿಗೆ ಚಾಲನೆ ನೀಡಲಾಯಿತು. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ನೆರವಾಗುವ ಅನೇಕ ಸೇವಾ ಕಾರ್ಯಗಳಲ್ಲಿ ತೊಡಗಿರುವ ಸಂಘ-ಸಂಸ್ಥೆಗಳ ಸಮಾಜಮುಖಿ ಕಾರ್ಯ ಶ್ಲಾಘನೀಯ.

The post ಶ್ವಾಸ ಆಕ್ಸಿಜನ್ ಎಕ್ಸ್​ಪ್ರೆಸ್​, ಉಚಿತ ಆಟೋ ಸೇವೆ ಆರಂಭಿಸಿದ ಭುವನಂ ಪ್ರತಿಷ್ಠಾನ appeared first on News First Kannada.

Source: newsfirstlive.com

Source link