ಅವತ್ತು ನಾನು ಅವಳಲ್ಲ. ನಾನು ಅಂತವಳು ಅಲ್ಲವೇ ಅಲ್ಲ ಅಂತಾ ನಂಬಿಸಿದ್ದರು. ಅದನ್ನ ಕೇಳಿಸಿಕೊಂಡಿದ್ದದ್ದವರು ಹೌದೇನು ಇರಬೋದು ಅಂತಾ ನಂಬಿದ್ದರು. ಆದ್ರೆ ಇವತ್ತು ನಂಬಿದ್ದವರೇ ಮೂಗಿನ ಮೇಲೆ ಬೊಟ್ಟು ಇಟ್ಟುಕೊಳ್ಳುವಂತಾಗಿದೆ. ರೀಲ್ನಲ್ಲಿ ಡೈಲಾಗ್ ಹೊಡೆದಂತೆ ರಿಯಲ್ ಲೈಫ್ನಲ್ಲಿ ಡೈಲಾಗ್ ಹೊಡೆದು ತಪ್ಪಿಸಿಕೊಳ್ಳಬಹುದು ಅನ್ನೋದು ಸುಲಭದ ಮಾತಲ್ಲ. ಯಾಕೆ ಈ ಮಾತನ್ನ ಹೇಳಿದ್ದೀವಿ ಅನ್ನೋದಕ್ಕೆ ನೀವು ಈ ಎಪಿಸೋಡ್ ನೋಡಿದ ಮೇಲೆ ಡಿಸೈಡ್ ಮಾಡಿ. ಬಾಲಿವುಡ್ನಲ್ಲಿರುವ ಶ್ರೀಲಂಕಾ ಸುಂದರಿಯ ರಿಯಲ್ ಕಹಾನಿ
ನನಗೇನು ಗೊತ್ತಿಲ್ಲ, ನನಗೂ ಅದಕ್ಕೆ ಸಂಬಂಧ ಇಲ್ಲಾ, ಇದೆಲ್ಲವು ನನ್ನ ವಿರುದ್ದ ನಡೆಯುತ್ತಿರೋ ಪಿತೂರಿ ಅಂತಾ ಹೇಳೋದು ಬಹಳ ಸುಲಭ.. ಆದ್ರೆ ತನಿಖೆ ಅನ್ನೋದು ಇದ್ಯಲ್ವ, ಅಲ್ಲಿ ಎಲ್ಲವು ಜಗಜ್ಜಾಹಿರವಾಗಿ ಬಿಡುತ್ತೆ. ತಾನೇನು? ತಾನು ಕೊಟ್ಟ ಹೇಳಿಕ ಏನು? ಅನ್ನೋದನ್ನ ಆ ಒಂದು ವರದಿ ಉಲ್ಟಾ ಹೊಡೆಯುವಂತೆ ಮಾಡಿಬಿಡುತ್ತೆ. ಆ ಮೂಲಕ ಮುಖದ ಹಿಂದಿರೋ ಮತ್ತೊಂದು ಚಹರೆಯನ್ನ ಕಳಚಿ ಬಿಡುತ್ತದೆ. ಅದಕ್ಕೆ ಸಾಕ್ಷಿ ಆಗಿರೋದು ಬಾಲಿವುಡ್ ಬೆಡಗಿ ಜಾಕ್ವಲೀನ್ ಫರ್ನಾಂಡಿಸ್..
ಬಾಲಿವುಡ್ನ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ 35 ವರ್ಷದ ಜಾಕ್ವೆಲಿನ್ ಫರ್ನಾಂಡೀಸ್. ಶ್ರೀಲಂಕಾ ಮೂಲದ ಸುಂದರಿ… ಮಿಸ್ ಶ್ರೀಲಂಕಾ ಕೂಡ ಹೌದು… 2006 ರಲ್ಲಿ ಅಲ್ಲಾದೀನ್ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಾಕೆ.. ಅಂದು ಎಂಟ್ರಿ ಕೊಟ್ಟ ಜಾನೆ ಕಹಾ ಸೇ ಆಯೀ ಹೈ, ಮರ್ಡರ್ 2, ಹೌಸ್ಫುಲ್ 2, ರೇಸ್ 2 , ಕಿಕ್, ರಾಯ್, ಬ್ರದರ್ಸ್ ಹೌಸ್ಫುಲ್ 3, ರೇಸ್ 3 ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಿ-ಟೌನ್ ಸೂಪರ್ಸ್ಟಾರ್ಗಳಾದ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ವರುಣ್ ಧವನ್, ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ.
ಇಷ್ಟೆಲ್ಲಾ ಹಿಸ್ಟರಿ ಇರೋ ನಟಿ ಈಗ ಮಿಸ್ಟರಿ ಆಗಿಬಿಟ್ಟಿದ್ದಾರೆ. ಅದು ಮೊದಲಿಗೆ ಒಂದು ಫೋಟೋದಿಂದ ತಗ್ಲಾಕಿಕೊಂಡಿದ್ದರು. ಆ ಫೋಟೋ ಇದೆ ನೋಡಿ.. ಕೆಲ ದಿನಗಳ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದನ್ನು ಈ ಫೋಟೋ ಮಾಡಿತ್ತು. 200 ಕೋಟಿ ರುಪಾಯಿ ಅಕ್ರಮ ವರ್ಗಾವಣೆ ಮಾಡಿ ಆ ಹಣವನ್ನ ಬಿಟ್ ಕಾಯಿನ್ನಲ್ಲಿ ಹೂಡಿಕೆ ಮಾಡಿದ್ದ ಆರೋಪ ಕೇಳಿ ಬಂದಿದ್ದ ಬಳಿಕವೇ ಈ ಫೋಟೋ ಹರಿದಾಡಿತ್ತು. ಅಚ್ಚರಿ ಏನಪ್ಪ ಅಂದ್ರೆ ಆ ಆರೋಪ ಹೊತ್ತಿದ್ದ ವ್ಯಕ್ತಿಯೇ ಈ ಫೋಟೋ ಬಹಿರಂಗ ಪಡಿಸಿದ್ದ ಅನ್ನೋದು ಕೆಲ ದಿನಗಳ ಹಿಂದೆಯೇ ತಿಳಿದು ಬಂದಿತ್ತು. ಆದ್ರೆ ಈಗ ಅದಕ್ಕೆ ಪುಷ್ಟಿ ನೀಡುವಂತಹ ಮತ್ತೊಂದು ಬೆಳವಣಿಗೆಯೊಂದು ನಡೆದಿದೆ. ಅದು ತಾನು ಅವಳಲ್ಲ, ತನಗೂ ಅದಕ್ಕು, ಆರೋಪಿ ಮಾಡಿದ್ದ ಆರೋಪಕ್ಕು ಯಾವುದೇ ಸಂಬಂಧ ಇಲ್ಲ ಅಂತಿದ್ದವಳ ಅಸಲಿ ಕಹಾನಿ ರಿವೀಲ್ ಆಗಿದೆ.
ಅಸಲಿ ಕಹಾನಿ ರಿವೀಲ್ ಮಾಡಿದೆ ಚಾರ್ಜ್ಶೀಟ್..
ಹೌದು.. 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿ ಸುಕೇಶ್ ಚಂದ್ರಶೇಖರ್ ನನ್ನ ಬಂಧಿಸಿ ಇಡಿ ವಿಚಾರಣೆ ನಡೆಸಿತ್ತು. ಆಗ ಆತ ತಾನು ಹಣವನ್ನ ಹೇಗೆಲ್ಲ ಖರ್ಚು ಮಾಡುತ್ತಿದ್ದೆ ಅನ್ನೋದನ್ನ ಎಳೆ ಎಳೆಯಾಗಿ ಬಾಯಿ ಬಿಟ್ಟಿದ್ದ. ಆ ಸಂಧರ್ಭದಲ್ಲಿಯೇ ನೋಡಿ ಕೇಳಿ ಬಂದ ಹೆಸರು ಈ ಶ್ರೀಲಂಕಾ ಬೆಡಗಿ ಬಾಲಿವುಡ್ ಬ್ಯೂಟಿ ಜಾಕ್ವಲೀನ್ ಫರ್ನಾಂಡಿಸ್..
ಯಾವಾಗ ದಕ್ಷಿಣ ಭಾರತದ ಖ್ಯಾತ ಉದ್ಯಮಿ ಚಂದ್ರಶೇಖರ್ ಹಾಗು ಪತ್ನಿ ಲೀನಾ ಮರಿಯಾ ಪಾಲ್ ಇಡಿ ಕೈಗೆ ತಗ್ಲಾಕಿಕೊಂಡಿದ್ದರೋ ಆಗಲೇ ತನಿಖೆ ಚುರುಕುಗೊಂಡಿತ್ತು. 200 ಕೋಟಿ ಅಕ್ರಮ ವರ್ಗವಾಣೆ ಕೇಸ್ಗೆ ಸಂಬಂಧ ಪಟ್ಟಂತೆ ದಂಪತಿ ಕೊಟ್ಟಿದ್ದ ಮಾಹಿತಿಯನ್ನ ಆಧರಿಸಿ ಇಬ್ಬರು ನಟಿ ಮಣಿಯರಿಗೆ ನೋಟಿಸ್ ಅನ್ನ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು ಇಡಿ. ನೋರಾ ಫತೇಹಿ ಹಾಗು ಜಾಕ್ವಲೀನ್ ಫರ್ನಾಂಡಿಸ್ ಇಬ್ಬರೂ ಕೂಡ ವಿಚಾರಣೆಗೆ ಹಾಜರಾಗಿದ್ದರು. ಆ ಸಂದರ್ಭದಲ್ಲಿ ಚಂದ್ರಶೇಖರ್ ಕೊಟ್ಟಿದ್ದ ಹೇಳಿಕೆಯನ್ನ ಆಧರಿಸಿ ಕೆಲ ಪ್ರಶ್ನೆಗಳನ್ನ ಇಡಿ ಮಾಡಿತ್ತು.
ವಿಚಾರಣೆ ವೇಳೆ ಚಂದ್ರಶೇಖರ್ ಹೇಳಿದ್ದೇನು?
ನಟಿ ಜಾಕ್ವಲೀನ್ ಫರ್ನಾಂಡಿಸ್ ತಿಳಿಸಿದ್ದೇನು?
ಇಡಿ ಮುಂದೆ ಚಂದ್ರಶೇಖರ್ ತಾನು, ನಟಿ ಜಾಕ್ವಲೀನ್ ಫರ್ನಾಂಡಿಸ್ಗೆ ಬೆಲೆ ಬಾಳೋ ಕಾರನ್ನ ಕೊಟ್ಟಿದ್ದೇನೆ, ಅವಳಿಗಾಗಿ ನಾನು ಪ್ರವೇಟ್ ಜೆಟ್ ಬುಕ್ ಮಾಡಿ ಅದರಿಂದ ಚೆನ್ನೈಗೆ ಕರೆಸಿಕೊಳ್ಳುತ್ತಿದ್ದೆ ಹಾಗೆ ಹೀಗೆ ಅಂತಾಲ್ಲೆ ಹೇಳಿಕೆಯನ್ನ ಕೊಟ್ಟಿದ್ದ. ಆಗ ಇದರ ಸತ್ಯಾ ಸತ್ಯತೆ ಅರಿಯಲು ಇಡಿ ನೋಟಿಸ್ ಅನ್ನ ಜಾರಿ ಸುಂದರಿಗೆ ವಿಚಾರಣೆಗೆ ಹಾಜರಾಗುವಂತೆ ಹೇಳಿತ್ತು. ಆದ್ರೆ ನಾನಾ ಕಾರಣಗಳನ್ನ ಕೊಟ್ಟಿದ್ದ ಜಾಕ್ವಲೀನ್ ಮಾತ್ರ ಮೂರು ಬಾರಿ ವಿಚಾರಣೆಗೆ ತಪ್ಪಿಸಿಕೊಂಡಿದ್ದರು. ಆದ್ರೆ ಬಳಿಕ ವಿಚಾರಣೆಗೆ ಹಾಜರಾಗಿ ED ಕೇಳಿದ್ದ ಪ್ರಶ್ನೆಗಳಿಗೆ ಉತ್ತರಿಸಿದ್ದಳು.
ಬಳಿಕ ಪ್ರಕರಣಕ್ಕೂ ನನಗೂ ಸಂಬಂಧವೇ ಇಲ್ಲಾ, ನಂಗೆ ಸುಕೇಶ್ ಯಾರು ಅಂತಾನೆ ಗೊತ್ತಿಲ್ಲ ಅನ್ನೋ ಅರ್ಥದಲ್ಲಿ ಹೇಳಿಕೆ ಕೊಡೋ ಮೂಲಕ ಆ ಕ್ಷಣಕ್ಕೆ ನಯವಾಗಿ ಜಾರಿಕೊಳ್ಳೋ ಮಾತುಗಳನ್ನಾಡಿದ್ದರು. ನನ್ನನ್ನ ಸಿಲುಕಿಸೋ ಷಡ್ಯಂತ್ರ ಇದೆಲ್ಲಾ ಅಂತಾ ಶಾಕಿಂಗ್ ಹೇಳಿಕೆಯನ್ನ ಕೊಟ್ಟಿದ್ದರು. ಅದನ್ನ ಕೇಳಿದ್ದ ಜನ ಇರಬೋದೆನೋ ಅಂತಾ ಅಂದುಕೊಂಡಿದ್ದರು. ಆದ್ರೆ ಈಗ ED ಸಲ್ಲಿಸಿರೋ ಚಾರ್ಜ್ಶೀಟ್ನಲ್ಲಿ ಅಸಲಿಯತ್ತೇನು ಅನ್ನೋದು ಬಹಿರಂಗಗೊಂಡಿದೆ.
7000 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ
200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿ ಸುಕೇಶ್ ಚಂದ್ರಶೇಖರ್ ಅವರ ಪತ್ನಿ ನಟಿ ಲೀನಾ ಮರಿಯಾ ಪಾಲ್ ಮತ್ತು ಇತರ ಆರು ಮಂದಿ ವಿರುದ್ಧ ಜಾರಿ ನಿರ್ದೇಶನಾಲಯ 7,000 ಪುಟಗಳ ಆರೋಪಪಟ್ಟಿ ಸಲ್ಲಿಸಿದೆ. ಈ ಒಂದು ಚಾರ್ಜ್ ಶೀಟ್ ಸಲ್ಲಿಕೆ ಆಯ್ತೋ ಅಲ್ಲಿಯವರೆಗೆ ಜಾಕ್ವಲೀನ್ ಹೇಳಿದ್ದೇ ಸರಿ ಅನ್ನುತ್ತಿದ್ದವರು ಈಗ ಮೂಗಿನ ಮೇಲೆ ಬೆರಳನ್ನ ಇಟ್ಟುಕೊಂಡು ಎಲಾ ಇವಳ ಒಳಗೊಂದು ಹೊರಗೊಂದು ಮಾತಾಡಿ ಮಂಗ ಮಾಡಿದ್ದಳಲ್ಲಪ್ಪ ಅಂತಾ ಅಂದುಕೊಳ್ಳುತ್ತಿದ್ದಾರೆ.
ED ಸಲ್ಲಿಸಿರೋ ಚಾರ್ಜ್ಶೀಟ್ನಲ್ಲಿ ಏನಿದೆ ಗೊತ್ತಾ?
ED ಸಲ್ಲಿಸಿರೋ ಆರೋಪಪಟ್ಟಿಯ ಪ್ರಕಾರ, ವರದಿಗಳ ಪ್ರಕಾರ, ಸುಕೇಶ್ ಅವರು ಜಾಕ್ವೆಲಿನ್ಗೆ ಹಲವಾರು ಕೋಟಿ ಮೌಲ್ಯದ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದರು ಎಂದು ಅಧಿಕಾರಿಗಳ ವಿಚಾರಣೆಯ ಸಮಯದಲ್ಲಿ ಬಹಿರಂಗಪಡಿಸಿದ್ದಾರೆ. ನೋರಾ ಫತೇಹಿಗೆ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿರುವುದಾಗಿಯೂ ಹೇಳಿಕೊಂಡಿದ್ದಾನೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
10 ಕೋಟಿ ಖರ್ಚು ಮಾಡಿದ್ದ ಭೂಪ
ಕೋಟಿ ಕೋಟಿ ಬೆಲೆ ಬಾಳೋ ಗಿಫ್ಟ್ ಕೊಟ್ಟಿದ್ದ ಸುಕೇಶ್
2021 ರಲ್ಲಿ ಇಬ್ಬರ ಪರಸ್ಪರ ಮಾತಾಡಲು ಪ್ರಾರಂಭಿಸಿದ್ರು
10 ಕೋಟಿ ರೂಪಾಯಿಗೂ ಹೆಚ್ಚು ದುಬಾರಿ ಉಡುಗೊರೆ
ವಜ್ರದ ಆಭರಣ, ಸೆಟ್ಗಳು, ಪಾತ್ರೆಗಳನ್ನ ಕೊಟ್ಟಿದ್ದರಂತೆ
ಇನ್ನು ಚಾರ್ಜ್ಶೀಟ್ನಲ್ಲಿರೋ ವರದಿ ಪ್ರಕಾರ ಜಾಕ್ವೆಲಿನ್ ಗೆ ಕೋಟಿ ಕೋಟಿ ಬೆಲೆ ಬಾಳೋ ಉಡುಗೊರೆಗಳನ್ನು ಸುಕೇಶ್ ಕೊಟ್ಟಿದ್ದ ಅನ್ನೋದನ್ನ ತಿಳಿಸಿಲಾಗಿದೆ. ಸುಕೇಶ್ ಮತ್ತು ಜಾಕ್ವೆಲಿನ್ ಜನವರಿ 2021 ರಲ್ಲಿ ಪರಸ್ಪರ ಮಾತನಾಡಲು ಪ್ರಾರಂಭಿಸಿದರು, ನಂತರ ಅವರು ಅವರಿಗೆ 10 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ದುಬಾರಿ ಉಡುಗೊರೆಗಳನ್ನು ಕಳುಹಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಅಬ್ಬಾಬ್ಬ. ಬರೋಬ್ಬರಿ ಹತ್ತು ಕೋಟಿ ಮೌಲ್ಯದ ಗಿಫ್ಟ್ ಅಂದ್ರೆ ಸುಮ್ಮನೇನಾ. ನಿಮಗೆ ಈಗ ಅನ್ನಿಸುತ್ತಿರಬೋದು.. ವಜ್ರ ಅದು ಇದು ಅಂತಾ ಲೆಕ್ಕಾ ಹಾಕಿದ್ರು ಅಷ್ಟು ಆಗೋದಿಲ್ಲ, ಮತ್ತೆ ಬೇರೆ ಇನ್ನೇನನ್ನ ಕೊಟ್ಟಿರಬಹುದು. ಅದಕ್ಕು ಇಡಿ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿಲಾಗಿದೆ. ಹಾಗಾದ್ರೆ ಏನಿರಬಹುದು ಅದು.
ಅರ್ಧ ಕೋಟಿ ಬೆಲ ಬಾಳೋ ಕುದುರೆ ಗಿಫ್ಟ್
ಹತ್ತಾರು ಲಕ್ಷ ಬೆಲೆಯ 4 ಪರ್ಶಿಯನ್ ಕ್ಯಾಟ್
ಹೌದು.. ಇವರದ್ದು ಒಂಥರಾ ಕಾಸ್ಟಲಿ ಫ್ರಂಡ್ ಶಿಪ್. ಈ ಫ್ರೆಂಡ್ಶೀಪ್ಗೆ ಸಾವಿರಕ್ಕೆ ಬೆಲೆನೇ ಇಲ್ಲ. ಬರೀ ಲಕ್ಷ ಲಕ್ಷ ಮೀರಿದ್ರೆ ಕೋಟಿ ಕೋಟಿ.. ಸುಕೇಶ್ ಜಾಕ್ವಲೀನ್ಗೆ ಒಂದು ಕುದುರೆ ಗಿಫ್ಟ್ ಅನ್ನ ಕೊಟ್ಟಿದ್ದಾರಂತೆ. ಅದರ ಬೆಲೆನೆ 52 ಲಕ್ಷ ಅಂತಾ ಹೇಳಲಾಗಿದೆ. ಅಲ್ಲದೆ ಕ್ಯೂಟಾಗಿದ್ದ ಜಾಕ್ವಲೀನ್ ಅನ್ನ ಮೆಚ್ಚಿಸಲು ನಾಲ್ಕು ಕ್ಯೂಟ್ ಕ್ಯೂಟ್ ಕ್ಯಾಟ್ಗಳನ್ನ ಗಿಫ್ಟ್ ಕೊಟ್ಟಿದರಂತೆ. ಅದು ಒಂದು ಬೆಕ್ಕಿನ ಬೆಲೆಯೇ 9 ಲಕ್ಷ ಅಂತೆ. ಅದು ಅಂತಿಂಥ ಬೆಕ್ಕಲ್ಲ ರೀ, ಪರ್ಶೀಯನ್ ಕ್ಯಾಟ್ ಎಂದು ಇಡಿ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಿಗೆ ಸಲ್ಲಿಕೆ
ಸೂಕ್ತ ಸಲಹೆ ಪಡೆದುಕೊಂಡು ನಂತರ ಸಲ್ಲಿಕೆ
ಇಡಿ ಅಧಿಕಾರಿಗಳು ಇಷ್ಟು ದಿನ ನಡೆಸಿದ್ದ ತನಿಖೆಗೆ ಸಂಬಂಧ ಪಟ್ಟಂತೆ 7000 ಪುಟಗಳ ಚಾರ್ಜ್ ಶೀಟ್ ಅನ್ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪ್ರವೀಣ್ ಸಿಂಗ್ ಅವರ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಚಾರ್ಜ್ ಶೀಟ್ ಸಲ್ಲಿಸುವ ಮೊದಲು ಇಡಿ ಪ್ರಾಸಿಕ್ಯೂಷನ್ ಮತ್ತು ಹಿರಿಯರಿಂದ ಕಾನೂನು ಅಭಿಪ್ರಾಯವನ್ನು ತೆಗೆದುಕೊಂಡು ನಂತರ ಇಡಿ ಚಾರ್ಜ್ ಶೀಟ್ ಅನ್ನ ಸಲ್ಲಿಸಿದೆ
ಪ್ರಕರಣದಲ್ಲಿ ಸಾಕ್ಷಿದಾರರು ಎಂದು ತೋರಿಸಿದ ED
ಇನ್ನು 7000 ಪುಟಗಳ ಚಾರ್ಜ್ಶೀಟ್ ಸಲ್ಲಿಸಿರೋ ಇಡಿ, 7 ಮಂದಿಯನ್ನ ಬಂಧಿಸಿದ್ದಾರೆ. ಆದ್ರೆ ಇಬ್ಬರು ನಟಿ ಮಣಿಯರನ್ನ ಮಾತ್ರ ಈ ಪ್ರಕರಣದಲ್ಲಿ ಮಹತ್ವದ ಸಾಕ್ಷಿಗಳಾಗಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಆ ಮೂಲಕ ಈಗ ತೂಗು ಕತ್ತಿಂದ ಇಬ್ಬರು ನಟಿ ಮಣಿಯರು ಬಚಾವ್ ಆದಂತಾಗಿದೆ. ಆದ್ರೆ ಮುಂದೆ ಕಾನೂನಾತ್ಮಕ ಹೋರಾಟದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತೋ ಗೊತ್ತಿಲ್ಲ.
ಇಡಿ ಪ್ರಕರಣವು ಸದ್ಯ ದೆಹಲಿ ಪೊಲೀಸರ ಪ್ರಕರಣವನ್ನ ಆಧರಿಸಿದ್ದು, ಇದು ಸುಕೇಶ್ ತನ್ನ ಉದ್ಯಮಿ ಪತ್ನಿಯಿಂದ ಸುಮಾರು 200 ಕೋಟಿ ರೂ ಹಣವನ್ನು ಹವಾಲಾ ಮೂಲಕ ಕ್ರಿಪ್ಟೋ ಕರೆನ್ಸಿ ಖರೀದಿಸಲು ಬಳಸಲಾಗಿದೆ ಎಂದು ಹೇಳಿಕೆ ನೀಡಿದ್ದಾನೆ. ಅಲ್ಲದೇ ಪ್ರದೀಪ್ ರಾಮದಾನಿ, ಬಿ ಮೋಹನ್ ರಾಜ್, ದೀಪಕ್ ರಾಮನಾನಿ, ಅರುಣ್ ಮುತ್ತು, ಕಮಲೇಶ್ ಕೊಠಾರಿ, ಅವತಾರ್ ಸಿಂಗ್ ಕೊಚ್ಚರ್, ಸುಖೇಶ್ ಚಂದ್ರಶೇಖರ್ ಮತ್ತು ಅವರ ಪತ್ನಿ ಲೀನಾ ಮರಿಯಾ ಪಾಲ್ ಅವರನ್ನು ಚಾರ್ಜ್ ಶೀಟ್ನಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿದೆ.
ಜೈಲಲ್ಲಿದ್ದುಕೊಂಡು ಲಂಚ ನೀಡುತ್ತಿದ್ದ ಆರೋಪ
ತನಿಖೆಯ ಸಂದರ್ಭದಲ್ಲಿ, ಸುಕೇಶ್ ಮತ್ತು ಆತನ ಸಹಚರರಿಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಶೋಧ ನಡೆಸಲಾಗಿತ್ತು. ಆ ಸಂದರ್ಭದಲ್ಲಿ 16 ಐಶಾರಾಮಿ ಕಾರುಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಇದರ ಜೊತೆಯಲ್ಲಿ ಜೈಲಿಗೆ ಹೋದ ಬಳಿಕ ಸುಕೇಶ್ ಲಕ್ಷ ಲಕ್ಷ ಹಣವನ್ನ ಕೊಟ್ಟು ಐಶಾರಾಮಿ ಜೀವನ ನಡೆಸಿದ್ದಾರೆ ಎಂದು ಕೂಡ ತಿಳಿದು ಬಂದಿದೆ.
ಅಂದು ನಾನು ಅಂತವಳ್ಳಲ್ಲ ಅಂದಿದ್ದ ಬಾಲಿವುಡ್ ಬೆಡಗಿಯ ಬಣ್ಣ ಈಗ ಚಾರ್ಜ್ ಶೀಟ್ ನಲ್ಲಿ ಬಹಿರಂಗ ಆಗಿದೆ. ಆದ್ರೆ ಸದ್ಯಕ್ಕೆ 200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಾಕ್ಷಿ ಆಗಿದ್ದು, 57 ಲಕ್ಷದ ಕುದುರೆ, 9 ಲಕ್ಷ ಮೌಲ್ಯದ ನಾಲ್ಕು ಬೆಕ್ಕಿನ ಕಥೆ ಏನಾಗುತ್ತೋ ಕಾದು ನೋಡಬೇಕು.