ನ್ಯೂಜಿಲೆಂಡ್ ಸರಣಿಗೆ ಈಗಾಗಲೇ ಟೀಮ್ ಇಂಡಿಯಾ ಪ್ರಕಟಗೊಂಡಿದೆ. ನಿರೀಕ್ಷೆಯಂತೆ ಆಯ್ಕೆ ಸಮಿತಿ ಯುವಕರಿಗೇ ಹೆಚ್ಚು ಆದ್ಯತೆ ನೀಡಿದೆ. ಆದ್ರೆ ಅಟ್ಯಾಕಿಂಗ್ ಬ್ಯಾಟಿಂಗ್ ಹೊಂದಿರುವ ಈತನನ್ನ ಆಯ್ಕೆ ಮಾಡದೆ, ಆತನ ಭವಿಷ್ಯವನ್ನ ಸಂಕಷ್ಟಕ್ಕೆ ಸಿಲುಕಿಸಿದೆ.
ನ್ಯೂಜಿಲೆಂಡ್ ಟಿ20 ಸರಣಿಗೆ ಟೀಮ್ ಇಂಡಿಯಾ ಪ್ರಕಟಗೊಂಡಿದೆ. ಈ ಚುಟುಕು ಕದನಕ್ಕೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಯುವ ಆಟಗಾರರಿಗೆ ಹೆಚ್ಚು ಮಣೆ ಹಾಕಲಾಗಿದೆ. ಕೆಲ ಆಟಗಾರರು ಅಚ್ಚರಿ ಎಂಬಂತೆ ಆಯ್ಕೆಯಾಗಿದ್ದಾರೆ. ಆದರೆ ಇದರ ಮಧ್ಯೆ ಟೀಮ್ ಇಂಡಿಯಾದ ಅನುಭವಿ ಆಟಗಾರನೊಬ್ಬನ ಭವಿಷ್ಯ, ಸಂಕಷ್ಟಕ್ಕೆ ಸಿಲುಕಿದೆ. ಆ ಆಟಗಾರ ಬೇಱರು ಅಲ್ಲ, ಡ್ಯಾಶಿಂಗ್ ಓಪನರ್ ಶಿಖರ್ ಧವನ್.
ಶಿಖರ್ ಧವನ್ T20 ಕರಿಯರ್ಗೆ ಬಿತ್ತಾ ಬ್ರೇಕ್..?
ಯೆಸ್.. ಇಂಥಹದೊಂದು ಅನುಮಾನ ಸದ್ಯ ಎಲ್ಲರಲ್ಲೂ ಕಾಡ್ತಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಪ್ರಕಟಗೊಂಡ ತಂಡದಲ್ಲಿ ಸ್ಥಾನ ನೀಡದಿರೋದೇ, ಇದಕ್ಕೆ ಕಾರಣ. ಧವನ್ ಶಾರ್ಟ್ ಫಾರ್ಮ್ಯಾಟ್ನಲ್ಲಿ ತಂಡದ ಅವಿಭಾಜ್ಯ ಅಂಗ. ಕನ್ಸಿಸ್ಟೆಂಟ್ ಪ್ರದರ್ಶನದ ಮೂಲಕ ತಂಡದ ಅಪದ್ಬಾಂಧವ ಕೂಡ ಹೌದು. ಆದರೆ ಅದ್ಭುತ ಪ್ರದರ್ಶನದ ನಡುವೆಯೂ, ಕಿವೀಸ್ ಸರಣಿಗೂ ಆಯ್ಕೆ ಮಾಡದೇ ಇರೋದು, ಧವನ್ ಟಿ20 ಕರಿಯರ್ ಇಲ್ಲಿಗೆ ಮುಗೀತಾ ಎಂಬ ಪ್ರಶ್ನೆ ಹುಟ್ಟು ಹಾಕಿದೆ.
ಇಂಗ್ಲೆಂಡ್ ಸರಣಿಯಲ್ಲಿ ಬೆಂಚ್, ವಿಶ್ವಕಪ್ಗೂ ಆಯ್ಕೆಯಾಗಿರಲಿಲ್ಲ ಗಬ್ಬರ್..!
ಈ ಬಾರಿಯ IPLಗೂ ಮುನ್ನ ನಡೆದ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲೂ ಧವನ್ರನ್ನ ಬೆಂಚ್ಗೆ ಸೀಮಿತ ಮಾಡಲಾಗಿತ್ತು. ಬಳಿಕ 14ನೇ ಆವೃತ್ತಿಯ IPLನಲ್ಲಿ ಗಬ್ಬರ್, ಅಸಾಧಾರಣ ಪ್ರದರ್ಶನ ತೋರಿದ್ರು. ಆದ್ರೂ ಧವನ್ರನ್ನ ಟಿ20 ವಿಶ್ವಕಪ್ಗೆ ಸೆಲೆಕ್ಟ್ ಮಾಡಿರಲಿಲ್ಲ. ಇದೀಗ ಕಿವೀಸ್ ಸರಣಿಗೂ ಅವರನ್ನ ಕೈ ಬಿಡಲಾಗಿದೆ. ಇಂಗ್ಲೆಂಡ್ ಸರಣಿಯಲ್ಲಿ ಮುಚ್ಚಿದ ಧವನ್ರ T20 ಕರಿಯರ್ ಬಾಗಿಲು, ಇಂದಿಗೂ ತೆರೆದಿಲ್ಲ. ಅಂದರೆ ಇದು ಧವನ್ರ ವೃತ್ತಿ ಜೀವನ ಅಂತ್ಯದತ್ತ ಸಾಗಿದೆ ಎಂಬುದನ್ನ ಸೂಚಿಸ್ತಿದೆ.
ಈ ವರ್ಷ T20Iನಲ್ಲಿ ಧವನ್
- ಪಂದ್ಯ 04
- ರನ್ 90
- ಬೆಸ್ಟ್ 46
- ಸರಾಸರಿ 22.50
14ನೇ ಆವೃತ್ತಿಯ IPLನಲ್ಲಿ ಧವನ್
- ಪಂದ್ಯ 16
- ರನ್ 587
- ಬೆಸ್ಟ್ 92
- ಸರಾಸರಿ 39.13
ಭವಿಷ್ಯದ ತಂಡ ಕಟ್ಟುವ ದೃಷ್ಟಿಯಿಂದ ಯುವಕರಿಗೆ ಹೆಚ್ಚು ಮಣೆ..!
ಟೀಮ್ ಇಂಡಿಯಾದಲ್ಲಿ ಧವನ್-ರೋಹಿತ್ ಜೋಡಿ ಕೂಡ ಉತ್ತಮ ಓಪನಿಂಗ್ ನೀಡಿದರೂ, ರಾಹುಲ್-ರೋಹಿತ್ ಜೋಡಿಯೇ ಎಲ್ಲರನ್ನೂ ಅಟ್ರ್ಯಾಕ್ಟ್ ಮಾಡ್ತಿದೆ. ಹಾಗಾಗಿ ಧವನ್ರನ್ನ ಆಯ್ಕೆ ಮಾಡದಿರಲು, ಇದೂ ಒಂದು ಕಾರಣವಾಗಿದೆ. ಹಾಗಂತ ಧವನ್ ಅದ್ಭುತ ಪ್ರದರ್ಶನ ನೀಡಿಲ್ಲವೆಂದಲ್ಲ. IPL ಮತ್ತು ಈ ಹಿಂದಿನ ಸರಣಿಗಳಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಭವಿಷ್ಯದ ತಂಡ ಕಟ್ಟುವ ದೃಷ್ಟಿಯಿಂದ BCCI ಯುವಕರತ್ತ ಒಲವು ತೋರಿದೆ.
ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ವೆಂಕಟೇಶ್ ಅಯ್ಯರ್, ಅದ್ಭುತ ಆಟದಿಂದ ಧವನ್ಗೆ ವಿಲನ್ಗಳಾಗಿ ಮಾರ್ಪಟ್ಟಿದ್ದಾರೆ. ಹೀಗಾಗಿ ಮುಂದಿನ ಸರಣಿಗಳಿಗೂ ಧವನ್ ಆಯ್ಕೆ ಅಸಾಧ್ಯ ಅಂತಾನೇ ಹೇಳಲಾಗ್ತಿದೆ. ಹಾಗಾಗಿ ಧವನ್ ಟಿ20 ಕರಿಯರ್ ಇಲ್ಲಿಗೆ ಮುಗೀತಾ ಅನ್ನೋ ಪ್ರಶ್ನೆ, ಇದೀಗ ಅಭಿಮಾನಿಗಳಲ್ಲಿ ಉದ್ಭವವಾಗಿದೆ.