ಸಂಕಷ್ಟದಲ್ಲಿದ್ದ ಅಲ್ಲು ಅರ್ಜುನ್​ ಸಹಾಯಕ್ಕೆ ನಿಂತ ‘ಕೆಜಿಎಫ್​ 2’ ನಟಿ ರವೀನಾ ಟಂಡನ್​ ಕುಟುಂಬ | Raveena Tandon Husband Anil Thadani to distribute Pushpa Movie In Hindi


ಸಂಕಷ್ಟದಲ್ಲಿದ್ದ ಅಲ್ಲು ಅರ್ಜುನ್​ ಸಹಾಯಕ್ಕೆ ನಿಂತ ‘ಕೆಜಿಎಫ್​ 2’ ನಟಿ ರವೀನಾ ಟಂಡನ್​ ಕುಟುಂಬ

ಅಲ್ಲು ಅರ್ಜುನ್​-ರವೀನಾ

ಅಲ್ಲು ಅರ್ಜುನ್ (Allu Arjun)​ ನಟನೆಯ ‘ಪುಷ್ಪ’ ಸಿನಿಮಾ (Pushpa Movie) ತೆಲುಗು ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ಡಬ್​ ಆಗಿ ತೆರೆಕಾಣುತ್ತಿದೆ. ಸಿನಿಮಾ ರಿಲೀಸ್​ ಆಗೋಕೆ ಇನ್ನು ಒಂದು ತಿಂಗಳು ಮಾತ್ರ ಬಾಕಿ ಇದೆ. ಅದಕ್ಕೂ ಮೊದಲು ಚಿತ್ರತಂಡ ಸಂಕಷ್ಟಕ್ಕೆ ಸಿಲುಕಿತ್ತು. ಹಿಂದಿ ಅವತರಣಿಕೆ ರಿಲೀಸ್​ ಮಾಡೋಕೆ ಕೆಲ ಅಡಚಣೆಗಳು ಉಂಟಾಗಿದ್ದವು. ಆದರೆ, ಈ ಸಮಸ್ಯೆಗಳು ಈಗ ಪರಿಹಾರವಾಗಿದೆ. ಗೋಲ್ಡ್​ಮೈನ್​ ಫಿಲ್ಮ್ಸ್ ಸಂಸ್ಥೆ​ ‘ಪುಷ್ಪ’ದ ಹಿಂದಿ ಅವತರಣಿಕೆಯನ್ನು ಡಿಸೆಂಬರ್​ 17ರಂದೇ ಬಿಡುಗಡೆ ಮಾಡುತ್ತಿದೆ. ಖುಷಿಯ ವಿಚಾರ ಎಂದರೆ ಈ ಸಿನಿಮಾಗೆ ರವೀನಾ ಟಂಡನ್​ ಕುಟುಂಬದಿಂದ ಬೆಂಬಲ ಸಿಕ್ಕಿದೆ.

ಸುಕುಮಾರ್​ ನಿರ್ದೇಶನದ ಸಿನಿಮಾ ಎಂದರೆ ಅಲ್ಲೊಂದು ಅದ್ದೂರಿತನ ಇದ್ದೇ ಇರುತ್ತದೆ. ಈ ಬಾರಿ ಅವರು ಖ್ಯಾತ ನಟ ಅಲ್ಲು ಅರ್ಜುನ್​ ಜತೆ ಕೈ ಜೋಡಿಸಿದ್ದಾರೆ. ಈ ಕಾರಣಕ್ಕೆ ನಿರೀಕ್ಷೆ ಡಬಲ್​ ಆಗಿದೆ. ಈಗಾಗಲೇ ರಿಲೀಸ್​ ಆಗಿರುವ ‘ಪುಷ್ಪ’ ಟೀಸರ್​ ಹಾಗೂ ಪೋಸ್ಟರ್​ಗಳು ಸಿನಿಮಾ ಮೇಲಿನ ನಿರೀಕ್ಷೆಯನ್ನು ಡಬಲ್​ ಮಾಡಿದೆ. ಡಿಸೆಂಬರ್​ 17ರಂದು ‘ಪುಷ್ಪ’ ಸಿನಿಮಾ ತೆರೆಗೆ ಬರುತ್ತಿದೆ. ಆದರೆ, ಹಿಂದಿ ಅವತರಣಿಕೆ ವಿಳಂಬವಾಗಲಿದೆ ಎನ್ನುವ ಸುದ್ದಿ ಹರಿದಾಡಿತ್ತು. ನಿರ್ಮಾಪಕರು ಎಲ್ಲಾ ಸಮಸ್ಯೆಗಳನ್ನೂ ಪರಿಹಾರ ಮಾಡಿದ್ದಾರೆ. ಆದರೆ, ಕೇವಲ ಒಂದು ತಿಂಗಳು ಸಮಯಾವಕಾಶ ಇರುವುದರಿಂದ ಹಿಂದಿಯಲ್ಲಿ ಸಿನಿಮಾಗೆ ಹೆಚ್ಚು ಪ್ರಚಾರ ನೀಡೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಗೋಲ್ಡ್​ಮೈನ್​ ಫಿಲ್ಮ್ಸ್ ಎಎ ಫಿಲ್ಸ್ಮ್ಸ್​ ಜತೆ ಕೈ ಜೋಡಿಸಿದೆ.

ಎಎ ಫಿಲ್ಸ್ಮ್ಸ್​ ಒಡೆತನ ರವೀನಾ ಟಂಡನ್​ ಪತಿ ಅನಿಲ್​ ಥಡಾನಿ ಕೈಯಲ್ಲಿದೆ. ‘ಬಾಹುಬಲಿ 2’, ‘ಸಾಹೋ’ ಸಿನಿಮಾಗಳನ್ನು ಉತ್ತರ ಭಾರತದಲ್ಲಿ ಹಂಚಿಕೆ ಮಾಡಿದ ಅನುಭವ ಅನಿಲ್​ಗೆ ಇದೆ. ಹೀಗಾಗಿ ಅವರಿಗೆ ಕಾಂಟ್ಯಕ್ಟ್ಸ್​ ಕೂಡ ಹೆಚ್ಚಿದೆ. ಈ ಕಾರಣಕ್ಕೆ ಗೋಲ್ಡ್​ಮೈನ್​ ಫಿಲ್ಮ್ಸ್​ ಅನಿಲ್​ ಜತೆ ಕೈ ಜೋಡಿಸಿದೆ. ಈ ಮೂಲಕ ‘ಪುಷ್ಪ’ ಚಿತ್ರ ಬಾಲಿವುಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ: ‘ರಶ್ಮಿಕಾ ಊಟ’ ಮಾರಾಟಕ್ಕಿದೆ; ಇದನ್ನು ತಿನ್ನೋದು ಹೇಗೆ? ವಿಡಿಯೋ ಸಮೇತ ವಿವರಿಸಿದ ನಟಿ

TV9 Kannada


Leave a Reply

Your email address will not be published. Required fields are marked *