ಸಂಚಾರಿ ವಿಜಯ್ ಸಿನಿಮಾ ಕ್ಷೇತ್ರದಲ್ಲಿ ಮಿಂಚಿದ್ದಷ್ಟೇ ಅಲ್ಲದೆ, ಸಾಮಾಜಿಕ ಕಾರ್ಯಗಳನ್ನೂ ಮಾಡುವ ಮೂಲಕ ಹಲವು ಜನರ ಸಂಕಷ್ಟಕ್ಕೆ ನೆರವಾಗಿದ್ದರು. ಕಳೆದ ವರ್ಷ ಡಿಸೆಂಬರ್​ನಲ್ಲಿ ಕೋವಿಡ್ ಸಂಕಷ್ಟದಲ್ಲಿದ್ದ ಹಿರಿಯ ಚಿತ್ರ ಸಾಹಿತಿ ದಿವಂಗತ ಶ್ರೀರಂಗ ಅವರ ಮನೆಗೇ ತೆರಳಿ  ಸಂಚಾರಿ ವಿಜಯ್ ಸಹಾಯ ಮಾಡಿದ್ದರು.

ಕಾರ್ಯಕ್ರಮವೊಂದರಲ್ಲಿ ಶ್ರೀರಂಗ ಅವರನ್ನು ವಿಜಯ್ ಭೇಟಿ ಮಾಡಿದ್ದರು. ಈ ವೇಳೆ ಪಕ್ಕದಲ್ಲಿ ಕೂತಿದ್ದವರೊಬ್ಬರು ಸಂಚಾರಿ ವಿಜಯ್ ಅವರಿಗೆ ಶ್ರೀರಂಗ ಅವರು ಸಂಕಷ್ಟಲ್ಲಿರುವುದನ್ನ ತಿಳಿಸಿ ಅವರಿಗೆ ಏನಾದರೂ ಸಹಾಯ ಮಾಡಬಹುದಾ ಎಂದು ಕೇಳಿದ್ದರು. ಇದನ್ನ ಕೇಳಿದ  ವಿಜಯ್ ನೇರವಾಗಿ ಶ್ರೀರಂಗ ಅವರ ಮನೆಗೆ ತೆರಳಿ ಅವರ ಕುಶಲೋಪರಿ ವಿಚಾರಿಸಿ ತಮ್ಮ ಕೈಲಾದ ಸಹಾಯ ಮಾಡಿದ್ದರು. ಅಷ್ಟೇ ಅಲ್ಲದೆ ತಮ್ಮ ಫೇಸ್​ಬುಕ್ ಖಾತೆಯಲ್ಲಿ ಶ್ರೀರಂಗ ಅವರಿಗೆ ಸಹಾಯ ಮಾಡುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದರು.

ದುರಂತ ಎಂದರೆ ಕಳೆದ ಮೇ ತಿಂಗಳಲ್ಲಿ ವಯೋಸಹಜ ಖಾಯಿಲೆಯಿಂದಾಗಿ ಶ್ರೀರಂಗ ಇಹಲೋಕ ತ್ಯಜಿಸಿದರು. ಇದೀಗ ಮತ್ತೊಂದು ದುರಂತ ಎಂಬಂತೆ ಅಪಘಾತದಿಂದಾಗಿ ಸಂಚಾರಿ ವಿಜಯ್ ಅವರೂ ಸಹ ಕೊನೆಯುಸಿರೆಳೆದಿದ್ದಾರೆ.

The post ಸಂಕಷ್ಟದಲ್ಲಿದ್ದ ಚಿತ್ರಸಾಹಿತಿ ಶ್ರೀರಂಗ ಅವರ ಮನೆಗೇ ತೆರಳಿ ನೆರವು ಚಾಚಿದ್ದರು ವಿಜಯ್ appeared first on News First Kannada.

Source: newsfirstlive.com

Source link