ಬೆಂಗಳೂರು: ಕೊರೊನಾದ ಸಂಕಷ್ಟ ಕಾಲದಲ್ಲಿ ಜೀವನ ನಡೆಸಲು ಪರಿತಪಿಸುತ್ತಿರುವ ಹಾಗೂ ಅಗತ್ಯತೆ ಇರುವ 118 ಕಲಾವಿದರಿಗೆ ಕಲಾವೇದಿಕೆ ಟ್ರಸ್ಟ್​ ವತಿಯಿಂದ ಇಂದು ಫುಡ್​ ಕಿಟ್​ ವಿತರಣೆ ಮಾಡಲಾಗಿದೆ.

ಹಿರಿಯ ಕಲಾವಿದ ಶ್ರೀನಾಥ್​ ವಸಿಷ್ಟ ಕಲಾವಿದರಿಗೆ ಆಹಾರ ಕಿಟ್​ ವಿತರಣೆ ಮಾಡಿದ್ದು ಸರ್ಕಾರ ನೀಡಿರುವ ನಿಗದಿತ ಸಮಯದಲ್ಲಿ ಫುಡ್​ ಕಿಟ್​ ವಿತರಣೆಯಾಗಿದೆ. ಕಲಾವಿದರ ಸಂಘದಲ್ಲಿ ಮೆಂಬರ್​ ಆದವರಿಗೆ ಈಗಾಗಲೇ ಕೆಲ ಕಡೆಯಿಂದ ಫುಡ್​ ಕಿಟ್​ ದೊರೆತಿದೆ. ಆದ್ರೆ ಈ ಯಾವ ಸಂಘದಲ್ಲೂ ಮೆಂಬರ್​ ಇಲ್ಲದ ಕಲಾವಿದರಿಗೆ ಶ್ರೀನಾಥ್ ವಸಿಷ್ಠ ಫುಡ್ ಕಿಟ್ ವಿತರಣೆ ಮಾಡಿದ್ದಾರೆ.

ಸಂಕಷ್ಟದಲ್ಲಿರುವ ಕಲಾವಿದರ ಪಟ್ಟಿ ಮಾಡಿ, ಅವರಿಗೆ ಫೋನ್​ ಮೂಲಕ ಸಂಪರ್ಕ ಮಾಡಿ.. ಕಲಾವಿದರು, ತಂತ್ರಜ್ಞರು ಹಸಿವಿನಿಂದ ಇರಬಾರದು ಎಂಬ ಕಾರಣಕ್ಕೆ ಈ ಸೇವೆ ಮಾಡಲಾಗಿದೆ. ನಾನೋರ್ವ ಕಲಾವಿದನಾಗಿ ಇನ್ನೊಬ್ಬ ಕಲಾವಿದನ ಕಷ್ಟವನ್ನ ಅರಿತು ಈ ಕಾರ್ಯ ಮಾಡಿದ್ದೇನೆ ಮುಂದಿನ ದಿನಗಳಲ್ಲಿ ಇನ್ನಷ್ಟು ಫುಡ್​ ಕಿಟ್​ ವಿತರಣೆ ಮಾಡುವುದಾಗಿ ಶ್ರೀನಾಥ್ ವಸಿಷ್ಠ ಹೇಳಿದ್ದಾರೆ.

The post ಸಂಕಷ್ಟದಲ್ಲಿದ್ದ 118 ಕಲಾವಿದರಿಗೆ ಫುಡ್ ಕಿಟ್ ವಿತರಣೆ ಮಾಡಿದ ಶ್ರೀನಾಥ್​ ವಸಿಷ್ಠ appeared first on News First Kannada.

Source: newsfirstlive.com

Source link