ಉಡುಪಿ: ಕಷ್ಟ ಕಾಲದಲ್ಲಿ ‌ನೆರವಿಗೆ ಧಾವಿಸುವ ಆಟೋ ಚಾಲಕರು, ಕೋವಿಡ್ ಸಮಯದಲ್ಲೂ ತಮ್ಮ ವಿಶೇಷ ಸೇವೆಗೆ ಮುಂದಾಗಿದ್ದಾರೆ. ರೋಗಿಗಳು, ಹಿರಿಯ ನಾಗರಿಕರ‌ ಉಚಿತ ತುರ್ತು ಸೇವೆಗಾಗಿ 37 ರಿಕ್ಷಾ ಚಾಲಕರ ತಂಡ ಉಡುಪಿಯಲ್ಲಿ ಸಿದ್ಧವಾಗಿದ್ದು, ಚಾಲಕ ಸಮಾಜ ಸೇವೆಗೆ ಜನ ಭೇಷ್ ಅಂದಿದ್ದಾರೆ.

ಸದ್ಯ ಎಲ್ಲೆಡೆ ಕೊರೊನಾ ಸಂಕಷ್ಟ ಸಮಯ, ಎಲ್ಲರಿಗೂ ಒಂದಲ್ಲ ಒಂದು ತೊಂದರೆ ತಾಪತ್ರೆ. ಮನೆ ಮಂದಿಗೆ ಆರೋಗ್ಯ ಸರಿ ಇಲ್ಲ ಅಂದ್ರೆ, ಆಸ್ಪತ್ರೆಗೆ ಕರೆದುಕೊಂಡು ಹೋಗುವುದೇ ದೊಡ್ಡ ಸವಾಲು. ಕೊರೊನಾ ಕ್ಲೋಸ್ ಡೌನ್ ಜಾರಿ ಇರುವ ಕಾರಣ ಬಹಳಷ್ಟು ಜನರಿಗೆ ಆ್ಯಂಬುಲೆನ್ಸ್ ಮೊದಲಾದ ಅರೋಗ್ಯ ವಾಹನದ ಸೇವೆಗಳು ಸಿಗುತ್ತಿಲ್ಲ. ಇದಕ್ಕಾಗಿ ಉಡುಪಿಯ ಕೃಷ್ಣಮೂರ್ತಿ ಆಚಾರ್ಯ ಮತ್ತವರ ತಂಡ ಉಚಿತ ಸೇವಾ ಕಾರ್ಯ ಆರಂಭಿಸಿದೆ. ರೋಗಿಗಳು ಮತ್ತು ಹಿರಿಯ ನಾಗರಿಕರ ತುರ್ತು ಸೇವೆಗಾಗಿ ಉಡುಪಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ 36 ರಿಕ್ಷಾ ಚಾಲಕರು ಮುಂದೆ ಬಂದಿದ್ದಾರೆ.

ಸದ್ಯ 36 ರಿಕ್ಷಾ ಚಾಲಕರು ಈ ಸೇವೆಗೆ ಮುಂದೆ ಬಂದಿದ್ದು, ದಿನದ 24 ಗಂಟೆಯೂ ಸೇವೆ ನೀಡಲು ಈ ರಿಕ್ಷಾ ಚಾಲಕರ ತಂಡ ಸಿದ್ಧವಾಗಿದೆ. ಆಟೋ ಚಾಲಕರು ತಮ್ಮಗೆ ಕಷ್ಟ ಇದ್ರೂ ಜನರ ಕಷ್ಟದಲ್ಲಿ ಇದ್ದಾಗ ಜನರ ಸೇವೆ ಮಾಡುವುದು ಮುಖ್ಯ ಅಂತ ತಿಳಿದು ಈ ಪುಣ್ಯದ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಆಟೋ ಚಾಲಕರ ಈ ಸೇವೆಗೆ ಜಿಲ್ಲಾಡಳಿತ ಕೂಡ ಬೆಂಬಲ ನೀಡಿದೆ.

ಒಟ್ಟಿನಲ್ಲಿ ಮೊದಲೇ ದುಡಿಮೆ ಇಲ್ಲದೆ ಕೈ ಸುಟ್ಟುಕೊಂಡಿರುವ ರಿಕ್ಷಾ ಚಾಲಕರು ಇದೀಗ ತಾವಾಗಿಯೇ ಉಚಿತ ಸೇವೆಗೆ ಮುಂದೆ ಬಂದಿರುವುದು ಜನರ ಪ್ರಶಂಸೆಗೆ ಪಾತ್ರವಾಗಿದೆ, ಸೇವೆ ಪಡೆದವರು ಆಟೋ ಚಾಲಕರಿಗೆ ಭೇಷ್ ಅಂತಿದ್ದಾರೆ.

The post ಸಂಕಷ್ಟದಲ್ಲೂ ಉಚಿತ ಸೇವೆ -ಉಡುಪಿ ಆಟೋ ಚಾಲಕರ ಕಾರ್ಯಕ್ಕೆ ಹೊಡಿಲೇ ಬೇಕು ಸೆಲ್ಯೂಟ್ appeared first on News First Kannada.

Source: newsfirstlive.com

Source link