ಸಂಕಷ್ಟದ ಸುಳಿಯಲ್ಲಿ ಬಾಲಿವುಡ್​ ಬಂಗಾರಿ..ರೀವಿಲ್​ ಆದ ಫೋಟೋ ಹೇಳ್ತಿರೋದೇನು


ನಾನು ಅಂತವಳಲ್ಲ, ನನಗೂ ಅದಕ್ಕೂ ಸಂಬಂಧವೇ ಇಲ್ಲಾ ಅಂತಾ ಹೇಳೋದು ತುಂಬಾ ಸುಲಭ… ಆದ್ರೆ ಅಸಲಿಯತ್ತು ಅನ್ನೋದು ಇದ್ದೇ ಇರುತ್ತೆ ಅಲ್ವಾ.. ಈಗ ಒಬ್ಬ ಸುಂದರಿಯ ಬಾಳಲ್ಲಿ ಆಗ್ತಾಯಿರೋದು ಕೂಡ ಅದೆ. ಅಂದು ಹೇಳಿದ್ದೊಂದು ಇಂದು ಸಿಕ್ಕಿ ಹರಿದಾಡುತ್ತಿರೋದು ಮತ್ತೊಂದು.. ಹಾಗಾದ್ರೆ ಆ ಸುಂದರಿಯ ಜೀವನಲ್ಲಿ ಹಿಂದೆ ಆಗಿದ್ದೆಲ್ಲವು ಸತ್ಯನಾ? ಆಕೆ ಹೇಳಿದ್ದೆಲ್ಲವೂ ಸುಳ್ಳಾ?

 

ಒಂದಲ್ಲ ಎರಡಲ್ಲ ಇನ್ನೂರು ಕೋಟಿ ಅಂದ್ರೆ ಎಂಥವರೂ ದಂಗಾಗೋದು ಪಕ್ಕಾ.. ರಸ್ತೆಯಲ್ಲಿ ಹೋಗುವಾಗ ಯಾರಾದ್ರು ಬಂದು 5 ರೂಪಾಯಿ ಕೊಡಿ ಅಂದ್ರೆ ಕೊಡೋದಿಲ್ಲ. ಅಂಥದ್ರಲ್ಲಿ 200 ಕೋಟಿ ಅಂದ್ರೆ ಯಾರ್ ತಾನೆ ನಂಬ್ತಾರೆ ಹೇಳಿ.. ಅದಾಗ್ಯೂ ನಂಬಿದ್ರೆ ಕೊಟ್ಟೋನು ಕೋಡಂಗಿ, ಇಸ್ಕೊಂಡೋನಿ ಈರಭದ್ರ ಅಂದಂಗಾಗುತ್ತೆ.. ಆದ್ರೆ ಈಸ್ಕೊಂಡೋರು ಯಾರೋ, ಕೊಟ್ಟಿದ್ದು ಇನ್ಯಾರೋ,, ಆದ್ರೆ ತೂಗು ಕತ್ತಿ ಮೇಲೆ ನೇತಾಡ್ತಿರೋದು ಮಾತ್ರ ಒಬ್ಬ ನಟಿ..

ಈಕೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ.. ಶ್ರೀಲಂಕಾ ಮೂಲದ ಸುಂದರಿ… ಮಿಸ್ ಶ್ರೀಲಂಕಾ ಕೂಡ ಹೌದು… 2006 ರಲ್ಲಿ ಅಲ್ಲಾದೀನ್ ಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟಾಕೆ.. ಅಂದು ಎಂಟ್ರಿ ಕೊಟ್ಟ ಈಕೆಗೆ ಇಂದಿಗೂ ಕೂಡ ಬಾಲಿವುಡ್​ನಲ್ಲಿ ಬೇಡಿಕೆಯಿದೆ.

ಜಾನೆ ಕಹಾ ಸೇ ಆಯೀ ಹೈ, ಮರ್ಡರ್ 2, ಹೌಸ್‌ಫುಲ್ 2, ರೇಸ್ 2 , ಕಿಕ್, ರಾಯ್, ಬ್ರದರ್ಸ್​ ಹೌಸ್‌ಫುಲ್ 3, ರೇಸ್ 3 ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಿ-ಟೌನ್ ಸೂಪರ್‌ಸ್ಟಾರ್‌ಗಳಾದ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ವರುಣ್ ಧವನ್, ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಈಕೆ ಬಾಲಿವುಡ್‌ನ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ 35 ವರ್ಷದ ಜಾಕ್ವೆಲಿನ್ ಫರ್ನಾಂಡೀಸ್.


ಅಯ್ಯೋ ಇದ್ರಲ್ಲಿ ಏನಿದೆ ಅಂಥದ್ದು ಅಂತಾ ನಿಮಗೆ ಅನ್ನಿಸಬೋದು.. ಇಲ್ಲೆ ಇರೋದು ನೋಡಿ ಅಸಲಿಯತ್ತು.. ಸಾಮಾನ್ಯವಾಗಿ ಒಬ್ಬ ಸೆಲೆಬ್ರಿಟಿ ಅಂದ್ರೆ ಹೀಗೆ ಫೋಟೋ ತೆಗೆದುಕೊಳ್ಳೋದು ಕಾಮನ್ ಅಂತಾ ಅನ್ನಿಸಬೋದು, ಅಥವಾ ಯಾವುದೋ ಒಂದು ಸಿನಿಮಾದ ಸೀನ್​ ಗಾಗಿ ಹೀಗೆ ಫೋಟೋ ತೆಗೆದುಕೊಂಡಿರಬಹುದು ಅಂತಾನೂ ಅಂದುಕೊಳ್ಳಬೋದು. ಆದ್ರೆ ಈ ಫೋಟೋ ಹಿಂದೆ ಬೇರೆಯದ್ದೇ ಕಹಾನಿ ಇದೆ.

ಫೋಟೋ ರಿವೀಲ್ ಆಗಿದ್ದೇ ಒಂದು ರೋಚಕ

ಹೌದು.. ಕಳೆದ ಕೆಲ ತಿಂಗಳಿಂದ ದೇಶದಲ್ಲಿ ಹೆಚ್ಚು ಸದ್ದು ಮಾಡ್ತಿರೋದು 200 ಕೋಟಿ ವಂಚನೆ ಮಾಡಿರೋ ಆರೋಪ.. ಆ ಆರೋಪ ಕೇಳಿ ಬಂದಿದ್ದು ಚೆನ್ನೈನ ಒಬ್ಬ ಖ್ಯಾತ ಉದ್ಯಮಿ ಸುಕೇಶ್​ ಚಂದ್ರಶೇಖರ್ ವಿರುದ್ಧ.. ದೆಹಲಿಯಲ್ಲಿ ಆರೋಪ ಕೇಳಿ ಬರುತ್ತಿದ್ದಂತೆ ಸುಖೇಶ್ ಚಂದ್ರಶೇಖರ್‌ನ ಬಂಧಿಸಲಾಗಿತ್ತು. ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಸುಕೇಶ್ ಚಂದ್ರಶೇಖರ್ ಅನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಇಬ್ಬರು ಖ್ಯಾತ ನಟಿಯರ ಹೆಸರು ತಳಕು ಹಾಕಿಕೊಂಡಿತ್ತು. ಒಂದು ನೋರಾ ಫತೇಹಿ ಮತ್ತೊಬ್ಬಂದು ಇದೇ ಜಾಕ್ವಲಿನ್​ ಫರ್ನಾಂಡಿಸ್.

ಉದ್ಯಮಿಗಳಿಗೆ 200 ಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಸುಕೇಶ್ ಆರೋಪ ಎದುರಿಸುತ್ತಿದ್ದ ಸಂದರ್ಭದಲ್ಲಿ ವಿಚಾರಣೆ ವೇಳಿ ಹಣವನ್ನ ಖರ್ಚು ಮಾಡಿದ್ದು, ಸುತ್ತಾಡಿದ್ದು, ಎಲ್ಲವನ್ನು ಇಡಿ ಮುಂದೆ ಬಾಯಿ ಬಿಟ್ಟಿದ್ದರು. ಆಗ ಅವರ ಜೊತೆ ಸಂಪರ್ಕದಲ್ಲಿ ಇದ್ದರು ಎಂಬ ಕಾರಣಕ್ಕಾಗಿ ಜಾಕ್ವೆಲಿನ್ ಮತ್ತು ನೋರಾ ಫತೇಹಿ. ಅವರ ಮೇಲೆಯೂ ಹಲವು ರೀತಿಯಲ್ಲಿ ಅನುಮಾನ ವ್ಯಕ್ತವಾಗಿತ್ತು. ಹಾಗಾಗಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸುವ ಸಲುವಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಅಷ್ಟೋತ್ತಿಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಕೇಶ್ ಚಂದ್ರಶೇಖರ್, ಅವರ ಪತ್ನಿ ಲೀನಾ ಮತ್ತು ಇತರ ಆರು ಮಂದಿ ಜಾರಿ ನಿರ್ದೇಶನಾಲಯದ ವಶದಲ್ಲಿದ್ದರು..

ಬಿಎಂಡಬ್ಲೂ ಕಾರು ಗಿಫ್ಟ್​ ಕೊಟ್ಟಿದ್ದಾಗಿ ಹೇಳಿಕೆ

ಇನ್ನು ನೋರಾ ಹಾಗು ಜಾಕ್ವಲೀನ್​ ಗೆ ಇಬ್ಬರಿಗೂ ನಾನು ಕಾರನ್ನ ಗಿಫ್ಟ್ ಮಾಡಿದ್ದೆ ಎಂಬ ಹೇಳಿಕೆಯನ್ನ ಕೊಟ್ಟ ಮೇಲೆ ಅದರ ಆಧಾರದ ಮೇಲೆ ಇಬ್ಬರನ್ನು ವಿಚಾರಣೆಗೆ ಕರೆಯಲಾಗಿತ್ತು. ಆಗ ಹೆಚ್ಚು ಚರ್ಚೆಗೆ ಕಾರಣ ಆಗಿದ್ದೇ ಜಾಕ್ವಲೀನ್ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ..

ಉದ್ಯಮಿ ಜೊತೆ ಡೇಟಿಂಗ್ ಅನ್ನೋ ಸುದ್ದಿ ಹರಿದಾಡಿತ್ತು
175 ಕೋಟಿ ಖರ್ಚು ಮಾಡಿ ಐಷರಾಮಿ ಬಂಗಲೆ ಖರೀದಿ

ಜಾಕ್ವೆಲಿನ್ ಹೆಸರು ಪ್ರಾರಂಭದಲ್ಲಿ ಸಲ್ಮಾನ್ ಖಾನ್, ಬಹ್ರೇನ್ ಮೂಲದ ಯುವರಾಜ, ನಿರ್ದೇಶಕ ಸಾಜಿದ್ ಖಾನ್ ಹಾಗೂ ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಡೇಟಿಂಗ್ ಮಾಡುತ್ತಿದ್ದರು ಅನ್ನೋ ಸುದ್ದಿ ಕೇಳಿ ಬಂದಿತ್ತು. ಆದರೆ ವರ್ಷಗಳಿಂದೀಚೆಗೆ ದಕ್ಷಿಣ ಭಾರತದ ಉದ್ಯಮಿಯೊಬ್ಬರ ಜೊತೆ ಮುಂಬೈನಲ್ಲಿ ಸೆಟಲ್ ಆಗಲು ಜಾಕ್ವೆಲಿನ್ ಫರ್ನಾಂಡಿಸ್ ಮುಂದಾಗಿದ್ದಾರೆ ಎನ್ನಲಾಗಿತ್ತು. ಸದ್ಯ ಇಬ್ಬರೂ ಸೇರಿ ಲಾಕ್‌ಡೌನ್‌ನಲ್ಲಿಯೇ ಮುಂಬೈನ ಜುಹುವಿನ ಪ್ರತಿಷ್ಠಿತ ಏರಿಯಾದಲ್ಲಿ ಸೀ ಫೇಸಿಂಗ್ ಬಂಗಲೆಯೊಂದನ್ನು ಖರೀದಿಸಲು ಲಾಕ್ ಮಾಡಿಕೊಂಡಿದ್ದಾರಂತೆ. ಆ ಐಷಾರಾಮಿ ಬಂಗಲೆಯ ಬೆಲೆ ಬರೋಬ್ಬರಿ 175 ಕೋಟಿ ರೂಪಾಯಿ ಎನ್ನಲಾಗಿತ್ತು.

ಆ ಉದ್ಯಮಿ ಬೇರೆ ಯಾರು ಅಲ್ಲ 200 ಕೋಟಿ ಅಕ್ರಮ ವರ್ಗಾವಣೆ ಆರೋಪದಲ್ಲಿ ಬಂಧಿತನಾಗಿದ್ದ ಇದೇ ಸುಕೇಶ್ ಚಂದ್ರಶೇಖರ್​ ಅನ್ನೋದು ಈಗ ಗೊತ್ತಾಗುತ್ತಿದೆ. ಅದೆಷ್ಟರ ಮಟ್ಟಿಗೆ ಅಂದ್ರೆ ಫ್ರಾನ್ಸ್​ನಿಂದ ಹೆಸರಾಂತ ಇಂಟೀರಿಯರ್ ಡಿಸೈನರ್ ‌ಅನ್ನು ಭಾರತಕ್ಕೆ ಕರೆಸಿ, ತಮ್ಮ ಈ ಬಂಗಲೆಯ ಇಂಟೀರಿಯರ್ ಡಿಸೈನ್‌ ಅನ್ನು ಮಾಡಿಸುವ ಪ್ಲಾನ್​ ಕೂಡ ಮಾಡಿಕೊಂಡಿದ್ದಾರಂತೆ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಅವರ ಬಾಯ್‌ಫ್ರೆಂಡ್. ಲಾಕ್‌ಡೌನ್ ಸಂಪೂರ್ಣವಾಗಿ ಅನ್‌ಲಾಕ್ ಆಗುತ್ತಲೇ ಇಂಟೀರಿಯರ್ ಡಿಸೈನ್ ಪೂರ್ಣಗೊಳಿಸಿ ಈ ಜೋಡಿ ಹೊಸ ಗೂಡು ಸೇರೋ ನಿರೀಕ್ಷೆಯಲ್ಲಿದ್ದರು. ಆದ್ರರೆ ಡೇಟಿಂಗ್ ಮಾಡುತ್ತಿದ್ದವ ಜೈಲು ಸೇರಿಕೊಂಡು ಬಿಟ್ಟಿದ್ದ.

ಮೂರು ಬಾರಿ ವಿಚಾರಣೆಗೆ ತಪ್ಪಿಸಿಕೊಂಡಿದ್ದ ಜಾಕ್ವೆಲಿನ್​
ಸತತ 7 ಗಂಟೆ ವಿಚಾರಣೆ ನಡೆಸಿದ್ದ ಜಾರಿ ನಿರ್ದೇಶನಾಲಯ

ಕೆಲವೊಂದು ಕಾರಣಗಳನ್ನ ಕೊಟ್ಟು ಮೂರು ಬಾರಿ ದೆಹಲಿಯಲ್ಲಿರೋ ಇಡಿ ಕಚೇರಿಗೆ ವಿಚಾರಣೆಗೆ ಹಾಜರಾಗೋದನ್ನ ತಪ್ಪಿಸಿಕೊಂಡಿದ್ದ ಜಾಕ್ವಲೀನ್ ಕೊನೆಗೂ ವಿಚಾರಣೆಗೆ ಹಾಜರಾಗಿದ್ದರು. ಆಗ ಇಡಿ ಕೇಳಿದ್ದ ಪ್ರಶ್ನೆಗಳಿಗೆ ಉತ್ತರಿಸಿದ್ದ ಈಕೆ, ತನನ್ನ ಈ ಪ್ರಕರಣದಲ್ಲಿ ಸಿಲುಕಿಸೋ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿ, ತನಗೂ ಸುಖೇಶ್‌​ಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿ ಅಲ್ಲಿಂದ

ತಪ್ಪಿಸಿಕೊಳ್ಳೋ ಪ್ರಯತ್ನ ಮಾಡಿದ್ದರು.
ಹೇಳಿಕೆ ಕೊಟ್ಟ ಬಳಿಕ ಫೋಟೋ ಬಿಡುಗಡೆ

ಇನ್ನು ಕೆಲ ದಿನಗಳ ಹಿಂದಷ್ಟೆ ವಿಚಾರಣೆ ಎದುರಿಸಿದ್ದ ಬೆನ್ನಲ್ಲೆ ಈಗ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡೋದಕ್ಕೆ ಶುರು ಆಗಿದೆ. ಆ ಫೋಟೋ ಇದೇ ನೋಡಿ.. ಈ ಫೋಟೋದಲ್ಲಿ ಇರೋದು ಜಾಕ್ವಲೀನ್ ಹಾಗು ಸುಕೇಶ್ ಚಂದ್ರಶೇಖರ್​.. ಶೇಖರ್​ ಹಿಂಬದಿಯಿಂದ ತಬ್ಬಿಕೊಂಡು ಜಾಕ್ವಲೀನ್​ ಕೆನ್ನೆಗೆ ಮುತ್ತಿಡುತ್ತಿರೋ ಫೋಟೋ ಈಗ ಎಲ್ಲೆಡೆ ಹರಿದಾಡುತ್ತಿದೆ. ಮೂಲಗಳ ಪ್ರಕಾರ ಈ ಫೋಟೋ ಇದೇ ವರ್ಷದ ಏಪ್ರಿಲ್ ಹಾಗು ಜೂನ್ ಸಂದರ್ಭದಲ್ಲಿ ಕ್ಲಿಕ್ಕಿಸಿದ್ದು ಅಂತಾ ಹೇಳಲಾಗುತ್ತಿದೆ. ಮತ್ತೊಂದು ಮೂಲಗಳ ಪ್ರಕಾರ ಈ ಫೋಟೋನ ಖುದ್ದು ಶೇಖರ್​ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವಂತೆ ಮಾಡಿಸಿದ್ದಾನೆ ಎಂದು ಹೇಳಲಾಗುತ್ತಿದೆ.

ಶೇಖರ್ ಹೀಗೆ ಮಾಡಲು ಕಾರಣವೇನು?

ಚಂದ್ರಶೇಖರ್​ ಚೆನ್ನೈ ಮೂಲದ ಒಬ್ಬ ಖ್ಯಾತ ಉದ್ಯಮಿ.. ಇನ್ನು ಈತನ ಪತ್ನಿ ಲೀನಾ ಮಾರಿಯಾ ಪೌಲ್​​ ಬಾಲಿವುಡ್​ನಲ್ಲಿ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾಳೆ. ಆ ಮೂಲಕ ಬಾಲಿವುಡ್​ನಲ್ಲಿ ಹೆಚ್ಚು ಸಂಪರ್ಕವನ್ನ ಶೇಖರ್ ಗಳಿಸಿದ್ದ. ನೋರಾ ಮತ್ತು ಜಾಕ್ವಲೀನ್ ಪರಿಚಯ ಆಗಿದ್ದು ಪತ್ನಿಯಿಂದಲೇ. ಆ ಬಳಿಕ ಅವರನ್ನ ಚೆನ್ನಾಗಿ ಸುತ್ತಾಡಿಸಿದ್ದನಂತೆ. ಹೀಗಂತ ಇಡಿ ಮುಂದೆ ವಿಚಾರಣೆ ಸಂದರ್ಭದಲ್ಲಿ ಬಾಯಿ ಬಿಟ್ಟಿದ್ದ.. ಅಲ್ಲದೆ ಜಾಕ್ವೆಲೀನ್ ಅನ್ನ ಚೆನ್ನೈಗೆ ಪ್ರೈವೇಟ್​ ಜೆಟ್ ಬುಕ್ ಮಾಡಿ ಕರೆಸಿಕೊಳ್ಳುತ್ತಿದ್ದನಂತೆ. ಜೊತೆಗೆ ಐಶರಾಮಿ ಹೋಟೆಲ್​ ನಲ್ಲಿ ರೂಮ್ ಬುಕ್ ಮಾಡಿ ಅಲ್ಲಿ ಇಬ್ಬರು ಬೇಟಿ ಮಾಡುತ್ತಿದ್ದನಂತೆ. ಪ್ರತಿಬಾರಿ ಭೇಟಿ ಆದಾಗಲೂ ಕಾಸ್ಟ್ಲಿಲಿ ಗಿಫ್ಟ್ ಅನ್ನ ಕೊಡುತ್ತಿದ್ದನಂತೆ. ದುಡ್ಡೆಲ್ಲಾ ಖರ್ಚು ಆಗಿದ್ದು ಇಲ್ಲಿಯೇ ಎಂದು ಹೇಳಿದ್ದನಂತೆ..

ಈ ಪ್ರಶ್ನೆ ಮಾಡಿದ್ದಾಗ ಜಾಕ್ವಲೀನ್​ ಅದೆಲ್ಲವೂ ಸುಳ್ಳು, ನನ್ನ ವಿರುದ್ದ ಷಡ್ಯಂತ್ರ ಇದೆಲ್ಲಾ ಎಂದು ಹೇಳಿಕೆ ಕೊಟ್ಟಿದ್ದರು. ಹಾಗಾಗಿ ಅದಕ್ಕೆ ಸಾಕ್ಷಿ ಎಂಬುವಂತೆ ಈ ಫೋಟೋವನ್ನ ಶೇಖರ್ ಖುದ್ದು ಮಾಧ್ಯಮಗಳಿಗೆ ಸಿಗುವಂತೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಸದ್ಯ ಪ್ರಕರಣದಲ್ಲಿ ಈಗಾಗಲೇ 18 ಮಂದಿಯನ್ನ ಬಂಧಿಸಲಾಗಿದ್ದು, ತಾತ್ಕಾಲಿಕವಾಗಿ ತಪ್ಪಿಸಿಕೊಂಡಿದ್ದ ಜಾಕ್ವಲೀನ್​​ಗೆ ಈಗ ಈ ಫೋಟೋ ಹರಿದಾಡುತ್ತಿರೋದು ಬಂಧನದ ಆತಂಕವನ್ನ ಹುಟ್ಟು ಹಾಕಿದೆ. ಒಂದು ಕಡೆ ಗೊತ್ತಿಲ್ಲ ಎಂದು ಸುಳ್ಳು ಹೇಳಿದ್ದು, ಮತ್ತೊಂದು ಕಡೆ ತನಿಖೆಯ ದಿಕ್ಕನ್ನ ತಪ್ಪಿಸಿದ್ರು ಅನ್ನೋ ದೂರು ದಾಖಲಾಗೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದ್ರೆ ಇಡಿ ಮುಂದೇನು ಮಾಡುತ್ತೆ ಅನ್ನೋದೆ ಸದ್ಯದ ಕುತೂಹಲ.

ಒಂದು ಫೊಟೋ ನೂರು ಕಥೆ ಹೇಳುತ್ತೆ ಅನ್ನೋದಕ್ಕೆ ಸದ್ಯ ಜಾಕ್ವಲೀನ್ ಗೆ ಮುತ್ತು ಕೊಡುತ್ತಿರೋ ಫೋಟೋವೊಂದೇ ಸಾಕ್ಷಿ.. ಆದ್ರೆ ಇದೊಂದು ಫೋಟೋ ಈಕೆ ಶ್ರೀಲಂಕಾ ಸುಂದರಿಗೆ ಮುಳುವಾಗುತ್ತಾ? ಇಡಿ ಬಿಗ್ ಶಾಕ್ ಕೊಡುತ್ತಾ? ಶೇಖರ್ ಹೇಳಿದ್ದೆಲ್ಲವು ಸತ್ಯವಾಗುತ್ತಾ ಎಲ್ಲವನ್ನು ಕಾದು ನೋಡಬೇಕಷ್ಟೇ.

The post ಸಂಕಷ್ಟದ ಸುಳಿಯಲ್ಲಿ ಬಾಲಿವುಡ್​ ಬಂಗಾರಿ..ರೀವಿಲ್​ ಆದ ಫೋಟೋ ಹೇಳ್ತಿರೋದೇನು appeared first on News First Kannada.

News First Live Kannada


Leave a Reply

Your email address will not be published. Required fields are marked *