ಸಂಕ್ರಾಂತಿಗೆ ಕಿಚ್ಚಿಟ್ಟ ಡಾಲಿ ಧನಂಜಯ್; ಹೊಂಬಾಳೆ ನಿರ್ಮಾಣದ ಹೊಸ ಚಿತ್ರದ ಪೋಸ್ಟರ್​ ಔಟ್


2021 ರಲ್ಲಿ ಸಾಲು ಸಾಲು ಸಿನಿಮಾಗಳ ಮೂಲಕ ಚಿತ್ರ ಪ್ರೇಮಿಗಳನ್ನು ರಂಜಿಸಿದ್ದ ಡಾಲಿ ಧನಂಜಯ್​ ಈಗ, ಮತ್ತೆ ತಮ್ಮ ಸಿನಿ ಜೀವನಕ್ಕೆ ಇನ್ನಷ್ಟು ವೇಗ ನೀಡಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಈಗಾಲೇ ಧನಂಜಯ್​ ಕಮೀಟ್​ ಆಗಿದ್ದು ಈ ನಡುವೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ತಮ್ಮ ಹೊಸ ಸಿನಿಮಾದ ಪೋಸ್ಟರ್​ ಅನ್ನು ರಿಲೀಸ್​ ಮಾಡಿದ್ದಾರೆ.

ಸಿನಿಮಾದ ಹೆಸರು ‘ಹೊಯ್ಸಳ’. ಸಂಕ್ರಾಂತಿ ಹಬ್ಬದಂದು ಚಿತ್ರ ಪ್ರೇಮಿಗಳಿಗೆ ಕಿಚ್ಚು ಹಚ್ಚುವಂತ ಟೈಟಲ್​ನೊಂದಿಗೆ ಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. ಇನ್ನು ‘ಹೊಯ್ಸಳ’ ಸಿನಿಮಾವನ್ನು ಅರ್ಪಿಸುತ್ತಿರುವುದು ಕನ್ನಡದ ದೊಡ್ಡ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್​ನ ವಿಜಯ್​ ಕಿರಗಂದೂರು ಅವರು. ಹೊಯ್ಸಳ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದು ವಿಜಯ್​ ಎನ್​. ಹೊಯ್ಸಳ ಸಿನಿಮಾಗೆ ಬಂಡವಾಳ ಹೂಡಿರುವುದು, ಕಾರ್ತಿಕ್​, ಯೋಗಿ. ಜಿ. ರಾಜ್​. ಸಿನಿಮಾಗೆ ಟಾಲಿವುಡ್​ನ ಖ್ಯಾತ ಮ್ಯೂಸಿಕ್​ ಡೈರೆಕ್ಟರ್ ಥಮನ್​.ಎಸ್.​ ಸಂಗೀತ ಸಂಯೋಜನೆ ಮಾಡಲಿದ್ದಾರೆ.

ಹೊಯ್ಸಳ ಸಿನಿಮಾದ ಮತ್ತೊಂದು ವಿಶೇಷ ಏನಂದ್ರೆ, ಇದು ಡಾಲಿ ಧನಂಜಯ್​ ಸಿನಿಮಾ ಜೀವನದ ’25’ ನೇ ಚಿತ್ರ. ಹಾಗಾಗಿ ಡಾಲಿ ಧನಂಜಯ್​ಗೆ ಹೊಯ್ಸಳ ಸಿನಿಮಾದ ಮೇಲೆ ಬಹಳಷ್ಟು ನಿರೀಕ್ಷೆ ಇದೆ. ಪೋಸ್ಟರ್​ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಚಿತ್ರದಲ್ಲಿ ಡಾಲಿ ಪೊಲೀಸ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

News First Live Kannada


Leave a Reply

Your email address will not be published. Required fields are marked *