ಸಂಕ್ರಾಂತಿ ಮಹತ್ವ 2022: ಈ ಹಬ್ಬದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು | Importance and puja vidhi vidhan of makar sankranti


ಸಂಕ್ರಾಂತಿ ಭವಿಷ್ಯ 2022: ಖ್ಯಾತ ಜ್ಯೋತಿಷಿ ಡಾ ಬಸವರಾಜ ಗೂರೂಜಿ ಸಂಕ್ರಾಂತಿ ಭವಿಷ್ಯ ರಾಶಿ ಫಲಾಫಲ ಕುರಿತು ಮಾಹಿತಿ ನೀಡಿದ್ದಾರೆ. ಮಕರ ಸಂಕ್ರಾಂತಿ‌ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಧಾರ್ಮಿಕ, ಸಾಂಸ್ಕೃತಿಕ ಹಬ್ಬ. ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಎಂದೂ, ತಮಿಳುನಾಡಿನಲ್ಲಿ ಪೊಂಗಲ್ ಎಂದೂ, ಆಂಧ್ರದಲ್ಲಿ ಸಂಕ್ರಮಣ ಕಾಲಾಲು ಎಂದೂ ಕರೆಯಲ್ಪಡುವ ಈ ಹಬ್ಬಕ್ಕೆ ವಿಶೇಷ ಅರ್ಥ, ಸಂಭ್ರಮ ಇದೆ. ಆಚರಣೆಯಲ್ಲಿ ಹಲವು ಪದ್ಧತಿಗಳಿವೆ.

ಸಂಕ್ರಮಣ ಅಂದರೆ ಚೆನ್ನಾಗಿ ಕ್ರಮಿಸುವುದು ಎಂಬ ಅರ್ಥ.‌ ಚೆನ್ನಾಗಿ ಕ್ರಮಿಸುವವ ಯಾರು ಎಂದರೆ, ಅದು ಸೂರ್ಯ. ಸೂರ್ಯ ದೇವನು ತನ್ನ ಪಥ ಬದಲಿಸಿ, ಮತ್ತೊಂದು ಪಥದಲ್ಲಿ ಚಲಿಸುವ ಈ ಕಾಲವನ್ನು ಸಂಕ್ರಮಣ ಎನ್ನುತ್ತೇವೆ. ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣದ ಕಡೆಗೆ ಪಥ ಬದಲಿಸುತ್ತಾನೆ. ಆದ್ದರಿಂದ, ಮಕರ ಸಂಕ್ರಾಂತಿಯನ್ನು ಉತ್ತರಾಯಣ ಸಂಕ್ರಮಣ ಎಂದೂ ಕರೆಯುತ್ತೇವೆ.

TV9 Kannada


Leave a Reply

Your email address will not be published. Required fields are marked *