ಸಂಕ್ರಾಂತಿ ಹಬ್ಬದ ಪ್ರಯುಕ್ತ ಇಡೀ ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಅವರ ಮನೆಯಲ್ಲಿ ಕುಟುಂಬಸ್ಥರೆಲ್ಲಾ ಸೇರಿ ಒಟ್ಟಾಗಿ ಭೋಗಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ಜಿರಂಜೀವಿ ಪಕ್ಕಾ ಫ್ಯಾಮಿಲಿ ಮ್ಯಾನ್. ಹೀಗಾಗಿ ಯಾವುದೇ ಹಬ್ಬ, ಹರಿದಿನವನ್ನು ಆಚರಿಸೋವಾಗ ಎಲ್ಲಾ ಕುಟುಂಬ ಸದಸ್ಯರನ್ನು ಒಟ್ಟಾಗಿ ಸೇರಿಸಿ ಮಕ್ಕಳೊಂದಿಗೆ ಬೇರೆತು ಬಹಳ ಅದ್ಧೂರಿಯಾಗಿ ಹಬ್ಬ ಆಚರಿಸುತ್ತಾರೆ. ಅದರಂತೇ ಈ ಬಾರಿಯೂ ಸಂಕ್ರಾಂತಿ ಹಬ್ಬದ ಆಚರಣೆಗೂ ಇಡೀ ಮೆಗಾ ಫ್ಯಾಮಿಲಿ ಒಂದೆಡೆ ಸೇರಿತ್ತು.
ಇನ್ನು ವಿಶೇಷ ಅಂದ್ರೆ ಈ ವೇಳೆ ಚಿರಂಜೀವಿ ಅವರು ತಮ್ಮ ಸಹೋದರ ನಾಗ್ಬಾಬು ಅವರ ಮಗ ವರುಣ್ ತೇಜ್ ಅವರ ಜೊತೆ ಸೇರಿ ದೋಸೆಗಳನ್ನು ಮಾಡಿದ್ದಾರೆ. ದೊಡ್ಡಪ್ಪ ಚಿರಂಜೀವಿ ಜೊತೆ ಸೇರಿ ವರುಣ್ ತೇಜ್ ದೋಸೆಗಳನ್ನು ಮಾಡುವ ಫನ್ನಿ ವಿಡಿಯೋವನ್ನು ಅಭಿಮಾನಿಗಳು ಸೋಸಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಚಿರಂಜೀವಿ ಹಾಗೂ ವರುಣ್ ಇಬ್ಬರೂ ಸೇರಿ ದೋಸೆಗಳನ್ನು ಮಾಡುವ ವೇಳೆ ವರುಣ್ ಅವರ ದೋಸೆ ಬಹಳ ಚೆನ್ನಾಗಿ ಬರುತ್ತೆ. ಆದರೆ ಚಿರಂಜೀವಿ ಅವರು ಮಾಡಿದ ದೋಸೆ ಅಷ್ಟು ಚೆನ್ನಾಗಿ ಬರೋದಿಲ್ಲ. ಹೀಗಾಗಿ ಚಿರಂಜೀವಿ ಅವರು ವರುಣ್ ತೇಜ್ ಮಾಡಿದ ದೋಸೆಯನ್ನು ಹಾಳು ಮಾಡಿ ನಾನು ಮಾಡಿದ ದೋಸೆಯ ಶೇಪ್ ಸರಿಯಾಗಿ ಬಂದಿಲ್ಲ. ನೀನು ಮಾಡಿದ ದೋಸೆ ನೋಡಿ ನನಗೆ ಹೊಟ್ಟೆಕಿಚ್ಚು ಅಗುತ್ತಿದೆ ಅಂತ ಫನ್ನಿಯಾಗಿ ಹೇಳಿದ್ದಾರೆ.
#MegaPrince Varun Tej join hands in Dosa making 101 with the boss#Chiranjeevi Garu
#VarunTej shared a fun-filled family time on this festive eve of #bhogi
#Bhogi2022 pic.twitter.com/dYPsSOxAv7
— praveen Kumar Royal (@Royalpraveen144) January 14, 2022
The post ಸಂಕ್ರಾಂತಿ ಸಂಭ್ರಮ; ಕುಟುಂಬಸ್ಥರಿಗಾಗಿ ಅಡುಗೆ ಮಾಡೋದ್ರಲ್ಲಿ ಬ್ಯುಸಿಯಾದ ಮೆಗಾಸ್ಟಾರ್ appeared first on News First Kannada.