ಮಂಡ್ಯ: ನಾಡಿನೆಲ್ಲೆಡೆ ಸಂಭ್ರಮದಿಂದ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಲಾಯಿತು. ಅದರಂತೆ ಮಂಡ್ಯದ ಕೆ.ಎಂ. ದೊಡ್ಡಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ರಾಸುಗಳ ಕಿಚ್ಚು ಹಾಯಿಸುವ ವೇಳೆ ಅಪ್ಪು ಫೋಟೋ ಹಾಕಿ ಸ್ಮರಿಸಲಾಯಿತು.
ರಾಸುಗಳಿಗೆ ಬಣ್ಣ ಬಣ್ಣದ ಬಲೂನುಗಳಿಂದ ಅಲಂಕರಿಸಿದ್ದರು. ವರ್ಷದ ಮೊದಲ ಸುಗ್ಗಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ ಸಕ್ಕರೆನಾಡಿನ ಜನರು ಹಬ್ಬದ ಜೊತೆಗೆ ಅಗಲಿದ ಅಪ್ಪು ಅವರ ಭಾವಚಿತ್ರ ಇಡುವ ಮೂಲಕ ಅಗಲಿದ ಅಪ್ಪುಗೆ ಗೌರವ ಸಲ್ಲಿಸಿದ್ರು.
ಅಲ್ಲದೇ ಎತ್ತಿನ ಮೇಲೆ ಅಪ್ಪು ಬಾಲ್ಯದ ಫೋಟೋವನ್ನು ಬಿಡಿಸಿದ್ದರು. ಇದರೊಂದಿಗೆ ತಮ್ಮ ಮನೆಯ ರಾಸುಗಳಿಗೆ ಅಪ್ಪು ಹೆಸರು ಹಾಗೂ ಫೋಟೋಗಳನ್ನು ಹಾಕಿ ಅಪ್ಪುಗೆ ಜೈಕಾರ ಹಾಕಿ ಕಿಚ್ಚು ಹಾಯಿಸಿ ಸಂಭ್ರಮಾಚರಣೆ ಮಾಡಿದ್ದಾರೆ.