ಪೇಜಾವರ ಮಠದ ಹಿರಿಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳ ಬಗ್ಗೆ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ನೀಡಿದ್ದ ಹೇಳಿಕೆ ವಿವಾದದ ಕೇಂದ್ರವಾಗಿತ್ತು. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಹಂಸಲೇಖ ಪರ ಮತ್ತು ವಿರೋಧ ಅಭಿಯಾನಗಳು ನಡೆದವು. ಇದರ ನಡುವೆ ಸರಿಗಮಪ ರಿಯಾಲಿಟಿ ಶೋದಿಂದ ಹಂಸಲೇಖ ಅವರು ಹೊರಬಂದಿದ್ದಾರೆ. ಇವರ ಜಾಗಕ್ಕೆ ಬೇರೆಯವರನ್ನು ಬೇರೆ ತೀರ್ಪುಗಾರರನ್ನು ತಂದು ಕೂರಿಸಬಹುದು ಎಂದು ಹೇಳಲಾಗಿತ್ತು. ಈಗ ಎಲ್ಲರಿಗೂ ಡಾ. ಹಂಸಲೇಖ ಅವರು ಸ್ಪಷ್ಟನೆ ನೀಡಿದ್ದಾರೆ.
ನನ್ನ ಆರೋಗ್ಯ ಸ್ಥಿರವಾಗಿದ್ದು, ಸರಿಗಮಪ ಸಂಗೀತ ರಿಯಾಲಿಟಿ ಶೋ ನನ್ನ ಪ್ರೀತಿಯ ಭೂಮಿಕೆ, ಮನಸ್ಸು-ಮನಸ್ಸುಗಳನ್ನು ನೇಯುವ ವೇದಿಕೆ, ತೊರೆಯುವುದಿಲ್ಲ, ಸದ್ಯದಲ್ಲಿಯೇ ತಂಡಕ್ಕೆ ಬೇಗ ಸೇರಿಕೊಳ್ಳುತ್ತೇನೆ ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡೋ ಎಲ್ಲಾ ಚರ್ಚೆಗೂ ತೆರೆ ಎಳೆದಿದ್ದಾರೆ. ಈ ಸಂಬಂಧ ಕಾರ್ಯಕ್ರಮ ಆಯೋಜಕರು ಕೂಡ ಪೋಸ್ಟ್ ಮಾಡಿದ್ದಾರೆ.
ಹಂಸಲೇಖ ಇತ್ತೀಚೆಗೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಸಹ ಹಾಜರಾಗಿದ್ದರು. ಈ ಬೆಳವಣಿಗೆಗಳಿಂದ ನೊಂದು ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿತ್ತು. ಹೀಗಾಗಿ ಸರಿಗಮಪ ಸಂಗೀತ ರಿಯಾಲಿಟಿ ಶೋಗೆ ಬರಲು ಆಗಿರಲಿಲ್ಲ ಎನ್ನಲಾಗಿದೆ.