ಸಂಗ್ರಹಾಗಾರದಿಂದ 5 ಮಿಲಿಯನ್ ಬ್ಯಾರೆಲ್ ಕಚ್ಚಾತೈಲ ಬಿಡುಗಡೆ ಮಾಡಲಿರುವ ಭಾರತ; ತೈಲ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಗೆ ಒತ್ತಡ ಹೇರಲು ಈ ಕ್ರಮ  | India to release 5 million barrels of crude oil from strategic reserves to cool prices

ಸಂಗ್ರಹಾಗಾರದಿಂದ 5 ಮಿಲಿಯನ್ ಬ್ಯಾರೆಲ್ ಕಚ್ಚಾತೈಲ ಬಿಡುಗಡೆ ಮಾಡಲಿರುವ ಭಾರತ; ತೈಲ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಗೆ ಒತ್ತಡ ಹೇರಲು ಈ ಕ್ರಮ 

ಪ್ರಾತಿನಿಧಿಕ ಚಿತ್ರ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್​ಗೆ 79 ಡಾಲರ್​​ಗೆ ಕುಸಿತವಾಗಿದೆ. ಇದರಿಂದ ತೈಲ ಸಂಗ್ರಹಾಗಾರಗಳಲ್ಲಿ ಇರುವ ಕಚ್ಚಾತೈಲ ಬಿಡುಗಡೆಯ ಬಗ್ಗೆ ದೇಶಗಳ ನಡುವೆ ಚರ್ಚೆ ನಡೆದಿದೆ. ಅಮೆರಿಕ, ಜಪಾನ್, ಭಾರತ, ಆಸ್ಟ್ರೇಲಿಯಾ ನಡುವೆ ಚರ್ಚೆ ನಡೆದಿದ್ದು, ಭಾರತ 5 ಮಿಲಿಯನ್ ಬ್ಯಾರೆಲ್ ಕಚ್ಚಾತೈಲ ಬಿಡುಗಡೆ ಮಾಡಲು ಯೋಜಿಸಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಭಾರತದಲ್ಲಿ ಸದ್ಯ 26 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವಿದೆ. ‘ಭಾರತದಿಂದ ಸಂಗ್ರಹಾಗಾರದಲ್ಲಿರುವ 5 ಮಿಲಿಯನ್ ಬ್ಯಾರೆಲ್ ಕಚ್ಚಾತೈಲ ಬಿಡುಗಡೆ ಮಾಡಿ ದೇಶದ ಜನರ ಬಳಕೆಗೆ ಬಿಡುಗಡೆಗೆ ಕೇಂದ್ರ ಸರ್ಕಾರದ ನಿರ್ಧರಿಸಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಗೆ ಒತ್ತಡ ಹೇರಲು ಈ ಕ್ರಮ ಕೈಗೊಳ್ಳಲಾಗಿದೆ. ತುರ್ತು ಬಳಕೆಗೆ ಸಂಗ್ರಹಿಸಿದ್ದ ಕಚ್ಚಾ ತೈಲ ಬಳಕೆಗೆ ಬಿಡುಗಡೆ ಮಾಡಲಾಗಿದ್ದು, ಭಾರತ, ಆಮೆರಿಕಾ , ಜಪಾನ್, ದಕ್ಷಿಣ ಕೊರಿಯಾ ಸೇರಿದಂತೆ ಪ್ರಮುಖ ದೇಶಗಳು ಕೂಡ ಇದೇ ರೀತಿಯ ತೀರ್ಮಾನ ತೆಗೆದುಕೊಳ್ಳಲಿವೆ’ ಎಂದು ಮೂಲಗಳು ತಿಳಿಸಿವೆ.

ಸರ್ಕಾರಿ ಉನ್ನತ ಅಧಿಕಾರಿಯೋರ್ವರು ತಿಳಿಸಿರುವ ಮಾಹಿತಿಯಂತೆ, ಭಾರತವು ಯುಎಸ್, ಜಪಾನ್ ಮತ್ತು ಇತರ ಪ್ರಮುಖ ಆರ್ಥಿಕತೆಗಳೊಂದಿಗೆ ಬೆಲೆಯನ್ನು ಕಡಿಮೆಗೊಳಿಸಲು ತನ್ನ ತುರ್ತು ದಾಸ್ತಾನುಗಳಿಂದ ಸುಮಾರು 5 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಬಿಡುಗಡೆ ಮಾಡಲು ಯೋಜಿಸಿದೆ. ಭಾರತವು ಪೂರ್ವ ಮತ್ತು ಪಶ್ಚಿಮ ಕರಾವಳಿಯಲ್ಲಿ ಮೂರು ಸ್ಥಳಗಳಲ್ಲಿ ಭೂಗತ ಪ್ರದೇಶದಲ್ಲಿ ಸುಮಾರು 38 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಸಂಗ್ರಹಿಸುತ್ತದೆ. ಸದ್ಯ 26 ಮಿಲಿಯನ್ ಬ್ಯಾರೆಲ್ ಕಚ್ಚಾತೈಲವಿದೆ ಎನ್ನಲಾಗಿದ್ದು, ಅದರಲ್ಲಿ 5 ಮಿಲಿಯನ್ ಬ್ಯಾರೆಲ್ ಬಿಡುಗಡೆ ಮಾಡಲು ಯೋಜಿಸಲಾಗಿದೆ.

ಬಳಕೆಗೆ ಬಿಡುಗಡೆ ಮಾಡುವ ಸಂಗ್ರಹವನ್ನು ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಗೆ ಮಾರಾಟ ಮಾಡಲಾಗುತ್ತದೆ. ಇವುಗಳನ್ನು ಆಯಕಟ್ಟಿನ ಮೀಸಲುಗಳಿಗೆ ಪೈಪ್‌ಲೈನ್ ಮೂಲಕ ಸಂಪರ್ಕಿಸಲಾಗಿದೆ. ನಾವು ಕೆಲ ಕಾಲದ ನಂತರ ಸಂಗ್ರಹದಲ್ಲಿರುವ ಹೆಚ್ಚಿನ ತೈಲವನ್ನು ಬಿಡುಗಡೆ ಮಾಡುವುದನ್ನು ನಿರೀಕ್ಷಿಸಬಹುದು ಎಂದು ಅಧಿಕಾರಿ ತಿಳಿಸಿದ್ದು, ಅಧಿಕೃತ ಪ್ರಕಟಣೆಯನ್ನು ಸದ್ಯದಲ್ಲೇ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ:

ಪಿಎಂ ಮೋದಿ ಟೀಂನಿಂದ ರಾಜಕೀಯಕ್ಕೆ ಬರುವಂತೆ ಪುನೀತ್​ಗೆ ಬಂದಿತ್ತು ಆಹ್ವಾನ; ನಕ್ಕು ಎದ್ದು ಹೋಗಿದ್ದ ಅಪ್ಪು

ಲೈಮ್ ಸ್ಟೋನ್ ಗಣಿಗಾರಿಕೆಯಲ್ಲಿ 5 ಸ್ಟಾರ್ ರೇಟಿಂಗ್ ಪಡೆದುಕೊಂಡ ಮೈ ಹೋಮ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್​

TV9 Kannada

Leave a comment

Your email address will not be published. Required fields are marked *