ರಸ್ತೆ ಅಪಘಾತದಲ್ಲಿ ಸಂಚಾರಿ ವಿಜಯ್​ ನಿಧನ ಇಡೀ ಕರ್ನಾಟಕಕ್ಕೆ ಸೂತಕದ ಛಾಯೆ ತಂದೊಡ್ಡಿತ್ತು. ವಾರ ಕಳೆದ್ರೂ ಪ್ರತಿ ದಿನ ಅವರ ಅಭಿಮಾನಿಗಳು ಸಂಚಾರಿ ವಿಜಯ್ ಬಗ್ಗೆ ಮಾತಾಡಿಕೊಳ್ತಿದ್ದಾರೆ.

ಸಂಚಾರಿ ವಿಜಯ್​ಗೆ ಅಣ್ಣಾವ್ರು ಪ್ರೇರಣೆ
ವಿಜಯ್ ಸ್ನೇಹಿತ ಬ್ರಿಜೇಶ್ ಈ ಬಗ್ಗೆ ಮಾತನಾಡಿದ್ದು.. ಹೌದು ವಿಜಯ್​ ಒಮ್ಮೆ ತಮ್ಮ ಅಂಗಾಂಗವನ್ನ ದಾನ ಮಾಡ್ಬೇಕು ಅಂತ ನಿರ್ಧರಿಸಿದ್ರು. ಅಣ್ಣಾವ್ರು ತಮ್ಮ ನೇತ್ರಗಳನ್ನ ದಾನ ಮಾಡಿದಂತೆ ತಾವು ದಾನ ಮಾಡುವ ಬಗ್ಗೆ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ರು ಎಂದು ತಿಳಿಸಿದ್ದಾರೆ.

ವಿಜಯ್​ ಅವರಿಗೆ ಅಪಘಾತವಾದಾಗ ವಿಜಯ್​ ಸ್ನೇಹಿತರು ಮೊದಲು ಕರೆ ಮಾಡಿದ್ದು ಕಿಚ್ಚು ಸುದೀಪ್​ಅವರಿಗೆ. ಸುದೀಪ್ ಕೂಡಲೇ ಕಷ್ಟಕ್ಕೆ ಸ್ಪಂದಿಸಿದ್ರು. ಅಲ್ಲದೇ ಆಸ್ಪತ್ರೆಯ ಸಿಇಓಗೆ ಕರೆ ಮಾಡಿ ಅವರು ನನ್ನ ತಮ್ಮ ಇದ್ದ ಹಾಗೆ. ಅವರ ಚಿಕಿತ್ಸೆಗೆ ಏನೆಲ್ಲಾ ವ್ಯವಸ್ಥೆ ಆಗಬೇಕೋ ಅದನ್ನ ನಾನು ಮಾಡುತ್ತೇನೆ ಎಂದಿದ್ದಾರೆ. ಆ ಕ್ಷಣದಿಂದಲೇ ವಿಜಯ್ ಚಿಕಿತ್ಸೆಗೆ ಎಲ್ಲಾ ರೀತಿಯ ವ್ಯವಸ್ಥೆ ಆಯಿತು ಎಂದು ಬ್ರಿಜೇಶ್ ಹೇಳಿದ್ದಾರೆ. ಬ್ರಿಜೇಶ್ ನೀಡಿರುವ ಕಂಪ್ಲೀಟ್ ಮಾಹಿತಿ ಇಲ್ಲಿದೆ.

The post ಸಂಚಾರಿ ವಿಜಯ್​ಗೆ ಕಿಚ್ಚ ಸುದೀಪ್ ಮಾಡಿದ ಉಪಕಾರ ಎಂಥದ್ದು ಗೊತ್ತಾ? appeared first on News First Kannada.

Source: newsfirstlive.com

Source link