ಹುಬ್ಬಳ್ಳಿ: ತುರ್ತು ಚಿಕಿತ್ಸೆಗಾಗಿ ಲಿವರ್​​ ರವಾನಿಸಲು ಸುಮಾರು 16 ಕಿಲೋ ಮೀಟರ್ ದೂರ ಜಿಯೋ ಟ್ರಾಫಿಕ್​ ವ್ಯವಸ್ಥೆ ಮಾಡಿ ಪೊಲೀಸರು ನೆರವಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಎಸ್​​ಡಿಎಂ‌ ಆಸ್ಪತ್ರೆಯಿಂದ ವಿಮಾನ ನಿಲ್ದಾಣದವರೆಗೆ ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಿ ಪೊಲೀಸರು ಆಂಬ್ಯುಲೆನ್ಸ್​ಗೆ ವ್ಯವಸ್ಥೆ ಕಲ್ಪಿಸಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ತುರ್ತು ಚಿಕಿತ್ಸೆ ನಡೆಸಲು ಹುಬ್ಬಳಿಯಲ್ಲಿ ದಾನ ಮಾಡಲಾಗಿದ್ದ ಲಿವರ್ ಅನ್ನು ರವಾನೆ ಮಾಡಲಾಗಿತ್ತು.

ನಗರದ ಎಸ್​ಡಿಎಂ ಆಸ್ಪತ್ರೆಯಲ್ಲಿ ಬ್ರೇನ್ ಡೆಡ್ ಆದ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಆತನ ಕುಟುಂಸ್ಥರು ಅಂಗಾಂಗ ದಾನ ಮಾಡಲು ನಿರ್ಧರಿಸಿ, ಅವರ ಎರಡು ಕಿಡ್ನಿ, ಕಣ್ಣು, ಲಿವರ್ ದಾನ ಮಾಡಿದ್ದರು. ಈ ನಡುವೆ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ಲಿವರ್ ರವಾನೆ ಮಾಡಲು ಪೊಲೀಸರು ಜಿರೋ ಟ್ರಾಫಿಕ್​ ವ್ಯವಸ್ಥೆ ಕಲ್ಪಿಸಿದ್ದರು.

ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಸಂಚಾರಿ ವಿಜಯ್​.. 7 ಜನರಿಗೆ ಜೀವನ

The post ಸಂಚಾರಿ ವಿಜಯ್​ರಂತೆ ‘ಸಾವಿನಲ್ಲೂ ಸಾರ್ಥಕತೆ’ ಮೆರೆದ ವ್ಯಕ್ತಿ; ಝೀರೋ ಟ್ರಾಫಿಕ್​ನಲ್ಲಿ ರವಾನೆಯಾಯ್ತು ಲಿವರ್ appeared first on News First Kannada.

Source: newsfirstlive.com

Source link