ಅಪಘಾತಕ್ಕೀಡಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಚಾರಿ ವಿಜಯ್​​ ಆರೋಗ್ಯ ಸ್ಥಿತಿ ಚಿಂತಾಜನಕವಾಗ್ತಿದೆ ಅಂತ ಇದೀಗ ನ್ಯೂರೋ ಸರ್ಜನ್​ ಡಾ.ಅರುಣ್​ ನಾಯಕ್​ ನ್ಯೂಸ್​ ಫಸ್ಟ್​ಗೆ ಎಕ್ಸ್​​ಕ್ಲೂಸಿವ್​ ಆಗಿ ತಿಳಿಸಿದ್ದಾರೆ.

‘ಸಂಚಾರಿ ವಿಜಯ್​ ಆರೋಗ್ಯ ಸ್ಥಿತಿ ಚಿಂತಾಕನಕವಾಗ್ತಿದೆ. ರಿಕವರಿ ಚಾನ್ಸ್​​ ಕಡಿಮೆ ಇದೆ. ಈ ವಿಷಯವನ್ನ ವಿಜಯ್​ ಅವರ ಕುಟುಂಬಕ್ಕೆ ಈಗಾಗಲೇ ತಿಳಿಸಿದ್ದೇನೆ’ ಅಂತ ಡಾ. ಅರುಣ್​ ನಾಯಕ್​ ಮಾಹಿತಿ ನೀಡಿದ್ದಾರೆ.

ಮೊನ್ನೆ ರಾತ್ರಿ ಅಪಘಾತಕ್ಕೀಡಾದ ನಟ ಸಂಚಾರಿ ವಿಜಯ್​ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದು, ಮೆದುಳಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಮೆದುಳಿನ ಬಲ ಭಾಗ ಗಾಯವಾಗಿದ್ದು ಹಾಗೂ ಬಲ ತೊಡೆ ಮೂಳೆ ಮುರಿದಿದೆ ಎಂಬ ಮಾಹಿತಿ ಲಭಿಸಿತ್ತು.

The post ಸಂಚಾರಿ ವಿಜಯ್​ ಆರೋಗ್ಯ ಚಿಂತಾಜನಕವಾಗ್ತಿದೆ- ಡಾ.ಅರುಣ್​ ಮಾಹಿತಿ appeared first on News First Kannada.

Source: newsfirstlive.com

Source link