ಸಂಚಾರಿ ವಿಜಯ್ ಅವರ ಮೆದುಳಿಗೆ ಬಿದ್ದಿರುವ ಪೆಟ್ಟು ತೀವ್ರವಾಗಿದ್ದು, ನಾವು ಸರ್ಜರಿ ಮಾಡಿದರೂ ಆಗಿರುವ ರಕ್ತಸ್ರಾವವನ್ನು ಮಾತ್ರ ತೆಗೆಯಬಹುದು ಅಷ್ಟೇ. ಆದರೆ ಮೆದುಳಿಗೆ ಉಂಟಾಗಿರುವ ಗಾಯವನ್ನು ಸರಿಪಡಿಸಲು ಸಾಧ್ಯವಿಲ್ಲ. ಇದರಿಂದ ಅವರು ನಿಧಾನಕ್ಕೆ ಬ್ರೈನ್​ ಡೆಡ್ ಸ್ಥಿತಿ ಹೋಗುತ್ತಿದೆ. ಈಗ ಅವರ ಕುಟುಂಬಸ್ಥರೇ ಅಂಗಾಂಗ ದಾನ ಮಾಡಲು ಮುಂದಾಗಿದ್ದಾರೆ. ಇದು ಅಂತ್ಯ ನೋಬೆಲ್​​ ಕಾಸ್​ ಆಗಿದ್ದು, ಆ ಬಗ್ಗೆ ಅಗತ್ಯವಿರುವ ಕ್ರಮಗಳನ್ನು ನಾವು ಕೈಗೊಳ್ಳುತ್ತೇವೆ ಎಂದು ಅಪೊಲೋ ಆಸ್ಪತ್ರೆಯ ನ್ಯೂರೋ ಸರ್ಜನ್​​ ಡಾ.ಅರುಣ್​ ನಾಯಕ್ ನ್ಯೂಸ್​ಫಸ್ಟ್​ಗೆ ಮಾಹಿತಿ ನೀಡಿದ್ದಾರೆ.

ಇಂತಹ ಪ್ರಕರಣದಲ್ಲಿ ದೊಡ್ಡ ಹೊಡೆತ ಮೆದುಳಿಗೆ ಬಿದ್ದಿರುವುದರಿಂದ ಅವರು ಅದರಿಂದ ಹೊರಬರೋಕೆ ಆಗಲ್ಲ. ಅಪಘಾತ ನಡೆದ 15 ನಿಮಿಷದಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಕಾರಣ ಅವರನ್ನು ಇಲ್ಲಿಯವರೆಗೂ ಉಳಿಸಿಕೊಂಡಿದ್ದೇವೆ. ಇಂತಹ ಎಷ್ಟೋ ಪ್ರಕರಣದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿರುವುದು ನಾವು ನೋಡಿದ್ದೇವೆ.

ಸಂಚಾರಿ ವಿಜಯ್​ ಅವರು ಇನ್ನಿಲ್ಲ ಎಂದು ಹೇಳಬಹುದಾ ಎಂಬ ಪ್ರಶ್ನೆಗೆ ಉತ್ತರಿಸಿದ ವೈದ್ಯರು, ನಾವು ಈಗ ಬ್ರೈನ್​​ ಡೆಡ್​​ ಸ್ಟೇಜ್​ ಅಂತಾ ಮಾತ್ರ ಹೇಳುತ್ತಿದ್ದೇವೆ. ಬ್ರೈನ್​​ ಡೆಡ್​​ ಸ್ಟೇಜ್​ಗೂ ಮತ್ತು ಸಾವಿಗೂ ಯಾವುದೇ ಸಂಬಂಧ ಇರೋದಿಲ್ಲ. ಬ್ರೈನ್​ ಡೆಡ್​ ಆದ ಮೇಲೂ ಹೃದಯ ಬಡಿತ ಇರುತ್ತದೆ. ಆದ್ದರಿಂದ ಹೃದಯ ಬಡಿತ ನಿಂತ ಮೇಲೆ ಅಷ್ಟೇ ಸಾವು ಎಂದು ಹೇಳಬಹುದು. ಆದರೆ ಅವರ ಹೃದಯ ಇನ್ನೂ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಈಗ ಅವರ ಕುಟುಂಬಸ್ಥರು ಮುಂದೇ ಬಂದು ಅಂಗಾಂಗ ದಾನ ಮಾಡೋದಾಗಿ ಹೇಳಿದ್ದಾರೆ. ಈಗ ನಾವು ಅದರ ಬಗ್ಗೆ ಯೋಚನೆ ಮಾಡಿ ಅಂಗಾಂಗ ಕಸಿಗೆ ಏನು ಬೇಕು ಅದನ್ನು ಮಾಡಿಕೊಂಡು ಅದು ಆದ ಮೇಲೆ ಡಿಕ್ಲರೇಷನ್​​ ಪ್ರಕ್ರಿಯೆನ್ನು ಮಾಡುತ್ತೇವೆ. ಅವರು ಈಗ ಬದುಕಿದ್ದಾರೆ ಎಂದರು.

ಅವರ ಮೆದುಳು ಮತ್ತೆ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದು ಖಚಿತವಾದ ಬಳಿಕಷ್ಟೇ ನಾವು ಬ್ರೈನ್​ ಡೆಡ್​ ಎಂದು ಹೇಳುತ್ತೇವೆ. ಮುಂದಿನ ಕೆಲ ಗಂಟೆಗಳಲ್ಲಿ ಇದರ ಪ್ರಕ್ರಿಯೆ ನಡೆಯುತ್ತದೆ. ಇದಕ್ಕೆ ಕರ್ನಾಟಕ ಸರ್ಕಾರದ ನೆರವು ಕೂಡ ಬೇಕಾಗುತ್ತದೆ. ಡಿಸಿಎಂ ಅಶ್ವತ್ಥ್​ ನಾರಾಯಣ್ ಅವರು ಮಾತನಾಡಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ. ಏಕೆಂದರೇ ನಾವು ಎಷ್ಟೋ ಪ್ರಕರಣಗಳಲ್ಲಿ ಅಂಗಾಂಗ ದಾನ ಮಾಡುವ ಪ್ರಕ್ರಿಯೆ ಆರಂಭ ಮಾಡಿದರೂ ಅದು ಆಗಲ್ಲ. ಸಂಚಾರಿ ವಿಜಯ್ ವಿಚಾರದಲ್ಲಿ ನಾವು ಯಶಸ್ವಿ ಆಗೋಣ ಎಂಬುವುದು ಉದ್ದೇಶ ಎಂದರು.

The post ಸಂಚಾರಿ ವಿಜಯ್​ ಕುಟುಂಬಸ್ಥರೇ ಅಂಗಾಂಗ ದಾನ ಮಾಡಲು ಮುಂದೆ ಬಂದಿದ್ದಾರೆ- ಡಾ. ಅರುಣ್ ನಾಯಕ್ appeared first on News First Kannada.

Source: newsfirstlive.com

Source link