ಬೆಂಗಳೂರು: ಇತ್ತೀಚೆಗೆ ಸ್ಯಾಂಡಲ್​ವುಡ್​ನ ಪ್ರತಿಭಾವಂತ ನಟ ಸಂಚಾರಿ ವಿಜಯ್ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಿಧನರಾದರು. ಈ ವೇಳೆ ಸಂಚಾರಿ ವಿಜಯ್ ಕುಟುಂಬಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳು ಹರಿದಾಡಿದವು.. ಅವರ ಕುಟುಂಬಕ್ಕೆ ಪಂಚನಹಳ್ಳಿಯಲ್ಲಿ ಜಾತಿ ನಿಂದನೆ ಮಾಡಲಾಗಿತ್ತು ಎಂಬ ಹೇಳಿಕೆಗಳೂ ಕೇಳಿಬಂದವು.

ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಂಚಾರಿ ವಿಜಯ್ ಅವರ ಸಹೋದರ ಪಂಚನಹಳ್ಳಿಯಲ್ಲಿ ನೆಲೆಸಿರುವ ವಿರೂಪಾಕ್ಷ ಅವರು ಸ್ಪಷ್ಟನೆ ನೀಡಿದ್ದು.. ಇಡೀ ಊರು ನಮ್ಮನ್ನ ನಮ್ಮ ತಾಯಿ ತಂದೆಯನ್ನ ಪ್ರೀತಿಯಿಂದ ನೋಡಿಕೊಂಡಿದ್ದಾರೆ.. ನಮಗಾಗಲಿ ನಮ್ಮ ಕುಟುಂಬಕ್ಕಾಗಿ ಯಾವುದೇ ಜಾತಿ ನಿಂದನೆಗಳು ಆಗಿಲ್ಲ ಎಂದು ಹೇಳಿದ್ದಾರೆ.

ನಾನು ಮತ್ತು ನನ್ನ ತಮ್ಮ ಹುಟ್ಟಿದ್ದು ಅಂಜಪುರವಾಗಿದ್ದರು ನಮ್ಮ ಹುಟ್ಟುರು ಪಂಚನಹಳ್ಳಿ ಎಂದೇ ನಾವು ಭಾವಿಸಿದ್ದೇವೆ. ಇಡೀ ಊರು ನಮ್ಮನ ನಮ್ಮ ತಾಯಿ ತಂದೆಯನ್ನ ಪ್ರೀತಿಯಿಂದ ನೋಡಿಕೊಂಡಿದ್ದಾರೆ.. ನಮಗಾಗಲಿ ನಮ್ಮ ಕುಟುಂಬಕ್ಕಾಗಿ ಯಾವುದೇ ಜಾತಿ ನಿಂದನೆಗಳು ಆಗಿಲ್ಲ. ಈ ವಿಚಾರವಾಗಿ ಲೇಖನಗಳು ಅದ್ಯಾಕೆ ಬರುತ್ತಿವೆ ಅನ್ನೋದು ನಮಗೆ ಗೊತ್ತಾಗುತ್ತಿಲ್ಲ. ಸುದ್ದಿಗಳಿಂದ ಪಂಚನಹಳ್ಳಿಯ ಗ್ರಾಮಸ್ಥರಿಗೆ ಸ್ನೇಹಿತರಿಗೆ ಏನಾದ್ರು ಬೇಸರವಾಗಿದ್ದರೆ ಕ್ಷಮೆ ಇರಲಿ ಎಂದು ಸಂಚಾರಿ ವಿಜಯ್ ಅವರ ಅಣ್ಣ ವಿರೂಪಾಕ್ಷ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ಆದ್ರೆ ಖ್ಯಾತ ನಟ ನೀನಾಸಂ ಸತೀಶ್ ಸೇರಿದಂತೆ ಹಲವರು ಅವರು ನಿಧನರಾದ ದಿನದಿಂದಲೇ ವಿಜಯ್ ಜಾತಿ ನಿಂದನೆ ಎದುರಿಸಿದ್ರು. ಅವರ ಜಾತಿ ಕಾರಣದಿಂದಾಗಿ ಸಾಕಷ್ಟು ನೊಂದಿದ್ರು ಅಂತಾ ನಿರಂತರ ಹೇಳಿಕೆಗಳನ್ನ ನೀಡುತ್ತಲೇ ಇದ್ದಾರೆ. ಇನ್ನೂ ಕೆಲವರಂತೂ ಅವರ ಜಾತಿ ಮತ್ತು ಸಾವಿಗೂ ಲಿಂಕ್ ಕಲ್ಪಿಸುವಂಥ ಯತ್ನ ಮಾಡಿದ್ರು. ಆದ್ರೆ ವಿಜಯ್ ಇದ್ದಾಗ ಈ ಬಗ್ಗೆ ಎಂದಿಗೂ ಬಹಿರಂಗವಾಗಿ ಮಾತನಾಡಿರಲಿಲ್ಲ. ಜೊತೆಗೆ ಅವರ ಸೋದರರು ಈ ಬಗ್ಗೆ ಹೇಳಿರಲಿಲ್ಲ. ಹೀಗಾಗಿ ವಿಡಿಯೋವೊಂದನ್ನು ಮಾಡಿರುವ ಸಂಚಾರಿ ವಿಜಯ್ ಸೋದರ, ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

The post ಸಂಚಾರಿ ವಿಜಯ್​ ನಿಧನಾನಂತರ ಅಂಕೆಯಿಲ್ಲದ ಮಾತು; ಜಾತಿ ನಿಂದನೆ ಬಗ್ಗೆ ಅವರ ಸೋದರ ಹೇಳಿದ್ದೇನು? appeared first on News First Kannada.

Source: newsfirstlive.com

Source link