ಮೊನ್ನೆ ರಾತ್ರಿ ಸ್ನೇಹಿತನ ಮನೆಗೆ ತೆರಳಿ ವಾಪಾಸಾಗುತ್ತಿದ್ದ ವೇಳೆ ನಟ ಸಂಚಾರಿ ವಿಜಯ್​ಗೆ ಅಪಘಾತ ಸಂಭವಿಸಿ ಮೆದುಳು ಹಾಗೂ ಬಲ ತೊಡೆಗೆ ತೀವ್ರ ಗಾಯಗಳಾಗಿವೆ. ಸದ್ಯ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಜಯ್​ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿದೆ. ಇಂದು ಅವರ ಆರೋಗ್ಯದ ಬಗ್ಗೆ ಮಾಹಿತಿ ತಿಳಿಸಲಿರೋ ವೈದ್ಯರು, ಬೆಳಗ್ಗೆ 11 ಗಂಟೆಗೆ ಮತ್ತೊಂದು ಹೆಲ್ತ್​ ಬುಲೆಟಿನ್​ ರಿಲೀಸ್​ ಮಾಡಲಿದ್ದಾರೆ.

ಸಂಚಾರಿ ವಿಜಯ್​ಗೆ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಯಕ್ಕೆ ವೆಂಟಿಲೇಟರ್ ಸಹಾಯದಲ್ಲಿರೋ ವಿಜಯ್ ಹೃದಯಬಡಿತ ಹಾಗೂ ಬಿಪಿ ನಾರ್ಮಲ್​ ಆಗಿದ್ದು, ಯಾವುದೇ ವ್ಯತ್ಯಾಸವಾಗಿಲ್ಲ. ಆದ್ರೆ ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಇದ್ದಾರೆ. ಅಪೋಲೋ ಆಸ್ಪತ್ರೆಯ ನ್ಯೂರೋ ಸರ್ಜನ್​ ಡಾ.ಅರುಣ್ ನಾಯಕ್ ಇಂದು ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ.

The post ಸಂಚಾರಿ ವಿಜಯ್ ಆರೋಗ್ಯ ಸ್ಥಿತಿ ಗಂಭೀರ; ಬೆಳಗ್ಗೆ 11ಕ್ಕೆ ಮತ್ತೊಂದು ಹೆಲ್ತ್​​ ಬುಲೆಟಿನ್​ appeared first on News First Kannada.

Source: newsfirstlive.com

Source link