ಬೆಂಗಳೂರು: ಸಂಚಾರಿ ವಿಜಯ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬದವರ ಜೊತೆ ಮಾತನಾಡಿದ ಡಿಸಿಎಂ ಅಶ್ವತ್ಥ್ ನಾರಾಯಣ್ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ.. ಸಂಚಾರಿ ವಿಜಯ್ ಅವರನ್ನ ಉಳಿಸುವ ಎಲ್ಲ ಪ್ರಯತ್ನಗಳನ್ನೂ ಮಾಡಲಾಗ್ತಿದೆ ಎಂದಿದ್ದಾರೆ.

ಸಂಚಾರಿ ವಿಜಯ್ ಅವರ ಸ್ಥಿತಿ ಬಹಳ ಕ್ರಿಟಿಕಲ್ ಆಗಿದೆ. ಜೀವ ಉಳಿಸಲು ಎಲ್ಲ ಪ್ರಯತ್ನ ನಡೆಯುತ್ತಿದೆ. ಯಾರೂ ನಂಬಲಾರದ ಸ್ಥಿತಿಯಲ್ಲಿದ್ದೇವೆ. ಆಸ್ಪತ್ರೆಯವರು ಇವರ ಬಿಲ್ ಕಟ್ಟುವ ಅವಶ್ಯಕತೆ ಬೇಡ ಎಂದಿದ್ದಾರೆ. ಕಟ್ಟಿರುವ ಹಣವನ್ನೂ ವಾಪಸ್ ನೀಡುತ್ತಿದ್ದಾರೆ. ಏನೆಲ್ಲ ಪ್ರಯತ್ನ ಮಾಡಲಾಗುತ್ತೆ ಮಾಡಿ.. ಅವರ ಜೀವ ಉಳಿಸಿ ಎಂದು ವೈದ್ಯರ ಬಳಿ ಮಾತನಾಡಿದ್ದೇವೆ. ಅವರ ಕುಟುಂಬದವರನ್ನ ಭೇಟಿಯಾಗಿ ಮಾತನಾಡಿದ್ದೇನೆ.

ಸ್ಪಷ್ಟವಾಗಿ ಹೇಳಬೇಕೆಂದರೆ ಬ್ರೇನ್ ನಿಷ್ಕ್ರಿಯವಾಗಿದೆ.. ಜೀವವಿರುವವರೆಗೂ ಡೆಡ್ ಅಂತ ಡಿಕ್ಲೇರ್ ಮಾಡಕ್ಕಾಗಲ್ಲ.. ಅವರಿನ್ನೂ ಜೀವಂತವಾಗಿದ್ದಾರೆ. ಜೀವ ಹೋಗಿಲ್ಲ. ಅವರು ಜೀವ ಕಳೆದುಕೊಂಡ್ರೆ ಅವಶ್ಯಕತೆ ಇರುವವರಿಗೆ ಅಂಗಾಂಗಗಳು ಸಿಗಲಿ ಅಂತ ಕುಟುಂಬದವರು ಬಯಸಿದ್ದಾರೆ. ಆನ್​ಲೈನ್​ನಲ್ಲಿ ಅವರು ತೀರಿಕೊಂಡಿದ್ದಾರೆಂದು ಸುದ್ದಿ ಹರಿದಾಡುತ್ತಿದೆ. ವೈಟಲ್ ಪ್ಯಾರಾಮೀಟರ್ಸ್ ನಾರ್ಮಲ್ ಇದೆ ಎಂದು ಹೇಳಿದ್ದಾರೆ.

The post ಸಂಚಾರಿ ವಿಜಯ್ ಉಸಿರಾಡ್ತಿದ್ದಾರೆ.. ಅವರನ್ನ ಉಳಿಸುವ ಎಲ್ಲ ಪ್ರಯತ್ನ ಮಾಡಲಾಗ್ತಿದೆ- ಡಿಸಿಎಂ appeared first on News First Kannada.

Source: newsfirstlive.com

Source link