ಬೆಂಗಳೂರು: ಸಂಚಾರಿ ವಿಜಯ್ ಆರೋಗ್ಯಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ ಡಾ. ಅರುಣ್ ನಾಯಕ್ ಅವರು ಸಂಚಾರಿ ವಿಜಯ್ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ.. ಅವರ ಮೆದುಳು ಕೆಲಸ ಮಾಡುತ್ತಿಲ್ಲ.. ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.

ಇಂದು ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ವೈದ್ಯರು, ವಿಜಯ್​ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಿ 36 ಗಂಟೆಗಳು ಆಗಿದೆ. ಅವರು ಆಸ್ಪತ್ರೆಗೆ ಬಂದಾಗ ಅವರ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ಅವರು ಉಸಿರಾಟ ಮಾಡುತ್ತಿದ್ದ ಕಾರಣ ಅವರಿಗೆ ಸಿಟಿ ಸ್ಕ್ಯಾನ್​ ಮಾಡಿದ್ದೇವು. ಆ ಬಳಿಕ ಅವರ ಕುಟುಂಬಸ್ಥರ ಅನುಮತಿ ಪಡೆದು ಶಸ್ತ್ರಚಿಕಿತ್ಸೆ ಮಾಡಿದ್ದೇವು. ಸದ್ಯ ಅವರು 36 ಗಂಟೆಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ಆದರೆ ಅವರ ಉಸಿರಾಟ ಕಡಿಮೆಯಾಗುತ್ತಿದ್ದು, ಮೆದುಳಿಗೆ ತೀವ್ರ ಸ್ವರೂಪದ ಗಾಯ ಆಗಿರುವುದರಿಂದ ಅವರ ಬ್ರೈನ್ ಡೇಡ್​ ಆಗಿದೆ ಎಂದು ಸ್ಪಷ್ಟಪಡಿಸಿದರು.

The post ಸಂಚಾರಿ ವಿಜಯ್ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ.. ಮೆದುಳು ಕೆಲಸ ಮಾಡುತ್ತಿಲ್ಲ – ಡಾ. ಅರುಣ್ ನಾಯಕ್ appeared first on News First Kannada.

Source: newsfirstlive.com

Source link