ಸಂಜುನ ಕಿಡ್ನ್ಯಾಪ್ ಮಾಡಿ ಚಿತ್ರಹಿಂಸೆ ನೀಡಿದ ಝೇಂಡೆ; ಆದರೂ ಸಿಗಲಿಲ್ಲ ಉತ್ತರ – Jothe Jotheyali Update Sanju Kidnaped by Jende To Know the truth


ಸಂಜುನ ನೆನಪು ಮರಳಿ ಬರಲು ಆತನಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಈ ಥೆರಪಿಯಲ್ಲಿ ಭಾಗಿಯಾಗಲು ಸಂಜು ಆಸ್ಪತ್ರೆಗೆ ತೆರಳಿದ್ದ. ಈ ವೇಳೆ ಝೇಂಡೆ ಕಡೆಯವರು ಬಂದು ಆತನನ್ನು ಕಿಡ್ನ್ಯಾಪ್ ಮಾಡಿದ್ದರು.

ಸಂಜುನ ಕಿಡ್ನ್ಯಾಪ್ ಮಾಡಿ ಚಿತ್ರಹಿಂಸೆ ನೀಡಿದ ಝೇಂಡೆ; ಆದರೂ ಸಿಗಲಿಲ್ಲ ಉತ್ತರ

ಝೇಂಡೆ-ಸಂಜು

ಧಾರಾವಾಹಿ: ಜೊತೆ ಜೊತೆಯಲಿ

ವಾಹಿನಿ: ಜೀ ಕನ್ನಡ

ನಿರ್ದೇಶನ: ಆರೂರು ಜಗದೀಶ
ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು
ಸಮಯ: ರಾತ್ರಿ: 9.30

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಸಂಜುಗೆ ಪದೇ ಪದೇ ಪತ್ನಿ ಆರಾಧನಾ ಬಗ್ಗೆ ಪ್ರಶ್ನೆ ಬರುತ್ತಿದೆ. ಆಕೆಗೆ ಕರೆ ಮಾಡುವಂತೆ ಅನು ಸಿರಿಮನೆ ಹೇಳುತ್ತಿದ್ದಾಳೆ. ಆದರೆ ಆರ್ಯವರ್ಧನ್ ಆಲೋಚನೆ ಬೇರೆಯೇ ಇದೆ. ತಾನು ಅನುಗೆ ಕ್ಲೋಸ್ ಆಗಬೇಕು ಎಂಬುದು ಅವನ ಉದ್ದೇಶ. ಈ ಕಾರಣಕ್ಕೆ ಆರಾಧನಾ ಇಂದ ದೂರ ಆಗಲು ಪ್ರಯತ್ನಿಸುತ್ತಿದ್ದಾನೆ.

ಇಂದಿನ ಎಪಿಸೋಡ್ ಹೈಲೈಟ್

ಕಿಡ್ನ್ಯಾಪ್ ಆದ ಸಂಜು

ಸಂಜುಗೆ ಅಪಘಾತ ಆಗಿ ತಲೆಗೆ ಪೆಟ್ಟು ಬಿದ್ದಿರುವುದರಿಂದ ಆತನಿಗೆ ನೆನಪು ಮಾಸಿದೆ. ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಆಗಿರುವುದರಿಂದ ಆತನ ಲುಕ್ ಬದಲಾಗಿದೆ. ತಾನು ಯಾರು, ತನ್ನ ಹಿನ್ನೆಲೆ ಏನು ಎಂಬುದನ್ನು ಆತನಿಗೆ ಯಾರೆಂದರೆ ಯಾರೂ ಹೇಳಿಲ್ಲ. ಈಗ ಇದೇ ಪ್ರಶ್ನೆ ಆತನನ್ನು ಬಹುವಾಗಿ ಕಾಡುತ್ತಿದೆ. ಇದಕ್ಕೆ ಕಾರಣ ಝೇಂಡೆ.

ಸಂಜು ಯಾರು? ಆತ ರಾಜ ನಂದಿನಿ ವಿಲಾಸಕ್ಕೆ ಬಂದಿದ್ದೇಕೆ ಎಂಬ ಬಗ್ಗೆ ಝೇಂಡೆಗೆ ಪ್ರಶ್ನೆ ಮೂಡಿದೆ. ಈ ಪ್ರಶ್ನೆಗೆ ಉತ್ತರ ಹುಡುಕಿ ಸಂಜುನ ಮನೆಗೆ ಹೋದಾಗ ಅವನ ಫೋಟೋಗೆ ಹೂವು ಹಾಕಲಾಗಿತ್ತು. ಆಸ್ಪತ್ರೆಗೆ ಹೋಗಿ ವಿಚಾರಿಸಿದಾಗ ಆತ ಸತ್ತಿದ್ದಾನೆ ಎಂದು ಹೇಳಿದ್ದರು. ಇದರಿಂದ ಝೇಂಡೆ ಅನುಮಾನ ಹೆಚ್ಚಾಗಿದೆ. ಸತ್ತ ವ್ಯಕ್ತಿ ಇಲ್ಲಿಗೆ ಬಂದಿದ್ದು ಏಕೆ ಎಂಬ ಪ್ರಶ್ನೆ ಕಾಡಿದೆ. ಇದಕ್ಕೆ ಉತ್ತರ ಕಂಡುಕೊಳ್ಳಲು ಸಂಜುನ ಕಿಡ್ನ್ಯಾಪ್ ಮಾಡಿದ್ದಾನೆ ಝೇಂಡೆ.

ಸಂಜುನ ನೆನಪು ಮರಳಿ ಬರಲು ಆತನಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಈ ಥೆರಪಿಯಲ್ಲಿ ಭಾಗಿಯಾಗಲು ಸಂಜು ಆಸ್ಪತ್ರೆಗೆ ತೆರಳಿದ್ದ. ಆದರೆ, ಯಾಕೋ ಆಸ್ಪತ್ರೆಯ ಒಳಗೆ ಹೋಗಲು ಆತನಿಗೆ ಮನಸ್ಸು ಬರಲೇ ಇಲ್ಲ. ಹೀಗಾಗಿ, ಸಂಜು ಆಸ್ಪತ್ರೆ ಹೊರಗೆ ಯೋಚನೆ ಮಾಡುತ್ತಾ ನಿಂತಿದ್ದ. ಈ ವೇಳೆ ಝೇಂಡೆ ಕಡೆಯವರು ಬಂದು ಆತನನ್ನು ಕಿಡ್ನ್ಯಾಪ್ ಮಾಡಿದ್ದರು.

ಸಂಜುಗೆ ಝೇಂಡೆ ಹೊಡೆದಿದ್ದಾನೆ. ಆತನ ಮುಖಕ್ಕೆ ಗಾಯಗಳಾಗಿವೆ. ‘ನೀನು ಯಾರು? ನೀನು ಆ ಮನೆಗೆ ಸೇರಿದ್ದು ಯಾಕೆ’ ಎಂದು ಪ್ರಶ್ನೆ ಮಾಡಿದ್ದಾನೆ. ಆದರೆ, ಇದಕ್ಕೆ ಉತ್ತರ ಹೇಳೋಕೆ ಸಂಜುಗೆ ಸಾಧ್ಯವಾಗಿಲ್ಲ. ಹೀಗಾಗಿ ಆತ ಕಣ್ಣೀರು ಹಾಕಿದ್ದಾನೆ. ಆತನನ್ನು ನಂತರ ರಸ್ತೆಯ ಮಧ್ಯದಲ್ಲಿ ಎಸೆದು ಹೋಗಿದ್ದಾರೆ ಝೇಂಡೆ ಕಡೆಯವರು.

ದಾರಿ ಮಧ್ಯೆ ಬಿದ್ದ ಸಂಜು ಕಣ್ಣೀರು ಹಾಕುತ್ತಿದ್ದ. ಆ ಸಮಯಕ್ಕೆ ಸರಿಯಾಗಿ ಅನುನ ಆಗಮನ ಆಗಿದೆ. ಆಕೆ ಆತನನ್ನು ಕಾರಿನಲ್ಲಿ ವಠಾರಕ್ಕೆ ಕರೆದುಕೊಂಡು ಹೋಗಿದ್ದಾಳೆ. ಸಂಜುಗೆ ಏನಾಯಿತು ಎಂಬ ಬಗ್ಗೆ ಆಕೆಗೆ ಆತಂಕ ಕಾಡಿದೆ. ಇದೇ ಆತಂಕದಲ್ಲಿ ಆಕೆ ನಿರಂತರವಾಗಿ ಸಂಜುನ ಪ್ರಶ್ನೆ ಮಾಡಿದ್ದಾಳೆ. ಆದರೆ, ಆತ ಅದಕ್ಕೆಲ್ಲ ಉತ್ತರ ನೀಡುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ, ಸುಮ್ಮನಾಗಿದ್ದಾನೆ.

ಸಂಜುನ ನೇರ ಪ್ರಶ್ನೆ

ಸಂಜುಗೆ ತಾನು ಯಾರು ಎಂಬ ಅನುಮಾನ ಕಾಡಿದೆ. ಅದನ್ನು ತಿಳಿದುಕೊಳ್ಳಲೇಬೇಕಿದೆ. ಹೀಗಾಗಿ, ಆತ ನೇರವಾಗಿ ಅನು ಬಳಿ ಪ್ರಶ್ನೆ ಮಾಡಿದ್ದಾನೆ. ನಾನು ಯಾರು ಎಂದು ದಯವಿಟ್ಟು ಹೇಳಿ ಎಂದು ಅಂಗಲಾಚಿದ್ದಾನೆ. ಇದಕ್ಕೆ ಅನುಗೆ ಏನು ಉತ್ತರ ನೀಡಬೇಕು ಎಂಬುದೇ ಗೊತ್ತಾಗಿಲ್ಲ.

ಬದಲಾಯಿತು ಮೀರಾ ನಿರ್ಧಾರ

ಆರ್ಯವರ್ಧನ್ ಪಿ.ಎ. ಆಗಿದ್ದ ಮೀರಾ ಹೆಗ್ಡೆ ಕಂಪನಿ ಬಗ್ಗೆ ಅತೀವ ಪ್ರೀತಿ ಹಾಗೂ ಕಾಳಜಿ ತೋರುತ್ತಾಳೆ. ಆದರೆ, ಇದನ್ನು ಝೇಂಡೆ ವಿರೋಧಿಸಿದ್ದ. ಈ ಮನೆಯವರು ನಮ್ಮನ್ನು ಬಳಸಿಕೊಳ್ಳುತ್ತಾರೆ ಎಂಬ ಮಾತನ್ನು ಹೇಳಿದ್ದ. ಈಗ ಸಂಜು ಕಾಣದೇ ಇರುವ ವಿಚಾರಕ್ಕೆ ಹರ್ಷನು ಮೀರಾಗೆ ಬೈದಿದ್ದ. ಇದರಿಂದ ಬೇಸರಗೊಂಡ ಆಕೆ ಝೇಂಡೆ ಬಣ ಸೇರುವ ನಿರ್ಧಾರಕ್ಕೆ ಬಂದಿದ್ದಾಳೆ. ವರ್ಧನ್ ಕಂಪನಿ ಹಾಗೂ ಈ ಕುಟುಂಬಕ್ಕೆ ತಾನು ಸೇವೆ ಮಾಡಿಕೊಂಡಿರಬೇಕು ಎಂಬ ನಿರ್ಧಾರದಿಂದ ಆಕೆ ಹೊರ ಬಂದಂತಿದೆ.

ಶ್ರೀಲಕ್ಷ್ಮಿ ಎಚ್.

ತಾಜಾ ಸುದ್ದಿ

TV9 Kannada


Leave a Reply

Your email address will not be published.