ಸಂಜು ಸ್ಯಾಮ್ಸನ್​​​ ಹಾಡಿಹೊಗಳಿದ​​ ಕ್ಯಾಪ್ಟನ್ ರೋಹಿತ್ ಶರ್ಮಾ..!


ಲಂಕಾ T20 ಸರಣಿಗೂ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ ಸಂಜು ಸ್ಯಾಮ್ಸನ್ ಅವರನ್ನು ಹೊಗಳಿದ್ದಾರೆ. ಸಂಜು ಅವರನ್ನು ಅಪ್ರತಿಮ ಪ್ರತಿಭೆ ಎಂದಿರುವ ಟೀಮ್​ ಇಂಡಿಯಾ ಕ್ಯಾಪ್ಟನ್​, ಸಾಟಿಯಿಲ್ಲದ ಪ್ರತಿಭೆಯನ್ನು ಹೊಂದಿದ್ದಾರೆ ಎಂದು ಬಣ್ಣಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಸ್ಯಾಮ್ಸನ್ ಅವರಂತಹ ಬ್ಯಾಟ್ಸ್‌ಮನ್ ವಿಧ್ವಂಸಕರಾಗಬಹುದು ಎಂದು ನಾಯಕ ರೋಹಿತ್ ಹೇಳಿದ್ದಾರೆ. ರೋಹಿತ್ ನಿನ್ನೆ ಆಡಿದ ಮಾತುಗಳನ್ನ ಗಮನಿಸಿದ್ರೆ, ಇಂದು ಲಂಕಾ ವಿರುದ್ಧ ಸಂಜು ಸ್ಯಾಮ್ಸನ್ ಆಡುವ ಇಲೆವೆನ್​ನಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ ಎಂದು ಹೇಳಿದರು.

News First Live Kannada


Leave a Reply

Your email address will not be published. Required fields are marked *