ಬೆಂಗಳೂರು: ಜನರು ಅಕ್ಕಿ ಕೇಳಿದರೆ ಸಾಯಿ ಹೋಗಿ ಅಂತಾ ಹೇಳುವುದು ಬಿಜೆಪಿಯ ಸಂಸ್ಕೃತಿ. ಸಚಿವ ಉಮೇಶ್​​ ಕತ್ತಿ ಅವರ ಹೇಳಿಕೆಗೆ ಸಿಎಂ, ಬಿಜೆಪಿ ಅಧ್ಯಕ್ಷರೇ ಉತ್ತರಿಸಬೇಕು. ಇಂದು ಸಂಜೆಯೊಳಗೆ ಕತ್ತಿ ಅವರನ್ನು ಸಚಿವ ಸ್ಥಾನದಿಂದ ಕಿತ್ತುಹಾಕಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಡಿಕೆಎಸ್​​, ಉಮೇಶ್ ಕತ್ತಿ ಹೇಳಿಕೆ ಬರೀ ಉಡಾಫೆಯಲ್ಲ, ಬೇಜವಾಬ್ದಾರಿತನದ ಹೇಳಿಕೆ. ಆದ್ದರಿಂದ ಇಂದು ಸಂಜೆಯೊಳಗೆ ಸಿಎಂ ಯಡಿಯೂರಪ್ಪನವರು ಸಚಿವ ಉಮೇಶ್ ಕತ್ತಿ ರಾಜೀನಾಮೆ ಪಡೆಯಬೇಕು. ಉಮೇಶ್ ಕತ್ತಿ ಹೇಳಿಕೆ ಕೇವಲ ಒಬ್ಬ ಸಚಿವರ ಹೇಳಿಕೆ ಅಷ್ಟೇ ಅಲ್ಲ, ಇದು ಸರ್ಕಾರದ ಹೇಳಿಕೆಯಾಗಿದೆ.

ಸಿಎಂ ಮನೆಗೆ ಚಟ್ಟ ಕಳುಹಿಸುತ್ತೇವೆ..
ನಾವು ಅಧಿಕಾರದಲ್ಲಿದ್ದಾಗ 7 ಕೆಜಿ ಅಕ್ಕಿ ಕೊಟ್ಟಿದ್ದೆವು, ಇವರು 5 ಕೆ.ಜಿ.ಗೆ ಇಳಿಸಿದ್ದರು. ಈಗ 2 ಕೆಜಿ ಅಕ್ಕಿ ಕೊಡುತ್ತಿದ್ದಾರೆ. ಹೀಗಾದಾಗ ಬಡವರು ಕೇಳ್ತಾರೆ, ಕೇಳಿದರೆ ಹೋಗಿ ಸಾಯಿ ಅನ್ನೋದಾ? ಕೊರೊನಾ ಕಷ್ಟದ ಕಾಲದಲ್ಲಿ ಬಡವರು ಅಕ್ಕಿ ಕೇಳಿದರೆ ಸತ್ತರೆ ಸಾಯಿ ಹೋಗಿ ಅಂತ ಹೇಳುತ್ತಾರೆ. ಇಂದು ಸಂಜೆಯೊಳಗೆ ಉಮೇಶ್ ಕತ್ತಿ ರಾಜೀನಾಮೆ ಕೊಡಬೇಕು. ಈಗ ಯೂತ್ ಕಾಂಗ್ರೆಸ್ ನವರಿಗೆ ಹೇಳಿ ಸಿಎಂ ಮನೆಗೆ ಚಟ್ಟ ಕಳುಹಿಸುತ್ತೇನೆ. ಸಿಎಂ‌ ಮನೆಗೆ ಹೋಗಿ ಚಟ್ಟ ಇಟ್ಟು ಬರಲು ಹೇಳ್ತೇನೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಅವರು ಸಾಯೋದಾ ಅಂದ್ರು.. ನಾನು ಹೌದು ಅಂದೆ ಅಷ್ಟೇ- ಉಮೇಶ್​ ಕತ್ತಿ

ಇದನ್ನೂ ಓದಿ: ಇವನು ಕಷ್ಟಕ್ಕೆ ಸಾಲ ಮಾಡಿರ್ತಾನಲ್ಲ.. ತೀರ್ಸೋಕಾಗ್ದೆ ಸಾಯ್ತಾನಾ..?- ಕತ್ತಿ ವಿರುದ್ಧ ಹೆಚ್​ಡಿಕೆ ಕಿಡಿ

The post ಸಂಜೆಯೊಳಗೆ ಕತ್ತಿ ರಾಜೀನಾಮೆ ಕೊಡಬೇಕು.. ಸಿಎಂ ಮನೆಗೆ ಚಟ್ಟ ಕಳುಹಿಸ್ತೇನೆ – ಡಿಕೆಎಸ್​ ಆಗ್ರಹ appeared first on News First Kannada.

Source: newsfirstlive.com

Source link