ಮುಂಗಾರಿನ ಮಳೆ ಶುರುವಾಗಿದೆ ಚಳಿಗೆ ಬಿಸಿಯಾಗಿ ತಿನಿಸುಗಳು ಬೇಕು ಎಂದು ನಾಲಿಗೆ ಬಯಸುತ್ತದೆ. ಹೀಗಾಗಿ ನೀವು ಇಂದು ಬಿಸಿಯಾದ ರುಚಿಯಾದ ಬ್ರೆಡ್ ವಡೆ ಮಾಡಿ ಸವಿಯಿರಿ..

ಬೇಕಾಗುವ ಸಾಮಗ್ರಿಗಳು:
* ಬ್ರೆಡ್
* ಮೊಸರು- 2 ಕಪ್
* ದನಿಯಾ ಪುಡಿ- 1 ಟೀ ಸ್ಪೂನ್
* ಹಸಿಮೆಣಸಿನಕಾಯಿ- 4
* ಹುಣಸೆಹಣ್ಣು
* ಸಕ್ಕರೆ- 2 ಟೀ ಸ್ಪೂನ್
* ಜೀರಿಗೆ- 2 ಟೀ ಸ್ಪೂನ್
* ಖಾರದ ಪುಡಿ- 1 ಟೀ ಸ್ಪೂನ್
* ರುಚಿಗೆ ತಕ್ಕಷ್ಟು ಉಪ್ಪು
*  ಆಲೂಗಡ್ಡೆ- 2
* ಅಡುಗೆ ಎಣ್ಣೆ- 2 ಕಪ್
* ಒಣದ್ರಾಕ್ಷಿ
* ಕೊತ್ತಂಬರಿ

ಮಾಡುವ ವಿಧಾನ:
* ಬ್ರೆಡ್ ಸ್ಲೈಸ್‍ಗಳನ್ನು ತೆಗೆದುಕೊಂಡು ಅದರ ಅಂಚುಗಳನ್ನು ಕತ್ತರಿಸಿಕೊಂಡಿರಬೇಕು.

* ಒಂದು ಬಟ್ಟಲಲ್ಲಿ ಬೇಯಿಸಿಕೊಂಡ ಆಲೂಗಡ್ಡೆ, ಹಸಿ ಮೆಣಸಿನಕಾಯಿ, ಹುಳಿ ಪುಡಿ, ಒಣದ್ರಾಕ್ಷಿ, ಜೀರಿಗೆ ಪುಡಿ ಮತ್ತು ಉಪ್ಪು, ಮೊಸರು, ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಬೇಕು.

* ಮೊದಲೆ ಸಿದ್ಧಪಡಿಸಿಕೊಂಡ ಬ್ರೆಡ್ ಸ್ಲೈಸ್ ತೆಗೆದುಕೊಂಡು ಅದರ ಮೇಲೆ ಮೊಸರನ್ನು ಲೇಪಿಸಿ. ಬಳಿಕ ಆಲೂಗಡ್ಡೆಯ ಮಿಶ್ರಣದ ಉಂಡೆಯನ್ನು ಇಟ್ಟು ಬ್ರೆಡ್ ಅನ್ನು ಉಂಡೆಯ ಸುತ್ತ ಮುಚ್ಚುವಂತೆ ಸುತ್ತಿಕೊಳ್ಳಬೇಕು.

* ಬಾಣಲೆಯಲ್ಲಿ ಸ್ವಲ್ಪ ತುಪ್ಪವನ್ನು ಸೇರಿಸಿ, ಬಿಸಿ ಮಾಡಿ ಬ್ರೆಡ್ ಉಂಡೆಯನ್ನು ಇಟ್ಟು ಚೆನ್ನಾಗಿ ಫ್ರೈ ಮಾಡಬೇಕು.

* ನಂತರ ಬೇಯಿಸಿದ ವಡೆಗೆ ಮೊಸರು, ಕೊತ್ತಂಬರಿ, ಹುಣಸೆಹಣ್ಣು, ಜೀರಿಗೆ, ಮೆಣಸಿನಪುಡಿ ಹಾಕಿ ಸಿದ್ಧಪಡಿಸಿದರೆ. ರುಚಿತಯಾದ ಬ್ರೆಡ್ ವಡೆ ಸವಿಯಲು ಸಿದ್ಧವಾಗುತ್ತದೆ.

The post ಸಂಜೆ ತಿಂಡಿಗೆ ಮಾಡಿ ಬ್ರೆಡ್ ವಡೆ appeared first on Public TV.

Source: publictv.in

Source link