ಗದಗ: ಛತ್ತೀಸ್​ಘಡ್​​​ನಲ್ಲಿ ನಡೆದ ನಕ್ಸಲರೊಂದಿಗೆ ಹೋರಾಡುತ್ತಲ್ಲೇ ಹುತಾತ್ಮರಾದ ಗದಗ ಮೂಲದ ಯೋಧರ ಪಾರ್ಥಿವ ಶರೀರ ಇಂದು ಸಂಜೆ ಹುಟ್ಟೂರಿಗೆ ಆಗಮಿಸುವ ನಿರೀಕ್ಷೆಯಿದೆ. ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೊಜನೂರು ಗ್ರಾಮದ ಲಕ್ಷ್ಮಣ್ಣ ಗೌರಣ್ಣವರ್ (30) ಅವರ ಸಾವಿನ ಬಗ್ಗೆ ಜಿಲ್ಲಾಡಳಿತಕ್ಕೆ ಅಧಿಕೃತ ಮಾಹಿತಿ ಸಿಕ್ಕಿದೆ.

ಸಂಜೆಯೊಳಗೆ ಹುತಾತ್ಮ ಯೋಧ ಲಕ್ಷ್ಮಣ್ಣ ಗೌರಣ್ಣವರ್ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸುವ ನಿರೀಕ್ಷೆ ಇದೆ. ಬಂದ ಕೂಡಲೇ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಕೆಲವು ಕಾಲ ಇಡಲಾಗುವುದು. ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಹುತಾತ್ಮ ಯೋಧರ ಅಂತ್ಯಕ್ರಿಯೆ ನಡೆಸುವುದಾಗಿ ಜಿಲ್ಲಾಧಿಕಾರಿ ಎಮ್ ಸುಂದರೇಶ್ ಬಾಬು ತಿಳಿಸಿದ್ದಾರೆ.

ಇದನ್ನೂ ಓದಿ: ಚತ್ತೀಸ್​​ಘಡದಲ್ಲಿ ನಕ್ಸಲರ ದಾಳಿ; ಹೋರಾಡುತ್ತಲೇ ಹುತಾತ್ಮನಾದ ಗದಗ ಮೂಲದ ವೀರಯೋಧ

ಲಕ್ಷ್ಮಣ್ಣ ಗೌರಣ್ಣವರ್ 12 ವರ್ಷಗಳಿಂದ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ 15 ದಿನದ ಹಿಂದೆ ರಜೆ ಮೇಲೆ ಬಂದು ತೆರಳಿದ್ದ ಯೋಧ ಇಂದು ನಕ್ಸಲರ ದಾಳಿಯಲ್ಲಿ ಗುಂಡೇಟಿಗೆ ಬಲಿಯಾಗಿದ್ದಾರೆ. ಸದ್ಯ ಹುತಾತ್ಮ ಯೋಧ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

The post ಸಂಜೆ ವೇಳೆಗೆ ಸ್ವಗ್ರಾಮದತ್ತ ಹುತಾತ್ಮ ಯೋಧನ ಪಾರ್ಥಿವ ಶರೀರ appeared first on News First Kannada.

Source: newsfirstlive.com

Source link