ಸಂಜೆ ಸ್ನ್ಯಾಕ್ಸ್‌ಗೆ ಟೀ ಜೊತೆ ಏನು ಮಾಡುವುದು ಎಂದು ಯೋಚಿಸುತ್ತಿರುವವರಿಗೆ ತುಂಬಾ ಸರಳವಾಗಿ ಟೇಸ್ಟಿಯಾಗಿ ಆಲೂ ಭುಜಿಯಾವನ್ನು ಮಾಡಬಹುದಾಗಿದೆ. ಊಟಕ್ಕೆ ಸೈಡ್ ಡಿಶ್ ಅಥವಾ ಸ್ಯಾಂಡ್‍ವಿಚ್ ಹಾಗೂ ಯಾವುದೇ ಉಪಾಹಾರ ಭಕ್ಷ್ಯಗಳ ಜೊತೆಗೆ ಅಥವಾ ಸಂಜೆ ಟೀ ಜೊತೆಯಲ್ಲಿ ಸವಿಯಬಹುದಾಗಿದೆ.

ಬೇಕಾಗುವ ಸಾಮಗ್ರಿಗಳು:
* ಆಲೂಗಡ್ಡೆ-2
* ಅಕ್ಕಿಹಿಟ್ಟು-ಅರ್ಧ ಕಪ್
* ಕಡ್ಲೆ ಹಿಟ್ಟು-2 ಕಪ್
* ಉಪ್ಪು ರುಚಿಗೆ ತಕ್ಕಷ್ಟು
* ಅಚ್ಚಖಾರದ ಪುಡಿ- 1 ಟೀ ಸ್ಪೂನ್
* ಚಾಟ್ ಮಸಾಲಾ- 1 ಟೀ ಸ್ಪೂನ್
* ಗರಂ ಮಸಾ¯- ಅರ್ಧ ಟೀಸ್ಪೂನ್
* ಜೀರಿಗೆ ಪೌಡರ್- 1 ಟೀ ಸ್ಪೂನ್
* ಅಡುಗೆ ಎಣ್ಣೆ – 2 ಕಪ್

ಮಾಡುವ ವಿಧಾನ:
* ಆಲೂಗಡ್ಡೆಯನ್ನು ಚೆನ್ನಾಗಿ ಬೇಯಿಸಿಟ್ಟುಕೊಳ್ಳಬೇಕು. ಸಿಪ್ಪೆ ತೆಗೆದು ನುಣ್ಣಗೆ ಚೂರುಗಳನ್ನಾಗಿ ಸ್ಮ್ಯಾಶ್ ಮಾಡಿಟ್ಟುಕೊಳ್ಳಬೇಕು.

* ಅದಕ್ಕೆ ಅರ್ಧ ಕಪ್ ಗಿಂತ ಕಡಿಮೆ ಅಕ್ಕಿ ಹಿಟ್ಟು, ಕಡ್ಲೆ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಅಕ್ಕಿ ಹಿಟ್ಟು ಜಾಸ್ತಿ ಹಾಕುವುದು ಬೇಡ, ಗಟ್ಟಿಯಾಗುತ್ತದೆ.

* ರುಚಿಗೆ ತಕ್ಕಷ್ಟು ಉಪ್ಪು, ಖಾರಕ್ಕೆ ತಕ್ಕಷ್ಟು ಅಚ್ಚಖಾರದ ಪುಡಿ, ರುಚಿಗೆ ಸ್ವಲ್ಪ ಚಾಟ್ ಮಸಾಲಾ ಹಾಕಿಕೊಳ್ಳಿ. ಬೇಕೆಂದರೆ ಜೀರಿಗೆ ಪೌಡರ್, ಗರಂ ಮಸಾ¯ ನಂತರ 2 ಸ್ಪೂನ್ ಗಳಷ್ಟು ಎಣ್ಣೆ ಬಿಸಿ ಮಾಡಿ ಹಾಕಿ ಚೆನ್ನಾಗಿ ಈ ಮಸಾಲೆಯನ್ನು ನಯವಾಗಿ, ಮೃದು ಮತ್ತು ಜಿಗುಟಾಗದ ಹಾಗೆ ನಾದಿಕೊಳ್ಳಬೇಕು.

* ನಂತರ ಕಾರದ ಕಡ್ಡಿ ಅಥವಾ ಆಲೂ ಭುಜಿಯಾ ಕಣ್ಣುಗಳಿರುವ ಒತ್ತು ಪಾತ್ರೆ ತೆಗೆದುಕೊಂಡು ಅದರೊಳಗೆ ಹಾಕಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಈ ಹಿಟ್ಟನ್ನು ನೇರವಾಗಿ ಒತ್ತಿ ಹಾಕಿ. ಬೇರೆ ಎಣ್ಣೆ ಪದಾರ್ಥಗಳನ್ನು ಕರಿಯುವಂತೆ ಇದನ್ನೂ ಫ್ರೈಸ ಮಾಡಿದರೆ ರುಚಿಯಾದ ಅಲೂ ಭುಜಿಯಾ ಸವಿಯಲು ಸಿದ್ಧವಾಗುತ್ತದೆ.

The post ಸಂಜೆ ಸ್ನ್ಯಾಕ್ಸ್‌ಗೆ ಮಾಡಿ ಆಲೂ ಭುಜಿಯಾ appeared first on Public TV.

Source: publictv.in

Source link