ಸಂತೋಷ್ ಚಿತ್ರಮಂದಿರದಲ್ಲಿ ತಾಂತ್ರಿಕ ಸಮಸ್ಯೆ, ಶೋ ಸ್ಥಗಿತ; ಬಿಡುಗಡೆಯ ಸಂಭ್ರಮದಲ್ಲಿದ್ದ ‘ನಿನ್ನ ಸನಿಹಕೆ’ ಚಿತ್ರತಂಡಕ್ಕೆ ನಿರಾಸೆ | Ninna Sanihake Show in Santhos Theater is cancelled due to technical problem here is the details

ಸಂತೋಷ್ ಚಿತ್ರಮಂದಿರದಲ್ಲಿ ತಾಂತ್ರಿಕ ಸಮಸ್ಯೆ, ಶೋ ಸ್ಥಗಿತ; ಬಿಡುಗಡೆಯ ಸಂಭ್ರಮದಲ್ಲಿದ್ದ ‘ನಿನ್ನ ಸನಿಹಕೆ’ ಚಿತ್ರತಂಡಕ್ಕೆ ನಿರಾಸೆ

ಸಂತೋಷ್ ಚಿತ್ರಮಂದಿರ

ಇಂದು (ಅಕ್ಟೋಬರ್ 8) ಸೂರಜ್ ಗೌಡ ಹಾಗೂ ಧನ್ಯಾ ರಾಮ್​ಕುಮಾರ್ ಅಭಿನಯದ ‘ನಿನ್ನ ಸನಿಹಕೆ’ ಚಿತ್ರದ ಬಿಡುಗಡೆ. ಚಿತ್ರತಂಡ ಇದರ ಸಂತಸದಲ್ಲಿರುವಾಗಲೇ ನಿರಾಸೆ ಎದುರಾಗಿದೆ. ಕಾರಣ, ಮುಖ್ಯ ಚಿತ್ರಮಂದಿರವಾದ ಸಂತೋಷ್ ಚಿತ್ರಮಂದಿರದಲ್ಲಿ ತಾಂತ್ರಿಕ ದೋಷದಿಂದ ಪ್ರದರ್ಶನ ಸ್ಥಗಿತವಾಗಿದೆ. ಇದರಿಂದಾಗಿ ಚಿತ್ರಮಂದಿರಕ್ಕೆ ಅಲಂಕರಿಸಿ, ಪ್ರೇಕ್ಷಕರನ್ನು ಸ್ವಾಗತಿಸಲು ತಯಾರಾಗಿದ್ದ ಚಿತ್ರತಂಡ ಹಾಗೂ ಚಿತ್ರದ ಕುರಿತು ನಿರೀಕ್ಷೆಯಿಂದ ಆಗಮಿಸಿದ್ದ ಪ್ರೇಕ್ಷಕರಿಗೆ ನಿರಾಸೆ ಎದುರಾಗಿದೆ.

ಸಂತೋಷ್ ಚಿತ್ರಮಂದಿರದಲ್ಲಿ ಪ್ರದರ್ಶನ ಸ್ಥಗಿತಗೊಂಡಿದ್ದರಿಂದಾಗಿ ಪ್ರೇಕ್ಷಕರು ಮಧ್ಯಾಹ್ನದ ಶೋಗೆ ನವರಂಗ್ ಚಿತ್ರಮಂದಿರದತ್ತ ತೆರಳುತ್ತಿದ್ದಾರೆ. ಚಿತ್ರಮಂದಿರದ ಅಡಚಣೆಯಿಂದ ಚಿತ್ರತಂಡ ಬೇಸರಗೊಂಡಿದೆ. ಮೂರು ದಿನದಿಂದ ಸಮಸ್ಯೆ ಇದ್ದರೂ ಕೂಡ ಥಿಯೇಟರ್ ಮಾಲಿಕರಿಂದ ಚಿತ್ರತಂಡಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ಚಿತ್ರತಂಡ ಅಲಂಕಾರ ಮಾಡಿಕೊಂಡು ಪ್ರೇಕ್ಷಕರು ಕಿಕ್ಕಿರಿದು ನೆರದಾಗಾಲೂ ಯಾವುದೇ ಮಾಹಿತಿ ನೀಡದಿರುವುದು ಚಿತ್ರತಂಡದ ಬೇಸರಕ್ಕೆ ಕಾರಣವಾಗಿದೆ.

ತಾಂತ್ರಿಕ ಸಮಸ್ಯೆಗೆ ಕಾರಣವೇನು?
ಕಳೆದ ಮೂರುದಿನಗಳಿಂದ ಸಂತೋಷ್ ಚಿತ್ರಮಂದಿರದಲ್ಲಿ ಕರೆಂಟ್ ಇಲ್ಲ. ಟ್ರಾನ್ಸ್ ಫಾರ್ಮರ್ ಸಮಸ್ಯೆ ಜೊತೆಗೆ ಜನರೇಟರ್ ಕೂಡ ವರ್ಕ್ ಆಗುತ್ತಿಲ್ಲ. ಆದರೂ ಕೂಡ ಸಿನಿಮಾ ರಿಲೀಸ್​ಗೆ ಚಿತ್ರಮಂದಿರದವರು ಕಮಿಟ್ ಆಗಿದ್ದರು. ಆದರೆ ತಾಂತ್ರಿಕ ದೋಷ ಸರಿಯಾಗದ ಹಿನ್ನೆಲೆಯಲ್ಲಿ ಚಿತ್ರ ನೋಡಲು ಬಂದ ಪ್ರೇಕ್ಷಕರನ್ನು ಚಿತ್ರತಂಡ ವಾಪಸ್ ಕಳುಹಿಸುತ್ತಿದೆ.

 ಹಾಡು ಹಾಗೂ ಟ್ರೈಲರ್​ನಿಂದ ಗಮನ ಸೆಳೆದಿರುವ ‘ನಿನ್ನ ಸನಿಹಕೆ’ ಚಿತ್ರ:

ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ‘ನಿನ್ನ ಸನಿಹಕೆ’ ಚಿತ್ರದಲ್ಲಿ ಡಾ.ರಾಜ್​ಕುಮಾರ್ ಮೊಮ್ಮಗಳು ಧನ್ಯಾ ರಾಮ್​ಕುಮಾರ್ ನಾಯಕಿಯಾಗಿ ಕಾಣಿಸಿಕೊಂಡಿದ್ಧಾರೆ. ಸೂರಜ್ ಗೌಡ ನಾಯಕನೊಂದಿಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ರಘು ದೀಕ್ಷಿತ್ ಸಂಗೀತ ನೀಡಿದ್ಧಾರೆ.

ಇದನ್ನೂ ಓದಿ:

ನಿನ್ನ ಸನಿಹಕೆ: ಸೂರಜ್​ ಜತೆ ಲಿವ್​ ಇನ್ ರಿಲೇಷನ್​ಶಿಪ್​ ಕಥೆ ಹೇಳ್ತಾರೆ ಡಾ. ರಾಜ್​ ಮೊಮ್ಮಗಳು ಧನ್ಯಾ

Janhvi Kapoor: ಅಮ್ಮನ ಕೈ ಬರಹವನ್ನು ಹಚ್ಚೆ ಹಾಕಿಸಿಕೊಂಡ ಜಾಹ್ನವಿ ಕಪೂರ್; ಖ್ಯಾತ ನಟಿ ಶ್ರೀದೇವಿ ಬರಹದಲ್ಲಿ ಏನಿತ್ತು?

TV9 Kannada

Leave a comment

Your email address will not be published. Required fields are marked *