ಹಾಸನ: ಎರಡು ತಿಂಗಳ ಬಾಣಂತಿ ಸಂಪಿಗೆ ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿರೋ ಘಟನೆ ಹಾಸನದಲ್ಲಿ ನಡೆದಿದೆ. ಭವ್ಯ (19) ಮೃತ ದುರ್ದೈವಿ. ಮಗಳನ್ನ ಕೊಲೆ ಮಾಡಲಾಗಿದೆ ಎಂದು ಗಂಡ ಮತ್ತು ಅವರ ಮನೆಯವರ ವಿರುದ್ಧ ಭವ್ಯ ಪೋಷಕರು ಆರೋಪ ಮಾಡ್ತಿದ್ದಾರೆ.

ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ ಮಾಲೇಕಲ್ ತಿರುಪತಿ ಗ್ರಾಮದಲ್ಲಿ ಘಟನೆ ನಡೆದಿದೆ. ಒಂದು ವರ್ಷದ ಹಿಂದೆ ಮೇಳೇನಹಳ್ಳಿ ಗ್ರಾಮದ ಭವ್ಯ ಅವರನ್ನು ಜಗದೀಶ್ ಜೊತೆ ಮದುವೆ ಮಾಡಲಾಗಿತ್ತು. ಎರಡು ತಿಂಗಳ ಹಿಂದಷ್ಟೇ ಭವ್ಯ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಕೊರೊನಾ ಕಾರಣದಿಂದ, ಮಗುವಾದ ಬಳಿಕ ಭವ್ಯ ಗಂಡನ ಮನೆಯಲ್ಲೇ ಇದ್ದರು. ಈಗ ಇದ್ದಕ್ಕಿದ್ದಂತೆ ಸಂಪಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, ಸಾವಿನ ಬಗ್ಗೆ ಯುವತಿಯ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.

 

The post ಸಂಪಿಗೆ ಬಿದ್ದು 2 ತಿಂಗಳ ಬಾಣಂತಿ ಅನುಮಾನಾಸ್ಪದ ಸಾವು appeared first on News First Kannada.

Source: newsfirstlive.com

Source link