ಬೆಂಗಳೂರು: ಸಚಿವ ಸಂಪುಟ ಪುನರ್​ ರಚನೆಗೆ ಹೈಕಮಾಂಡ್​ ಒಪ್ಪಿಗೆ ನೀಡಿದೆ ಅನ್ನೋ ಮಾಹಿತಿ ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ. ಮೂಲಗಳ ಪ್ರಕಾರ ಜುಲೈ ಅಂತ್ಯದ ವೇಳೆಗೆ ಸಂಪುಟ ಪುನರ್​ ರಚನೆಯಾಗುವ ಸಾಧ್ಯತೆ ಇದೆ.

ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ದೆಹಲಿ ಭೇಟಿ ಬಹುತೇಕ ಸಕ್ಸಸ್ ಆಗಿದ್ದು, ಸಚಿವ ಸಂಪುಟ ಪುನರ್ ರಚನೆ ಮಾಡಲು ಸಿಎಂ ತಯಾರಿಗೆ ಹೈಕಮಾಂಡ್ ಒಪ್ಪಿಗೆ ನೀಡಿದೆ ಎನ್ನಲಾಗಿದೆ. ಈ ಮೂಲಕ ಮೊದಲು ಪಕ್ಷದಲ್ಲಿ ಬದಲಾವಣೆ ತಂದು ನಂತರ ನಾಯಕತ್ವ ಬದಲಾವಣೆ ಮಾಡಲು ಹೈಕಮಾಂಡ್ ನಾಯಕರು ಪ್ಲಾನ್ ಮಾಡಿದ್ದಾರೆ ಅಂತಲೂ ಹೇಳಲಾಗುತ್ತಿದೆ.

ಇದರ ಜೊತೆಗೆ ಪಕ್ಷ ವಿರೋಧಿ ಕಾರ್ಯದಲ್ಲಿ ತೊಡಗಿಕೊಂಡವರಿಗೆ ಎಚ್ಚರಿಕೆಯನ್ನ ನೀಡಲು ಹೈಕಮಾಂಡ್​ ಮುಂದಾಗಿದೆ ಅಂತಾ ಹೇಳಲಾಗಿದೆ. ಕ್ಯಾಬಿನೇಟ್ ಪುನರ್​ ರಚನೆ ಹೆಸರಲ್ಲಿ ಸಚಿವ ಸಿಪಿ ಯೋಗಿಶ್ವರ್​​ಗೆ ಕೋಕ್? ನೀಡಲೂಬಹುದು ಅನ್ನೋ ಚರ್ಚೆ ಇದೀಗ ರಾಜಕೀಯ ವಲಯದಲ್ಲಿ ಕೇಳಿಬಂದಿದೆ.

ಸಚಿವರ ಮೌಲ್ಯಮಾಪನದ ಹೆಸರಲ್ಲಿ ಜುಲೈ ಅಂತ್ಯದಲ್ಲಿ ಕ್ಯಾಬಿನೇಟ್ ಪುನರ್ ರಚನೆ ಮಾಡಿ, ಒಂದೇ ಕಲ್ಲಲ್ಲಿ ಎರಡು ಹಕ್ಕಿಹೊಡೆಯಲು ಬಿಎಎಸ್​ವೈ ನಿರ್ಧರಿಸಿದ್ದಾರೆ. ಅದೇನಂದರೆ ಒಂದು ಕಡೆ ಸಿಪಿ ಯೋಗಿಶ್ವರ್​ ಅವರನ್ನ ಸಚಿವ ಸ್ಥಾನದಿಂದ ಕೈಬಿಡೋದು. ಎರಡನೇಯದಾಗಿ ನಾಯಕತ್ವ ಬದಲಾವಣೆ ಕೂಗು ನೀಡೋರಿಕೆ ಖಡಕ್ ಸಂದೇಶ ರವಾನೆ ಮಾಡಲು ಸಿಎಂ ನಿರ್ಧರಿಸಿದ್ದಾರೆ ಎನ್ನಲಾಗಿದೆ.

The post ಸಂಪುಟ ಪುನರ್ ರಚನೆಗೆ ಹೈಕಮಾಂಡ್ ಒಪ್ಪಿಗೆ.. ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆದ ಬಿಎಸ್​ವೈ? appeared first on News First Kannada.

Source: newsfirstlive.com

Source link