ಸಂಪ್ ಅಗೆಯುವಾಗ ಚಿನ್ನದ ಮಣಿ ಹಾರಗಳು ಸಿಕ್ಕಿವೆ ಎಂದು ಹೊಟೇಲ್ ಉದ್ಯಮಿಗೆ 15 ಲಕ್ಷ ರೂ ವಂಚನೆ! | Chennai Hotelier Muruganantham cheats for 15 lakhs in Bangalore


ಸಂಪ್ ಅಗೆಯುವಾಗ ಚಿನ್ನದ ಮಣಿ ಹಾರಗಳು ಸಿಕ್ಕಿವೆ ಎಂದು ಹೊಟೇಲ್ ಉದ್ಯಮಿಗೆ 15 ಲಕ್ಷ ರೂ ವಂಚನೆ!

ಸಂಪ್ ಅಗಿಯುವಾಗ ಚಿನ್ನದ ಮಣಿ ಹಾರಗಳು ಸಿಕ್ಕಿವೆ ಎಂದು ಹೊಟೇಲ್ ಉದ್ಯಮಿಗೆ 15 ಲಕ್ಷ ರೂ ವಂಚನೆ!

ಮುರುಘಾನಾಥನ ಹಣೆಬರಹ ಕೆಟ್ಟಿತ್ತು ಅನಿಸುತ್ತೆ… ಅದರಲ್ಲಿ ಮತ್ತೆ ನಾಲ್ಕು ಮಣಿಗಳನ್ನ ಪರಿಶೀಲಿಸಿದಾಗ ಅದೂ ಕೂಡ ಅಸಲಿಯಾಗಿತ್ತು ಎಂಬುದು ನಿಕ್ಕಿಯಾಗಿದೆ! ಸರಿ, ಮೂರು ದಿನಗಳ ಬಳಿಕ ಕರೆ ಮಾಡಿದ ಅರ್ಜುನ್ ಒಂದು ಕೆಜಿ‌ ಮಣಿಗೆ 25 ಲಕ್ಷ ರೂಪಾಯಿ ಕೊಡಬೇಕು ಎಂದು ಹೇಳಿದ್ದಾನೆ.

ಬೆಂಗಳೂರು: ವಂಚನೆಗೆ ಸಾವಿರ ಮುಖ ಲಕ್ಷ ದಾರಿಗಳಂತೆ! ಅದು ಎಂದೂ ಮುಗಿಯದ ಗೋಳಿನ ಹಾಡು! ತಾಜಾ ಪ್ರಕರಣದಲ್ಲಿ ಮೋಸ ಹೋಗುವ ಮಿಕ ಸಿಕ್ಕಿದೆಯೆಂದು ಯುವಕನೊಬ್ಬ ತಮಿಳುನಾಡಿನ‌ ಖ್ಯಾತ ಹೊಟೇಲ್ ಉದ್ಯಮಿಗೆ ಟೋಪಿ ಹಾಕಿದ ಪ್ರಕರಣವಿದು. ಸಂಪ್ ಅಗೆಯುವಾಗ ನಿಧಿ ಸಿಕ್ಕಿದೆ ಎಂದು ತಮಿಳುನಾಡಿನ‌ ಖ್ಯಾತ ಹೊಟೇಲ್ ಉದ್ಯಮಿಗೆ ಟೋಪಿ ಹಾಕಿದ್ದಾನೆ ಈ ಖದೀಮ. ಅದು ತಮಿಳುನಾಡಿನ‌ ಖ್ಯಾತ ಸ್ವಾಮಿ ಚಿಕನ್ ಚೆಟ್ಟಿನಾಡ್ ಹೊಟೇಲ್. ಅದರ ಮಾಲೀಕ ಮುರುಘಾನಾಥಂಗೆ ಅರ್ಜುನ್ ಎಂಬಾತ 15 ಲಕ್ಷ ರೂಪಾಯಿ ವಂಚನೆ ಎಸಗಿದ್ದಾನೆ.

ನಿಮ್ಮ ಹೊಟೇಲ್ ತಿಂಡಿ ಚೆನ್ನಾಗಿದೆ ಎಂದು ಹೊಟೇಲ್ ಮಾಲೀಕನ ಪರಿಚಯ ಮಾಡಿಕೊಂಡಿದ್ದ ಅರ್ಜುನ್ ಚೆನ್ನೈನಲ್ಲಿಯೇ ಕೆಲಸ ಮಾಡ್ತಿರೋದಾಗಿ ಹೇಳಿಕೊಂಡಿದ್ದನಂತೆ. ನಂತರ ನನ್ನ ಮನೆ ಸಂಪ್ ಅಗೆಯುವಾಗ 5 ಮಣಿ ಹಾರದ ನಿಧಿ ಸಿಕ್ಕಿದೆ ಎಂದು ಹೇಳಿದ್ದಾನೆ. ಎರಡು ಮಣಿಗಳನ್ನ ಮಾಲೀಕನಿಗೆ ನೀಡಿ, ಬೇಕಾದ್ರೆ ಪರಿಶೀಲನೆ ನಡೆಸಿ ಎಂದು ಕೊಟ್ಟು ಬಂದಿದ್ದನಂತೆ. ಅದರಂತೆ ಪರೀಕ್ಷೆ ನಡೆಸಿ‌ದ ಹೊಟೇಲ್ ಮಾಲೀಕ ಮುರುಘಾನಾಥಂಗೆ ಮಣಿ ಹಾರ ಅಸಲು ಚಿನ್ನದ್ದು ಎಂಬುದು ಮನವರಿಕೆಯಾಗಿದೆ. ಆದರೆ ಅತಿಯಾಸೆಗೆ ಬಿದ್ದಿದ್ದ ಮಾಲೀಕ ಉಳಿದ ಮಣಿ ಸರಗಳನ್ನ ಚೆನ್ನೈನ ರೇಸ್ ಕೋರ್ಸ್ ಬಳಿ ತರಲು ಅರ್ಜುನನಿಗೆ ಹೇಳಿದ್ದಾನೆ.

ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಮುರುಘಾನಾಥನ ಹಣೆಬರಹ ಕೆಟ್ಟಿತ್ತು ಅನಿಸುತ್ತೆ… ಅದರಲ್ಲಿ ಮತ್ತೆ ನಾಲ್ಕು ಮಣಿಗಳನ್ನ ಪರಿಶೀಲಿಸಿದಾಗ ಅದೂ ಕೂಡ ಅಸಲಿಯಾಗಿತ್ತು ಎಂಬುದು ನಿಕ್ಕಿಯಾಗಿದೆ! ಸರಿ, ಮೂರು ದಿನಗಳ ಬಳಿಕ ಕರೆ ಮಾಡಿದ ಅರ್ಜುನ್ ಒಂದು ಕೆಜಿ‌ ಮಣಿಗೆ 25 ಲಕ್ಷ ರೂಪಾಯಿ ಕೊಡಬೇಕು ಎಂದು ಹೇಳಿದ್ದಾನೆ. ಆದರೆ ಮೊದಲು ಸ್ವಲ್ಪವಷ್ಟೇ ಮಣಿ ಹಾರ ತೆಗೆದುಕೊಳ್ಳೊದಾಗಿ ಹೇಳಿ, ಉದ್ಯಮಿ ಮುರುಘಾನಾಥ 15 ಲಕ್ಷ ರೂಪಾಯಿ ರೆಡಿ ಮಾಡಿಕೊಂಡಿದ್ದಾನೆ.

ಅದರಂತೆ ಬೆಂಗಳೂರಿನಲ್ಲಿ ಮಣಿಗಳನ್ನ ಕೊಡೋದಾಗಿ ಹೇಳಿ ಕರೆಸಿಕೊಂಡಿದ್ದ ಅರ್ಜುನ್ ಆ್ಯಂಡ್ ಟೀಂ ಕೆ ಎಸ್ ಆರ್ ಟಿಸಿ ಮೂರನೇ ಮುಖ್ಯ ದ್ವಾರದ ಬಳಿ ಉದ್ಯಮಿ ಮುರುಘಾನಾಥನನ್ನ ಕರೆಸಿಕೊಂಡಿದ್ದಾರೆ. ನಂತರ ಆತನಿಂದ 15 ಲಕ್ಷ ರೂ ಪಡೆದು ನಕಲಿ ಮಣಿಗಳನ್ನ ನೀಡಿ ಪರಾರಿಯಾಗಿದ್ದಾರೆ. 15 ಲಕ್ಷ ರೂಪಾಯಿ ಮೌಲ್ಯದ ಮಣಿಗಳನ್ನ ನೀಡಿ ಅರ್ಜುನ್ ಹಾಗೂ ಮಹಿಳೆ ಸೇರಿ ಮೂವರಿಂದ ವಂಚನೆಯಾಗಿರೋದಾಗಿ ಉದ್ಯಮಿ ಮುರುಘಾನಾಥ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ವಂಚಕರು ಸಿಗ್ತಾರಾ? ಹಣ ವಾಪಸ್ ಬರುತ್ತಾ? ಕಾದು ನೋಡಬೇಕಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

TV9 Kannada


Leave a Reply

Your email address will not be published.