ನಟಿಯಾಗಿದ್ದಾಗ ಅಭಿಮಾನಿಗಳಲ್ಲಿ ಕಿಕ್ ಏರಿಸಿ ನಂತರ ರಾಜಕಾರಣಕ್ಕೆ ಇಳಿದ ನುಸ್ರತ್ ಜಹನ್ ಬಾಳಲ್ಲಿ ಇದೀಗ ಬಿರುಗಾಳಿಯೇ ಎದ್ದಿದೆ. ನುಸ್ರತ್ ಹೊಟ್ಟೆಯಲ್ಲಿರೋ ಮಗು ನನ್ನದಲ್ಲ ಅಂತ ಪತಿ ನಿಖಿಲ್ ಜೈನ್ ಹೇಳ್ತಿದ್ರೆ ಭಾರತದ ಕಾನೂನಿನ ಪ್ರಕಾರ ನಮ್ಮಿಬ್ಬರದ್ದು ಮದುವೆಯೇ ಅಲ್ಲ ಅಂತ ನುಸ್ರತ್ ಸ್ಟೇಟ್​ಮೆಂಟ್ ಒಂದನ್ನು ಬಿಡುಗಡೆ ಮಾಡುವ ಮೂಲಕ ಹೇಳಿದ್ದಾರೆ.

ಇದೀಗ ನುಸ್ರತ್ ಸ್ಟೇಟ್​ಮೆಂಟ್​ಗೆ ಕೌಂಟರ್ ಎಂಬಂತೆ ಕೌಂಟರ್ ಸ್ಟೇಟ್​ಮೆಂಟ್ ಬಿಡುಗಡೆ ಮಾಡಿರೋ ನಿಖಿಲ್ ಜೈನ್ ಒಟ್ಟು 9 ಪಾಯಿಂಟ್ಸ್​ಗಳಲ್ಲಿ ತಮ್ಮ ಸಂಬಂಧ ಹೇಗೆ ಬೆಳೀತು.. ಹೇಗೆ ಹಳಸಿತು ಅನ್ನೋದನ್ನ ಹೇಳಿದ್ದಾರೆ. ಜೊತೆಗೆ ನಾನು ಅವಲ ಕಷ್ಟದ ಸಮಯದಲ್ಲಿ ಹಣ ನೀಡಿದ್ದೇನೆ.. ಅವಳಿನ್ನೂ ನನಗೆ ಸಾಕಷ್ಟು ಹಣವನ್ನ ವಾಪಸ್ ಕೊಡಬೇಕಿದೆ ಎಂದು ಆರೋಪಿಸಿದ್ದಾರೆ.

 

 

ಮದುವೆಯಾದ ಕೆಲ ದಿನಗಳಲ್ಲೇ ಅವಳ ಆ್ಯಟಿಟ್ಯೂಡ್ ಬದಲಾಯ್ತು

 

  1. ನುಸ್ರತ್ ಮೇಲಿನ ಪ್ರೀತಿಯಿಂದಲೇ ನಾನು ಅವಳನ್ನ ಮದುವೆಯಾಗುವಂತೆ ಪ್ರಪೋಸ್ ಮಾಡಿದೆ, ಅದನ್ನ ಅವಳೂ ಒಪ್ಪಿಕೊಂಡು ನಾವು ಕೊಲ್ಕತ್ತಾದಲ್ಲಿ ರಿಸೆಪ್ಷನ್ ಮುಗಿಸಿಕೊಂಡು 2019 ರ ಜೂನ್ ತಿಂಗಳಲ್ಲಿ ನಮ್ಮ ಮದುವೆಯ ಗಮ್ಯಸ್ಥಾನ ಟರ್ಕಿಯ ಬೊಡ್ರುಮ್​​ಗೆ ಹೊರಟೆವು.

  2. ನಾವು ಪತಿ ಪತ್ನಿಯಾಗಿ ಜೊತೆಯಲ್ಲೇ ಬಾಳಿದೆವು..ಸಮಾಜದ ಎದುರಿಗೂ ನಾವು ಮದುವೆಯಾದ ಜೋಡಿಯಂತೆಯೇ ನಮ್ಮನ್ನ ನಾವು ಪರಿಚಯ ಮಾಡಿಕೊಂಡೆವು. ನಾನು ನಂಬಿಕಸ್ಥ, ಜವಾಬ್ದಾರಿಯುತ ಪತಿಯಾಗಿ ನಾನು ನನ್ನ ಸಮಯವನ್ನೆಲ್ಲ ಅವಳಿಗಾಗಿ ಮೀಸಲಿಟ್ಟೆ. ನಾನು ಅವಳಿಗೆ ಏನು ಮಾಡಿದ್ದೇನೆಂದು ಗೆಳೆಯರಿಗೆ, ಕುಟುಂಬದವರಿಗೆ ಹಾಗೂ ನಮ್ಮನ್ನು ಬಲ್ಲವರಿಗೆ ಗೊತ್ತಿದೆ. ಅವಳಿಗೆ ನಾನು ಬೇಷರತ್ ಬೆಂಬಲ ನೀಡಿದ್ದೇನೆ.. ನನ್ನ ಬೆಂಬಲವನ್ನು ಯಾರೂ ಚಾಲೆಂಜ್ ಮಾಡಲೂ ಆಗದಂಥದ್ದು. ಆದರೆ ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನದ ಕಡೆಗಿನ, ಮತ್ತು ನನ್ನ ಮೇಲಿನ ಅವಳ ಆ್ಯಟಿಟ್ಯೂಡ್​ ಬದಲಾಯ್ತು.

  3. ಆಗಸ್ಟ್ 2020 ರ ಸಮಯದಲ್ಲಿ ಒಂದು ಫಿಲ್ಮ್​ನ ಶೂಟಿಂಗ್​ ಸಮಯದಲ್ಲಿ ನನ್ನೊಂದಿಗಿನ ಅವಳ ನಡವಳಿಕೆ ಬದಲಾಯ್ತು.. ಯಾವ ಕಾರಣಕ್ಕೆ ಎಂದು ಅವಳಿಗೇ ಗೊತ್ತಿದೆ.

  4. ನಾವು ಜೊತೆಯಾಗಿದ್ದ ಸಮಯದಲ್ಲಿ ಅವಳಿಗೆ ಹತ್ತಾರು ಬಾರಿ ಮದುವೆಯ ರೆಜಿಸ್ಟರ್ ಮಾಡಿಕೊಳ್ಳೋಣ ಅಂತ ಬೇಡಿಕೊಂಡೆ, ಆದರೆ ಅವಳು ಅದನ್ನ ಅವಾಯ್ಡ್ ಮಾಡಿದ್ಳು.

  5. ನವೆಂಬರ್ 5, 2020 ರಂದು ಅವಳು ನನ್ನ ಫ್ಲ್ಯಾಟ್​ನಿಂದ ತನ್ನ ಬ್ಯಾಗ್, ಲಗೇಜ್, ಸ್ವಂತದ ವಸ್ತುಗಳು, ಪೇಪರ್​ಗಳು ಮತ್ತು ಡಾಕ್ಯುಮೆಂಟ್​​ಗಳನ್ನ ತೆಗೆದುಕೊಂಡು ಹೊರಟುಹೋದಳು. ನಂತರ BALLYGUNGE ಅಪಾರ್ಟ್​ಮೆಂಟ್​ಗೆ ಶಿಫ್ಟ್ ಆದಳು.. ಅಲ್ಲಿಂದಾಚೆಗೆ ನಾನು ಮತ್ತು ಅವಳು ಎಂದಿಗೂ ಗಂಡ-ಹೆಂಡತಿಯಾಗಿ ಉಳಿಯಲಿಲ್ಲ. ಮನೆಯಲ್ಲಿ ಉಳಿದುಕೊಂಡಿದ್ದ ಅವಳ ಕೆಲವ IT ರಿಟರ್ನ್ಸ್​ನಂತ ಕೆಲವು ದಾಖಲೆಗಳನ್ನು ಆದಷ್ಟು ಬೇಗ ಅವಳಿಗೆ ವಾಪಸ್ ಮಾಡಿಬಿಟ್ಟೆ.

  6. ಕೆಲವು ಮಾಧ್ಯಮಗಳಲ್ಲಿ ಅವಳ ಚಟುವಟಿಕೆಗಳ ಬಗ್ಗೆ ಕೇಳಿ ನನ್ನ ಮನಸ್ಸಿಗೆ ಅಗಾಧವಾದ ನೋವಾಯಿತು.. ನನಗೆ ಅವಳು ಮೋಸ ಮಾಡಿಬಿಟ್ಟಳು ಅನ್ನಿಸಿತು. ಕೊನೆಯದಾಗಿ ಮಾರ್ಚ್ 8, 2021 ರಂದು ಅವಳು ನಮ್ಮ ಮದುವೆಯನ್ನ ರದ್ದುಗೊಳಿಸಿದ್ದಕ್ಕಾಗಿ ಅವಳ ವಿರುದ್ಧ ಆಲಿಪೋರ್ ನ್ಯಾಯಾಲಯದಲ್ಲಿ ಸಿವಿಲ್ ಮೊಕದ್ದಮೆ ಹೂಡಿದೆ.

  7. ನಮ್ಮ ಪ್ರಕರಣ ಕೋರ್ಟ್​ನ ಅಂಗಳದಲ್ಲಿ ಇರೋದ್ರಿಂದ ನಾನು ಅವಳ ಕುರಿತಾಗಲಿ, ನಮ್ಮ ಪರ್ಸನಲ್ ಲೈಫ್​ ಕುರಿತಾಗಲೀ ಹೇಳಿಕೆ ನೀಡೋದನ್ನ ನಿಲ್ಲಿಸಿಬಿಟ್ಟೆ. ಈಗಲೂ ನಮ್ಮ ಸಂಬಂಧದಲ್ಲಾದ ಅಪಶ್ರುತಿಯ ಬಗ್ಗೆ ನಾನು ವಿವರವಾಗಿ ಎಲ್ಲೂ ಹೇಳುತ್ತಿಲ್ಲ. ಆದರೆ ಅವಳ ಇತ್ತೀಚಿನ ಸ್ಟೇಟ್​ಮೆಂಟ್​ ಅವಳ ಕುರಿತ ಕೆಲವು ವಿಚಾರಗಳನ್ನ ಬಿಚ್ಚಿಡುವಂತೆ ಮಾಡಿದೆ.

  8. ಮದುವೆಯ ನಂತರ ಅವಳ ಹೋಮ್​ಲೋನ್​ ಹೊರೆಯಿಂದ ಅವಳಿಗೆ ರಿಲೀಫ್ ನೀಡಲು ನನ್ನ ಫ್ಯಾಮಿಲಿ ಅಕೌಂಟ್​ನಿಂದ ಅವಳ ಅಕೌಂಟ್​ಗೆ ಹಣ ಕಳುಹಿಸಿದ್ದೇನೆ. ಅವಳು ಇನ್​ಸ್ಟಾಲ್​ಮೆಂಟ್ ಅಥವಾ ತನ್ನ ಬಳಿ ಹಣವಿದ್ದಾಗ ವಾಪಸ್ ನೀಡುತ್ತಾಳೆಂದು ಹೇಳಿದ್ದರಿಂದ ಅವಳ ಅಕೌಂಟ್​ಗೆ ಹಣ ಕಳುಹಿಸಿದ್ದೇನೆ. ಅವಳ ಅಕೌಂಟ್​ನಿಂದ ನನ್ನ ಕುಟುಂಬದ ಅಕೌಂಟ್​ಗೆ ಯಾವುದಾದರೂ ಹಣ ಬಂದಿದ್ದರೆ ಅದು ಅವಳು ನನಗೆ ನೀಡಬೇಕಿದ್ದ ಹಣವಷ್ಟೇ. ಅವಳು ನನಗಿನ್ನೂ ಸಾಕಷ್ಟು ಹಣ ವಾಪಸ್ ಮಾಡಬೇಕಿದೆ. ಆಕೆ ನನ್ನ ಮೇಲೆ ಮಾಡಿರುವ ಆರೋಪಗಳೆಲ್ಲವೂ ಆಧಾರ ರಹಿತ, ಅವಹೇಳನಕಾರಿ ಹಾಗೂ ಸತ್ಯದಿಂದ ದೂರವಾದವು. ಅಗತ್ಯ ಇರುವವರು ಪ್ರೂಫ್​ಗಳನ್ನ ಹುಡುಕುವ ಅಗತ್ಯ ಬೀಳುವುದಿಲ್ಲ, ಈಗಾಗಲೇ ಅಲ್ಲಿ ಪ್ರೂಫ್​ಗಳಿವೆ. ಇದಕ್ಕೆ ನನ್ನ ಬ್ಯಾಂಕ್​​ ಸ್ಟೇಟ್​ಮೆಂಟ್​ ಮತ್ತು ನನ್ನ ಕ್ರೆಡಿಟ್​ ಕಾರ್ಡ್​ ಸ್ಟೇಟ್​ಮೆಂಟ್​ಗಳ ಸಾಕ್ಷಿಯೇ ಸಾಕು. ಇಂಥ ಪರಿಸ್ಥಿತಿ ಇಂದು ಎದುರಾಗುತ್ತೆಂದು ಗೊತ್ತಿಲ್ಲದೇ ನನ್ನ ಫ್ಯಾಮಿಲಿ ಅವಳನ್ನು ಮಗಳಂತೆ ತೋಳುಗಳಲ್ಲಿ ಬಾಚಿಕೊಂಡಿತ್ತು.

  9. ಇಂಥ ಸಂದರ್ಭದಲ್ಲಿ ನಾನು ಮಾಧ್ಯಮಗಳಿಗೆ ನಮ್ಮ ಪರ್ಸನಲ್ ಲೈಫ್​ನಲ್ಲಿ ಎದುರಾಗಿರುವ ಸಮಸ್ಯೆಗಳ ಬಗ್ಗೆ ಯಾವುದೇ ರೀತಿಯ ಕಮೆಂಟ್ ಮಾಡಬೇಡಿ ಎಂದು ಕೇಳಿಕೊಳ್ತೇನೆ.

 

ಒಟ್ಟಿನಲ್ಲಿ ಇಬ್ಬರೂ ಒಂದೊಂದು ಕಾರಣಗಳನ್ನ ಹೇಳಿಕೊಂಡು.. ಒಬ್ಬರ ಮೇಲೊಬ್ಬರು ಆರೋಪ ಮಾಡಿಕೊಳ್ತಿರೋ ಮಧ್ಯೆ ಯಶ್ ಹೆಸರು ಕೂಡ ಕೇಳಿಬರ್ತಿದೆ. ಯಶ್ ಅವರೇ ಇವರ ನಡುವಿನ ದಾಂಪತ್ಯದ ಒಡಕಿಗೆ ಕಾರಣರಾದ್ರಾ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ.

The post ಸಂಬಂಧ ಹೇಗೆ ಬೆಳೆಯಿತು? ಹೇಗೆ ಹಳಸಿತು..? ನುಸ್ರತ್​ ಪತಿ ಸ್ಫೋಟಕ ಕೌಂಟರ್​​ appeared first on News First Kannada.

Source: newsfirstlive.com

Source link