ಗದಗ: ಕಾರ ಹುಣ್ಣಿಮೆ ಸಂಭ್ರಮದಲ್ಲಿದ್ದ ಗದಗ ಜಿಲ್ಲೆಯ ಸೂರಣಗಿ ಗ್ರಾಮದಲ್ಲಿ ಇದೀಗ ಸೂತಕದ ವಾತಾವರಣ ನಿರ್ಮಾಣವಾಗಿದೆ.

ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಿನ್ನೆ ಕಾರ ಹುಣ್ಣಿಮೆ ನಿಮಿತ್ತ ಕರಿ ಹರಿಯುವ ವೇಳೆ ದುರ್ಘಟನೆಯೊಂದು ಸಂಭವಿಸಿದೆ.

ರಾಸುಗಳನ್ನ ಓಡಿಸುವಾಗ ರಾಸೊಂದು ಡಿಕ್ಕಿ ಹೊಡೆದ ರಭಸಕ್ಕೆ ಕಿರಣ್ ಕುಮಾರ್ ನರ್ತಿ ಎಂಬಾತ ನೆಲಕ್ಕುರುಳಿದ್ದ. ಆತನನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

The post ಸಂಭ್ರಮದಲ್ಲಿದ್ದ ಈ ಗ್ರಾಮದಲ್ಲೀಗ ಸೂತಕ.. ಎತ್ತು ಹಿಡಿಯಲು ಹೋಗಿ ಪ್ರಾಣ ಕಳ್ಕೊಂಡ ಯುವಕ appeared first on News First Kannada.

Source: newsfirstlive.com

Source link