ಬೆಳಗಾವಿ: ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆ ನೀಗಿಸಲು ಜಿಲ್ಲಾಡಳಿತ ಸಕ್ಕರೆ ಕಾರ್ಖಾನೆ ಮೊರೆಹೋಗಿದೆ. ಜಿಲ್ಲೆಯಲ್ಲಿನ  25 ಸಕ್ಕರೆ ಕಾರ್ಖಾನೆಗಳ ಆಕ್ಸಿಜನ್ ಸಿಲಿಂಡರ್​ಗಳನ್ನ ವಶಕ್ಕೆ ಪಡೆಯಲು ಡಿಸಿಎಂ ಗೋವಿಂದ ಕಾರಜೋಳ ಸೂಚನೆ ನೀಡಿದ್ದಾರೆ.

ವಶಪಡಿಸಿಕೊಂಡ ಸಿಲಿಂಡರ್​ಗಳನ್ನ ತುಂಬಿಸಿ ಕೊವೀಡ್ ಸೋಂಕಿತರ ಚಿಕಿತ್ಸೆಗೆ ನೀಡಬೇಕು. ಇನ್ನು 1,000 ಸಿಲಿಂಡರ್​ಗಳು ಕಾರ್ಖಾನೆಗಳಲ್ಲಿ ಲಭ್ಯವಿದ್ದು ಅವುಗಳನ್ನ ವಶಕ್ಕೆ ಪಡೆದು ಆಯಾ ಆಸ್ಪತ್ರೆಗೆ ನೀಡುವ ಜವಾಬ್ದಾರಿಯನ್ನ ಉತ್ತರವಲಯ ಐಜಿಪಿ ರಾಘವೇಂದ್ರ ಸುಹಾಸ್ ಅವರಿಗೆ ನೀಡಲಾಗಿದೆ.

ಪರಿಸ್ಥಿತಿ ಸುಧಾರಿಸಿದ ನಂತರ ಮತ್ತೆ ಕಾರ್ಖಾನೆಗೆ ಸಿಲಿಂಡರ್​ಗಳನ್ನ ವಾಪಸ್ ನೀಡಿ…ಮಹಾರಾಷ್ಟ್ರ ದಲ್ಲಿ ಇಥೆನಾಲ್ ಘಟಕ ಹೊಂದಿರುವ ಸಕ್ಕರೆ ಕಾರ್ಖಾನೆಗಳು ಆಕ್ಸಿಜನ್ ಉತ್ಪಾದನೆ ಮಾಡಿ ನೀಡುತ್ತಿವೆ. ಇದೇ ಮಾದರಿಯಲ್ಲಿ ಸಕ್ಕರೆ ಕಾರ್ಖಾನೆಯಲ್ಲಿ ಉತ್ಪಾದನೆ ಸಾಧ್ಯನಾ ಪರಿಶೀಲನೆ ಮಾಡಿ ಎಂದು ಕಾರಜೋಳ ಸೂಚನೆ ನೀಡಿದ್ದಾರೆ.

The post ಸಕ್ಕರೆ ಕಾರ್ಖಾನೆಗಳ ಆಕ್ಸಿಜನ್ ಸಿಲಿಂಡರ್​ಗಳನ್ನ ಕೋವಿಡ್ ಚಿಕಿತ್ಸೆಗೆ ಬಳಸಿ- ಕಾರಜೋಳ ಸೂಚನೆ appeared first on News First Kannada.

Source: newsfirstlive.com

Source link