ಸ್ಪರ್ಧಾತ್ಮಕ ಕ್ರಿಕೆಟ್​​ನಿಂದ ನಿವೃತ್ತಿ ಹೊಂದಿದ ಬಳಿಕ, ಕ್ರಿಕೆಟ್​ನ ದಂತಕಥೆ ಎನಿಕೊಂಡ ಹಲವರಿದ್ದಾರೆ. ಆದ್ರೆ ಟೀಮ್​ ಇಂಡಿಯಾ ನಾಯಕ ಸಕ್ರಿಯ ಕ್ರಿಕೆಟ್​​​ನಲ್ಲಿರುವಾಗ್ಲೇ, ಲೆಜೆಂಡ್​. ಭಾರತೀಯ ಕ್ರಿಕೆಟ್​ ಕಂಡ ಶ್ರೇಷ್ಠ ಆಲ್​ರೌಂಡರ್​​ ಯುವರಾಜ್​ ಸಿಂಗ್, ಈ ಮಾತನ್ನ ಹೇಳಿದ್ದಾರೆ.

ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಸೋಲಿನ ಬಳಿಕ, ವಿರಾಟ್​ ಕೊಹ್ಲಿಯ ನಾಯಕತ್ವ ಚರ್ಚೆ ತೀವ್ರವಾಗ್ತಿವೆ. ಒಬ್ಬ ಆಟಗಾರನಾಗಿ ಕೊಹ್ಲಿಯ ವರ್ತನೆಗಳ ಬಗ್ಗೆಯೂ ಟೀಕೆ-ಟಿಪ್ಪಣಿಗಳು, ನಡೀತಾಲೆ ಇವೆ. ಆದ್ರೆ ಕೊಹ್ಲಿ ಬಗ್ಗೆ ಮಾತನಾಡಿರುವ ಯುವರಾಜ್​ ಸಿಂಗ್​, ಆತ ಸಕ್ರಿಯ ಕ್ರಿಕೆಟ್​ನಲ್ಲಿರುವಾಗಲೇ ಲೆಜೆಂಡ್​ ಎಂದು ಗುಣಗಾನ ಮಾಡಿದ್ದಾರೆ.

‘ಕೊಹ್ಲಿ ಒಬ್ಬ ಲೆಜೆಂಡ್​’

‘ಆಟಗಾರರು ನಿವೃತ್ತಿ ಆದ ಬಳಿಕ ಲೆಜೆಂಡ್​ಗಳಾಗುತ್ತಾರೆ. ಆದ್ರೆ, 30 ವರ್ಷಕ್ಕೆ ವಿರಾಟ್​ ಕೊಹ್ಲಿ ಲೆಂಜೆಂಡ್​​ ಆಗಿದ್ದಾನೆ. ಆತ ಕ್ರಿಕೆಟ್​ನಲ್ಲಿ ಬೆಳೆದ ಬಗೆಯನ್ನ ನೋಡಲು ನಿಜಕ್ಕೂ ಶ್ರೇಷ್ಠ ಅನುಭವಾಗುತ್ತದೆ. ಆತನ ಅಂತ್ಯವೂ ಅಮೋಘವಾಗಿರುತ್ತದೆ ಎಂದು ಭಾವಿಸಿದ್ದೇನೆ’’

ಯುವರಾಜ್​ ಸಿಂಗ್​, ಮಾಜಿ ಕ್ರಿಕೆಟಿಗ

ಹೌದು, ಯುವರಾಜ್​ ಹೇಳಿದಂತೆ ಕೊಹ್ಲಿ ಸಕ್ರಿಯ ಕ್ರಿಕೆಟ್​ನಲ್ಲಿರುವಾಗಲೇ, ಲೆಜೆಂಡ್​ ಆಗಿ ಮಾರ್ಪಟ್ಟಿದ್ದಾರೆ. 2008ರಿಂದ 2021ರವರೆಗೆ ಸಾಗಿರುವ ಕೊಹ್ಲಿಯ ಜರ್ನಿಯೇ, ಇದಕ್ಕೆ ಸಾಕ್ಷಿಯಾಗಿ ನಿಂತಿದೆ. ಸುದೀರ್ಘ 13 ವರ್ಷಗಳ ಈ ಹಾದಿಯಲ್ಲಿ, ಕೊಹ್ಲಿ ಮೇಲೆ ಬಂದ ಟೀಕೆ-ಟಿಪ್ಪಣಿಗಳು ಅದೆಷ್ಟೋ. ಆದ್ರೆ ಇದ್ಯಾವುದಕ್ಕೂ ತಲೆ ಕೆಡೆಸಿಕೊಳ್ಳದೇ ರನ್​ಮಷೀನ್​ ತನ್ನ ಕನ್ಸಿಸ್ಟೆನ್ಸಿ ಪ್ರದರ್ಶನದೊಂದಿಗೆ, ಸಾಗುತ್ತಲೇ ಇದ್ದಾರೆ. ಈ ಅಂಶಗಳನ್ನ ಗಮನಿಸಿಯೇ ಯುವರಾಜ್​ ಲೆಜೆಂಡ್​ ಎಂದು ಗುಣಗಾನ ಮಾಡಿರೋದು.

‘30 ವರ್ಷಕ್ಕೆ ಸಾಕಷ್ಟನ್ನ ಸಾಧಿಸಿದ್ದಾನೆ​’

‘ಆತ ಬೆಳೆದು ಬಂದ ರೀತಿಯನ್ನ ನೋಡಿದ್ದೇನೆ. ಆತನೊಬ್ಬ ಕಠಿಣ ಪರಿಶ್ರಮಿ, ಶಿಸ್ತಿನ ಡಯಟ್ ಪಾಲಕ. ಆತ ರನ್​ಗಳನ್ನ ಕಲೆ ಹಾಕುತ್ತಿರುವಾಗ ನೋಡಿದರೆ, ಆತ ವಿಶ್ವದ ಅತ್ಯುತ್ತಮ ಆಟಗಾರ ಎಂದು ಅನ್ನಿಸುತ್ತದೆ. ಆತ ಆಟಗಾರನಾಗಿದ್ದದ್ದಕ್ಕಿಂತ ನಾಯಕನಾದ ಮೇಲೆ ಇನ್ನಷ್ಟು ಸ್ಥಿರ ಪ್ರದರ್ಶನ ನೀಡಿದ್ದಾನೆ. 30 ವರ್ಷಕ್ಕೆ ಆತ ಸಾಕಷ್ಟನ್ನ ಸಾಧಿಸಿದ್ದಾನೆ’

ಯುವರಾಜ್​ ಸಿಂಗ್​, ಮಾಜಿ ಕ್ರಿಕೆಟಿಗ

ರಿಸರ್ವ್​ ಪ್ಲೇಯರ್​ ಆಗಿ ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾಗಿ ಆಕಸ್ಮಿಕವಾಗಿ ಸಿಕ್ಕ ಅವಕಾಶದಲ್ಲಿ ಡೆಬ್ಯೂ ಮಾಡಿದ ಕೊಹ್ಲಿ, ಸಿಕ್ಕೆಲ್ಲಾ ಅವಕಾಶಗಳನ್ನೂ ಬಾಚಿ ಕೊಂಡಿದ್ದಾರೆ. ನಾಯಕನಾಗಿ, ಆಟಗಾರನಾಗಿ ಯಶಸ್ಸು ಕಂಡಿದ್ದಾರೆ. ಬರೆದ ದಾಖಲೆಗಳು ಹಾಗೂ ತಲುಪಿದ ಮೈಲಿಗಲ್ಲುಗಳಿಗಂತೂ, ಲೆಕ್ಕವೇ ಇಲ್ಲ. ಇನ್ನು ಕೆಲ ವರ್ಷ ಕ್ರಿಕೆಟ್​ನಲ್ಲಿ ಸಕ್ರಿಯವಾಗಿದ್ದೇ ಆದ್ರೆ, ಸದ್ಯ ವಿಶ್ವ ಕ್ರಿಕೆಟ್​ನಲ್ಲಿ ಲೆಜೆಂಡ್​ಗಳಾಗಿ ಗುರುತಿಸಿಕೊಂಡಿರುವ ಆಟಗಾರರ ದಾಖಲೆಗಳನ್ನ ಅಳಿಸಿಹಾಕೋದ್ರಲ್ಲಿ ಅನುಮಾನವೂ ಇಲ್ಲ.

The post ‘ಸಕ್ರಿಯ ಕ್ರಿಕೆಟ್​ನಲ್ಲಿರುವಾಗಲೇ ಕೊಹ್ಲಿ ಲೆಜೆಂಡ್​’- ವಿರಾಟ್​​ ಸಾಧನೆಗಳ ಬಗ್ಗೆ ಯುವಿ ಮೆಚ್ಚುಗೆ appeared first on News First Kannada.

Source: newsfirstlive.com

Source link