ಶಿವಮೊಗ್ಗ: ಇಲ್ಲಿನ ಸಕ್ರೆಬೈಲು ಆನೆ ಬಿಡಾರದ ಆನೆಗಳಿಗೆ ವೈಲ್ಡ್​ ಟಸ್ಕರ್​ ಸಂಸ್ಥೆಯ ಗೌರವ ಟ್ರಸ್ಟಿ, ಜೆಡಿಎಸ್​ನ ರಾಜ್ಯಪ್ರಧಾನ ಕಾರ್ಯದರ್ಶಿ ಎಂ‌.ಶ್ರೀಕಾಂತ್ ಅಕ್ಕಿ, ಬೆಲ್ಲ, ತರಕಾರಿ, ಕಾಯಿಯನ್ನು ಇಂದು ವಿತರಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಎಂ.ಶ್ರೀಕಾಂತ್, ಲಾಕ್​ ಡೌನ್​ನಿಂದಾಗಿ ವನ್ಯಜೀವಿಗಳೂ ಸಂಕಷ್ಟದಲ್ಲಿವೆ. ಆಹಾರಕ್ಕಾಗಿ ಈ ಭಾಗದ ರಸ್ತೆ ಬದಿಗಳಲ್ಲಿ ಬರುವ ವಾಹನಗಳನ್ನು ಎದುರು ನೋಡುತ್ತಿದ್ದ ಮಂಗಗಳು ಇದೀಗ ಊರುಗಳಿಗೆ ನುಗ್ಗುತ್ತಿವೆ. ಸಂಕಷ್ಟದ ಈ ಸಂದರ್ಭದಲ್ಲಿ ವನ್ಯಜೀವಿಗಳ ಹಸಿವು ನೀಗಿಸಬೇಕಾದ ಕೆಲಸವಾಗಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ

ಈ ವೇಳೆ, ವಲಯ ಅರಣ್ಯಾಧಿಕಾರಿ ಶಿವರಾಜ್ ಮಠದ್​, ವನ್ಯಜೀವಿ ವೈದ್ಯ ಡಾ.ವಿನಯ್​, ಫಾರೆಸ್ಟ್​ ಗಾರ್ಡ್​ ಗೀತಾ, ಜಮೇದಾರ್​ ಜಲೀಲ್​ ಹಾಗೂ ವೈಲ್ಡ್​ ಟಸ್ಕರ್​ ಸಂಸ್ಥೆಯ ನಿರ್ದೇಶಕ ಜೇಸುದಾಸ್​ ಪಿ ಉಪಸ್ಥಿತರಿದ್ದರು. ಎರಡು ದಿನದ ಹಿಂದಷ್ಟೇ ಸಕ್ರೆಬೈಲ್​ ಬಿಡಾರಕ್ಕೆ ಭೇಟಿ ಕೊಟ್ಟು ಇಲ್ಲಿನ ಸಿಬ್ಬಂದಿಯ ಯೋಗ ಕ್ಷೇಮ ವಿಚಾರಿಸಿದ್ದರು. ಸಮಸ್ಯೆಗಳನ್ನು ಆಲಿಸಿ ದಿನಗೂಲಿ ಸಿಬ್ಬಂದಿಗೆ ಪುಡ್​ ಕಿಟ್​ ಒದಗಿಸಿದ್ದರು.

The post ಸಕ್ರೆಬೈಲು ಬಿಡಾರದ ಆನೆಗಳಿಗೆ ಅಕ್ಕಿ, ಬೆಲ್ಲ, ತರಕಾರಿ, ಕಾಯಿ ವಿತರಿಸಿದ ಜೆಡಿಎಸ್​ ರಾಜ್ಯಪ್ರಧಾನ ಕಾರ್ಯದರ್ಶಿ appeared first on News First Kannada.

Source: newsfirstlive.com

Source link