ಸಖತ್​ ಖುಷಿಯಲ್ಲಿದೆ ಪಾರು ತಂಡ.. ಕಾರಣವೇನು ಗೊತ್ತಾ..?


ಪಾರು.. ವೀಕ್ಷಕರ ಮೆಚ್ಚಿನ ಧಾರಾವಾಹಿಗಳಲೊಂದು. ಅಷ್ಟೇಯಲ್ಲ ಡೇ ಒನ್​ನಿಂದಲೂ ಟಿಆರ್​ಪಿಯಲ್ಲಿ ಸದಾ ಪಾರು ಮುಂದೆನೇ ಇದ್ದಾಳೆ. ಹಳ್ಳಿ ಸೊಗಡನಿಂದ ಕಣ್ಮನ ಸೆಳೆದ ಚಲುವೆ ಪಾರು ಅಂದಿಗೂ ಇಂದಿಗೂ ಪ್ರತಿ ಮನೆಯ ಮಗಳಾಗಿ ರಾರಾಜಿಸುತ್ತಿದ್ದಾಳೆ.

ಅಂದ್ಹಾಗೆ, ನಮ್ಮ ಪಾರು ಈಗ ಸಖತ್​ ಖುಷಿಯಾಗಿದ್ದಾಳೆ. ಅವಳೊಬ್ಬಳೇ ಅಲ್ಲ ಇಡೀ ತಂಡ ಸಂಭ್ರದಲ್ಲಿದೆ. ಇದಕ್ಕೆ ಕಾರಣ 800. ಅರ್ಥಾತ್ ಕಿರುತೆರೆಯಲ್ಲಿ​ ನಮ್ಮ ಪಾರು 800 ಸಂಚಿಕೆಗಳನ್ನ ಪೂರೈಸಿ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಈ ಬಗ್ಗೆ ನಿರ್ಮಾಪಕ ದಿಲೀಪ್ ರಾಜ್, ನಟ ಶರತ್ ಪದ್ಮನಾಭ್ ಹಾಗೂ ನಟಿ ಮೋಕ್ಷಿತಾ ಪೈ ಅವರು ತಮ್ಮ ಇನ್​ಸ್ಟಾ ಪೇಜ್​ನಲ್ಲಿ ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು, ವೀಕ್ಷಕರ ಪ್ರೀತಿ, ಬೆಂಬಲಕ್ಕೆ ಧನ್ಯವಾದ ತಿಳಿಸಿದ್ದಾರೆ.

ಸದ್ಯ ಪಾರು-ಆದಿಯ ಪ್ರೀತಿಗೆ ಯಾಮಿನಿ ಗೋಡೆಯಾಗಿ ನಿಂತಿದ್ದು, ಈ ಗೋಡೆಯನ್ನ ಬೀಳಿಸಲು ರಣಕಲ್ಲು ವೀರಯ್ಯ ಹೋರಾಡುತ್ತಿದ್ದರೆ ಇತ್ತ ಸತ್ಯ ನ್ಯಾಯಕ್ಕಾಗಿ ತಲೆಬಾಗುವ ಅರಸನಕೋಟೆಯ ಅಖಿಲಾಂಡೇಶ್ವರಿ ಮಗನ ಪ್ರೀತಿಯ ಬಗ್ಗೆ ಅರಿವಿಲ್ಲದೇ ಅಣ್ಣ ಜೊತೆ ಯುದ್ಧಕ್ಕೆ ನಿಂತಿದ್ದಾಳೆ.

ಇನ್ನೂ ಆದಿ ತ್ರೀಶಂಕು ಸ್ಥಿತಿಯಲ್ಲಿದ್ದು, ಅಮ್ಮನಿಗೆ ಪ್ರೀತಿ ವಿಷಯ ತಿಳಿಸೋಕಾಗದೇ, ಇತ್ತ ಪಾರು ಮನಸ್ಸನ್ನ ಬದಲಾಯಿಸೊಕಾದೇ ಒದ್ದಾಡುತ್ತಿದ್ದಾನೆ. ಇನ್ನೂ ಪಾರು ಕೂಡ ಧರ್ಮ ಸಂಕಟದಲ್ಲಿದ್ದಾಳೆ. ಇದಕ್ಕೆಲ್ಲ ಕಾರಣ ಒನ್​ ಆ್ಯಂಡ್​ ಒನ್ಲಿ ದಿ ವಿಲನ್​ ಅನನ್ಯ. ಯಾಮಿನಿ ಹಿಂದೆ ಕೂಡ ಅನನ್ಯಾಳ ಕೈಯಿದ್ದು, ಅರಸನಕೋಟೆಯನ್ನ ಯಾಮಿನಿ ಹಾಗೂ ಅನನ್ನಾಳಿಂದ ರಕ್ಷಿಸಲು ಪಾರು ಆದಿಯನ್ನ ಮದುವೆಯಾಗ್ತಾಳಾ ಅನ್ನೋದೆ ಸದ್ಯದ ಟ್ವಿಸ್ಟ್​.

ಹಿರಿಯ ನಟಿ ವಿನಯಾ ಪ್ರಸಾದ್​, ನಿರ್ದೇಶಕ ಕಮ್​ ನಟ ಎಸ್​. ನಾರಾಯಣ ಹೀಗೆ ದೊಡ್ಡ ತಾರಾಬಳಗವಿರುವ ಧಾರಾವಾಹಿ ಪಾರು. ಟ್ವಿಸ್ಟ್​ ಮೇಲೆ ಟ್ವಿಸ್ಟ್​ ನೀಡಿ ವೀಕ್ಷಕರನ್ನ ಹಿಡಿದಿಟ್ಟುಕೊಂಡಿದೆ. ಒಟ್ಟಿನಲ್ಲಿ 800 ಸಂಚಿಕೆಗಳನ್ನ ಯಶಸ್ವಿಯಾಗಿ ಪೂರೈಸಿರು ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದ್ದು, ಸಮಯ ಬದಲಾವಣೆಯಾದ್ರು ಕೂಡ ಪಾರುಳನ್ನ ಕೈ ಬಿಡದೇ ಮುನ್ನಡೆಸುತ್ತಿದ್ದಾರೆ ಪ್ರೇಕ್ಷಕರು.

News First Live Kannada


Leave a Reply

Your email address will not be published. Required fields are marked *