‘ಸಖತ್’​ ವೇದಿಕೆಯಲ್ಲಿ ಗಣೇಶ್​ ಕೋರಿಕೆ ಮೇರೆಗೆ ‘ಎಕ್ಸ್​ಕ್ಯೂಸ್​ಮೀ’ ಹಾಡು ಹೇಳಿದ ಪ್ರೇಮ್ | Golden Star Ganesh and Jogi Prem sing Excuse Me song in Sakath movie pre release event

‘ಗೋಲ್ಡನ್​ ಸ್ಟಾರ್​’ ಗಣೇಶ್​ (Golden Star Ganesh) ಅಭಿನಯದ ‘ಸಖತ್​’ (Sakath Kannada Movie) ಸಿನಿಮಾ ನ.26ರಂದು ಬಿಡುಗಡೆ ಆಗಲಿದೆ. ಸೋಮವಾರ (ನ.22) ಈ ಸಿನಿಮಾದ ಪ್ರೀ-ರಿಲೀಸ್​ ಇವೆಂಟ್​ ಅದ್ದೂರಿಯಾಗಿ ನಡೆಯಿತು. ಅತಿಥಿಗಳಾಗಿ ಸ್ಯಾಂಡಲ್​ವುಡ್​ನ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದರು. ಖ್ಯಾತ ನಿರ್ದೇಶಕ ‘ಜೋಗಿ’ ಪ್ರೇಮ್ (Jogi Prem) ಕೂಡ ಈ ಕಾರ್ಯಕ್ರಮಕ್ಕೆ ಹಾಜರಿ ಹಾಕಿದ್ದರು. ಗಣೇಶ್​ ಮತ್ತು ಪ್ರೇಮ್​ ಜೊತೆಯಾಗಿ ವೇದಿಕೆ ಏರಿದರು. ಈ ವೇಳೆ ಪ್ರೇಮ್​ಗೆ ಗಣೇಶ್​ ಒಂದು ಮನವಿ ಮಾಡಿಕೊಂಡರು. ‘ಎಕ್ಸ್​ಕ್ಯೂಸ್​ಮೀ’ ಸಿನಿಮಾದ ‘ಬ್ರಹ್ಮ ವಿಷ್ಣು ಮಹೇಶ್ವರ ಹಾಲು ಕುಡಿದರೋ..’ ಹಾಡನ್ನು ಹೇಳುವಂತೆ ಕೋರಿಕೊಂಡರು. ಅದಕ್ಕೆ ಪ್ರೀತಿಯಿಂದಲೇ ಪ್ರತಿಕ್ರಿಯಿಸಿದ ಪ್ರೇಮ್​ ಅವರು ಆ ಹಾಡು ಹೇಳಿದರು. ಅವರ ಜತೆ ಗಣೇಶ್​ ಕೂಡ ಧ್ವನಿಗೂಡಿಸಿದರು. ‘ಸಖತ್​’ ಚಿತ್ರಕ್ಕೆ ಸಿಂಪಲ್​ ಸುನಿ (Simple Suni) ನಿರ್ದೇಶನ ಮಾಡಿದ್ದಾರೆ. ನಿಶ್ವಿಕಾ ನಾಯ್ಡು ಮತ್ತು ಸುರಭಿ ಪುರಾಣಿಕ್​ ಅವರು ಗಣೇಶ್​ಗೆ ನಾಯಕಿಯರಾಗಿ ಅಭಿನಯಿಸಿದ್ದಾರೆ.

ಇದನ್ನೂ ಓದಿ:

‘ಚಿತ್ರರಂಗ ಇರುವವರೆಗೂ ಪವರ್​ ಸ್ಟಾರ್​ ಅವರೇ ನಂ.1’; ಅಪ್ಪು ಬಗ್ಗೆ ಗಣೇಶ್​ ಅಭಿಮಾನದ ಮಾತು

ದೇವರಿಗೆ ಮುಡಿ ಕೊಟ್ಟು, ಪುನೀತ್​ಗಾಗಿ ಹಾಡು ಹೇಳಿದ ನಟಿ ವಿಜಯಲಕ್ಷ್ಮೀ; ಇಲ್ಲಿದೆ ವಿಡಿಯೋ

TV9 Kannada

Leave a comment

Your email address will not be published. Required fields are marked *