ಜೀವನಕ್ಕಾಗಿ ಕೆಲಸಕ್ಕಾಗಿ ಬೆಂಗಳೂರಿಗೆ ಬಂದವರಿಗೆ ಬಾಡಿಗೆ ಮನೆಯೇ ಅರಮನೆ ಇದ್ದಂಗೆ. ಬೆಂಗಳೂರಿನಲ್ಲಿ ಒಳ್ಳೆಯ ಬಾಡಿಗೆ ಮನೆ ಸಿಗೋದೆ ಪುಣ್ಯ ಅಂತರೆ ಅನುಭವಸ್ಥರು. ಆದ್ರೆ ಗೋಲ್ಡನ್ ಸ್ಟಾರ್ ಗಣೇಶ್ ಬಾಡಿಗೆ ಮನೆಯನ್ನ ಹುಡುಕುತ್ತಿದ್ದಾರೆ. ಅದ್ಯಾಕೆ ಸಖತ್ ಹೀರೋ ಬಾಡಿಗೆ ಮನೆಯನ್ನ ಹುಡ್ಕುತ್ತಿದ್ದಾರೆ ಅಂತೀರಾ ಈ ಸ್ಟೋರಿ ಓದಿ..
ಬಾಡಿಗೆ ಮನೆಯೂ ಸುಲಭಕ್ಕೆ ಸಿಗುವುದಿಲ್ಲ , ನಮ್ಮ ಮೀಟ್ ಮಾಡೋ ಓನರ್ಸ್ ಕಳ್ಳರಂತೆ ನೋಡುತ್ತಾರಲ್ಲ. ಟು ಲೇಟ್ ಬೋರ್ಡು ಕಡೆ ಹೊಂಟಿದೆ ನಮ್ಮ ಪಯಣ. ಈ ಬ್ಯಾಚುಲರ್ಸ್ ನಾಯಿ ಪಾಡು ಈ ಲರ್ನು ಯಾರಿಗೆ ಹೇಳೋಣ. ಈ ರೀತಿ ಧರ್ಮಣ್ಣ ಜೊತೆ ಸೇರಿ ಗೋಲ್ಡನ್ ಸ್ಟಾರ್ ಗಣೇಶ್ ಹಾಡುತ್ತಿದ್ದಾರೆ.. ಅದ್ರೆ ನಿಜ ಜೀವನದಲ್ಲಿ ಅಲ್ಲ ಸಖತ್ ಸಿನಿಮಾದಲ್ಲಿ.
ಸಖತ್ ಹೀರೋ ಬಾಡಿಗೆ ಮನೆ ಹುಡುಕುತ್ತಿರೋದ್ಯಾಕೆ?
ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಸಖತ್ ಸಿನಿಮಾ. ಈ ಸಿನಿಮಾದ ಪ್ರತಿ ಸೀನ್ ಅನ್ನು ಪ್ರೇಕ್ಷಕ ಮಹಾ ಪ್ರಭು ಸಖತ್ತಾಗಿ ಎಂಜಾಯ್ ಮಾಡ್ತಿದ್ದಾರೆ. ಸಖತ್ ಸಿನಿಮಾದಲ್ಲಿ ಮೂಡಿಬಂದಿರುವ ಸಿಚ್ಯುವೆಷನಲ್ ಸಾಂಗ್ ಬಾಡಿಗೆ ಮನೆ. ಇವತ್ತು ಬೆಂಗಳೂರಿನಲ್ಲಿ ಬಾಡಿಗೆ ಮನೆಯನ್ನ ಬ್ಯಾಚುಲರ್ಸ್ ಪಡೆಯುವುದು ಎಷ್ಟು ಕಷ್ಟ ಅನ್ನೋದನ್ನ ಈ ಹಾಡಿನಲ್ಲಿ ಸೊಗಸಾಗಿ ಬಣ್ಣಿಸಲಾಗಿದೆ.
ಒಂದ್ ಕಾಲದಲ್ಲಿ ನೆಲಮಂಗಲದ ಅಡಕಮಾರನ ಹಳ್ಳಿಯಿಂದ ಬಾಡಿಗೆ ಮನೆ ಹುಡ್ಕೊಂಡು ಬಂದವರು ಗೋಲ್ಡನ್ ಸ್ಟಾರ್ ಗಣೇಶ್. ನಿರೂಪಕರಾಗಿ ಸೈಡ್ ಆಕ್ಟರ್ ಆಗಿ ಕಾಮಿಡಿಯನ್ ಆಗಿ ಹೀರೋ ಆಗಿ ಒಂದೊಂದೆ ಮೆಟ್ಟಿಲನ್ನ ಏರಿ ಸಾಧನೆಯ ಶಿಖರದಲ್ಲಿ ಕುಳಿತ ಸಾಧಕ ಗಣೇಶ್. ತನ್ನ ಬಾಳಲ್ಲಿ ಆದ ಸನ್ನಿವೇಷವನ್ನೆ ಸ್ಫೂರ್ತಿಯನ್ನಾಗಿಸಿಕೊಂಡು ಬಾಡಿಗೆ ಮನೆ ಹಾಡನ್ನ ಕ್ರಿಯೆಟ್ ಮಾಡಿಸಿದ್ದಾರೆ ಗಣೇಶ್.
ಸಖತ್ ಸಿನಿಮಾದಲ್ಲಿ ಮಯೂರಿ ಮೇಡಂ ಗಾಗಿ ಬ್ಲೈಂಡ್ ಬಾಲು ಪಾತ್ರದಾರಿ ಹೆಂಗೆಲ್ಲ ಸರ್ಕಸ್ ಮಾಡ್ತಾರೆ ಅನ್ನೋದನ್ನ ಸಖತ್ ಸಿನಿಮಾದಲ್ಲಿ ಸಖತ್ತಾಗಿ ತೋರಿಸಿದ್ದಾರೆ ನಿರ್ದೇಶಕ ಸಿಂಪಲ್ ಸುನಿ. ಅಷ್ಟಕ್ಕೂ ಯಾಕೆ ಸಖತ್ ಸಿನಿಮಾದಲ್ಲಿ ಗಣೇಶ್ ಬಾಡಿಗೆ ಮನೆ ಹುಡುಕುತ್ತಾರೆ ಅನ್ನೋದು ಗೊತ್ತಾಗ ಬೇಕೆಂದ್ರೆ ನೀವು ಸಖತ್ ಸಿನಿಮಾವನ್ನ ನೋಡ್ಲೇ ಬೇಕು.. ಸಖತ್ ಸಖತ್ತಾಗಿದೆ ಒಮ್ಮೆ ನೋಡಿ ಚಿತ್ರಪ್ರೇಮಿಗಳೇ.
The post ‘ಸಖತ್’ ಸಕ್ಸಸ್ ಬೆನ್ನಲ್ಲೇ ಗೋಲ್ಡನ್ ಸ್ಟಾರ್ & ಟೀಂ ‘ಬಾಡಿಗೆ ಮನೆ’ ಬಗ್ಗೆ ಮಾತನಾಡ್ತಿರೋದ್ಯಾಕೆ? appeared first on News First Kannada.