‘ಸಖತ್​’ ಸಿನಿಮಾದಿಂದ ಅಚಾತುರ್ಯ; ಅಂಧ ಸಮುದಾಯಕ್ಕೆ ಕ್ಷಮೆ ಕೋರಿದ ನಿರ್ದೇಶಕ‌ ಸಿಂಪಲ್ ಸುನಿ‌ | Sakath Movie in trouble After blind community wanted to stay for Movie


‘ಸಖತ್​’ ಸಿನಿಮಾದಿಂದ ಅಚಾತುರ್ಯ; ಅಂಧ ಸಮುದಾಯಕ್ಕೆ ಕ್ಷಮೆ ಕೋರಿದ ನಿರ್ದೇಶಕ‌ ಸಿಂಪಲ್ ಸುನಿ‌

ಸಿಂಪಲ್​ ಸುನಿ, ಗಣೇಶ್​

ನಿರ್ದೇಶಕ ಸಿಂಪಲ್​ ಸುನಿ ಹಾಗೂ ನಟ ಗೋಲ್ಡನ್​ ಸ್ಟಾರ್​ ಗಣೇಶ್​ ಎರಡನೇ ಬಾರಿಗೆ ಒಂದಾಗಿದ್ದಾರೆ. ‘ಚಮಕ್​’ ಮೂಲಕ ಹಿಟ್​ ಎನಿಸಿಕೊಂಡಿದ್ದ ಈ ಜೋಡಿ ಈಗ ಮತ್ತೆ ಒಂದಾಗಿದ್ದು ಸಾಕಷ್ಟು ಕುತೂಹಲ ಮೂಡಿಸಿತ್ತು. ಅಂತೆಯೇ ಸಿನಿಮಾವನ್ನು ಎಂಟರ್​​ಟೇನಿಂಗ್​ ಆಗಿ ಕಟ್ಟಿಕೊಟ್ಟಿದ್ದಾರೆ ಸುನಿ. ಆದರೆ, ಒಂದು ವಿಚಾರದಲ್ಲಿ ಎಡವಟ್ಟು ನಡೆದು ಹೋಗಿದೆ. ಈ ವಿಚಾರಕ್ಕೆ ಸಂಬಂಧಿಸಿ ಅವರು ಅಂಧರಿಗೆ ಪತ್ರ ಬರೆದು ಕ್ಷಮೆ ಕೋರಿದ್ದಾರೆ.

ಕಣ್ಣು ಕಾಣದವರಿಗೆ ಕುರುಡರು ಎನ್ನುವ ಶಬ್ದ ಬಳಕೆ ಮಾಡಬಾರದು. ಈ ಕಾರಣಕ್ಕೆ ‘ಸಖತ್’ ಸಿನಿಮಾಗೆ ಸ್ಟೇ ತರಲು ಅಂಧ ಸಮುದಾಯದವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಅಂಧ‌ ಸಮುದಾಯಕ್ಕೆ ನಿರ್ದೇಶಕ ಸುನಿ ಸಿನಿಮಾ ತೋರಿಸುತ್ತಿದ್ದಾರೆ. ಇದರ ಜತೆ ಆ ಸಮುದಾಯಕ್ಕೆ ಪತ್ರದ ಮೂಲಕ ಕ್ಷಮಾಪಣೆ ಕೋರಿದ್ದಾರೆ. ‘ಸಿನಿಮಾ ನೋಡಿದ ಮೇಲೆ ಹೇಳುವ ತಪ್ಪುಗಳನ್ನ ತಿದ್ದುಕೊಳ್ಳುವುದಾಗಿ’ ಸುನಿ ಪತ್ರದಲ್ಲಿ ತಿಳಿಸಿದ್ದಾರೆ.

ಪುನೀತ್​ ರಾಜ್​ಕುಮಾರ್​ ಇತ್ತೀಚೆಗೆ ನಿಧನ ಹೊಂದಿದ್ದರು. ಅವರ ನಿಧನದ ನಂತರ ಎರಡೂ ಕಣ್ಣುಗಳನ್ನು ದಾನ ಮಾಡಿದ್ದರು. ಇದರಿಂದ ಒಂದಷ್ಟು ಅಂಧರ ಬಾಳಲ್ಲಿ ಬೆಳಕು ಮೂಡಿತ್ತು. ಇದರಿಂದ ಸಾಕಷ್ಟು ಜನರು ಕಣ್ಣುಗಳನ್ನು ದಾನ ಮಾಡೋಕೆ ಮುಂದೆ ಬಂದಿದ್ದಾರೆ. ನಿರ್ದೇಶಕ ಸಿಂಪಲ್​ ಸುನಿ ಹಾಗೂ ನಟ ಗಣೇಶ್​ ಕಾಂಬಿನೇಷನ್​ನಲ್ಲಿ ಮೂಡಿಬಂದ ಎರಡನೇ ಚಿತ್ರ ‘ಸಖತ್​’ ಕೂಡ ಇದೇ ಸಂದೇಶದೊಂದಿಗೆ ಬಂದಿದೆ ಅನ್ನೋದು ವಿಶೇಷ.

ಗಣೇಶ್​ ಇದೇ ಮೊದಲ ಬಾರಿಗೆ ಅಂಧನ ರೀತಿಯಲ್ಲಿ ನಟಿಸಿದ್ದಾರೆ. ಕೊಟ್ಟ ಪಾತ್ರವನ್ನು ಅವರು ಉತ್ತಮವಾಗಿ ನಿರ್ವಹಿಸಿದ್ದಾರೆ. ಇಡೀ ಸಿನಿಮಾದಲ್ಲಿ ಬಾಲು ಪಾತ್ರವೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನಿಶ್ವಿಕಾ ಕೂಡ ಅಂಧೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮೆಚ್ಚುಗೆ ಪಡೆಯುತ್ತಾರೆ. ನಟಿ ಸುರಭಿ ಉತ್ತಮವಾಗಿ ನಟಿಸಿದ್ದಾರೆ. ಗಣೇಶ್​ ಮಗ ವಿಹಾನ್​ ಕೂಡ ಸಿನಿಮಾದಲ್ಲಿ ನಟಿಸಿದ್ದಾನೆ. ಮೊದಲ ಚಿತ್ರದಲ್ಲೇ ಅವನು ಎಲ್ಲರ ಗಮನ ಸೆಳೆದಿದ್ದಾನೆ.

ಇದನ್ನೂ ಓದಿ: Sakath Movie Review: ‘ಸಖತ್’​ ಮನರಂಜನೆ, ‘ಸಖತ್’​ ಸಂದೇಶ; ಇದು ಗಣೇಶ್​-ಸುನಿ ಪಂಚ್​

TV9 Kannada


Leave a Reply

Your email address will not be published. Required fields are marked *