ಬೆಂಗಳೂರು: ಆಹಾರ ಮತ್ತು ನಾಗರೀಕ ಖಾತೆ ಸಚಿವರಾದ ಉಮೇಶ್ ಕತ್ತಿ ರೈನೊಬ್ಬರನಿಗೆ ನೀನು ಸತ್ತುಹೋಗಿಬಿಡುವುದು ಉತ್ತಮ ಎಂದು ಹೇಳಿದ್ದಾರೆನ್ನಲಾದ ಆಡಿಯೋ ವೈರಲ್ ಆದ ಹಿನ್ನೆಲೆ ಸಿಎಂ ಬಿ.ಎಸ್​. ಯಡಿಯೂರಪ್ಪ ಕತ್ತಿ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ರೈತನೊಬ್ಬ 5 ಕೆ.ಜಿ ಅಕ್ಕಿ ಬದಲಾಗಿ 3 ಕೆ.ಜಿ ನೀಡುತ್ತಿರುವುದರಿಂದ ಸಾಯಬೇಕಾ ಬದುಕಬೇಕಾ ಎಂದು ಕೇಳಿದಾಗ ಸಾಯಿ ಅಂತ ಹೇಳಿರುವುದು ಒಬ್ಬ ಸಚಿವನಾಗಿ ಸರಿಯಲ್ಲ. ಆ ಭಾಗದಲ್ಲಿರುವ ಜನರಿಗೆ ಗೋಧಿ ಬೇಡವಾದರೆ 5 ಕೆ.ಜಿ ಅಕ್ಕಿಯನ್ನು ಕೊಡಲು ವ್ಯವಸ್ಥೆ ಮಾಡಲಾಗುವುದು. ಉಮೇಶ್ ಕತ್ತಿ ಅವರ ಹೇಳಿಕೆಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.

The post ಸಚಿವನಾಗಿ ರೈತನಿಗೆ ಸಾಯಿ ಅಂತ ಹೇಳಿರುವುದು ಸರಿಯಲ್ಲ- ಕತ್ತಿ ವಿವಾದಕ್ಕೆ ಸಿಎಂ ವಿಷಾದ appeared first on News First Kannada.

Source: newsfirstlive.com

Source link