ಸಚಿವರ ಕಾರು ಅಡ್ಡಗಟ್ಟಿದ ಚಿಂಚನಸೂರ -ಕಾರ್ಯಕ್ರಮವನ್ನೇ ರದ್ದು ಮಾಡಿದ ರಾಮುಲು

ಯಾದಗಿರಿ: ಸಾರಿಗೆ ಸಚಿವ ಶ್ರೀರಾಮುಲು ಅವರ ಕಾರನ್ನು ಅಡ್ಡಗಟ್ಟಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಆಕ್ರೋಶ ಹೊರಹಾಕಿದ ಘಟನೆ ಇಂದು ನಡೆದಿದೆ.

ಸಚಿವ ಶ್ರೀರಾಮುಲು ಅವರು ಬಂದಳ್ಳಿ ಬಳಿಯ ಏಕಲವ್ಯ ವಸತಿ ಶಾಲೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗವ ನಿಟ್ಟಿನಲ್ಲಿ ನಿನ್ನೆಯೇ ಜಿಲ್ಲೆಗೆ ಆಗಮಿಸಿದ್ದರು. ಈ ನಿಮಿತ್ತ ಇಂದು ನಿಗದಿತ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಈ ಸಂದರ್ಭಲ್ಲಿ ಮಾಜಿ ಸಚಿವ ಬಾಬುರಾವ್​ ಚಿಂಚನಸೂರ ಸಚಿವರ ಕಾರನ್ನು ಅಡ್ಡಗಟ್ಟಿ ತಮಗೇ ಕಾರ್ಯಕ್ರಮಕ್ಕೆ ಆಹ್ವಾನವನ್ನೇ ನೀಡಿಲ್ಲ ಎಂದು ಜಿಲ್ಲಾಡಳಿತ ಹಾಗೂ ರಾಮಲು ವಿರುದ್ಧ ಆಕ್ರೋಶ ಹೊರಹಾಕಿದರು.

ನಾನು ಯಾದಗಿರಿ ಜಿಲ್ಲೆಯ ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ಕಷ್ಟಪಟ್ಟು ಏಕಲವ್ಯ ಶಾಲೆಯನ್ನು ಕ್ಷೇತ್ರಕ್ಕೆ ಮಂಜೂರು ಮಾಡಿಕೊಟ್ಟಿದೆ. ಆದರೆ ಇವತ್ತು ಜಿಲ್ಲಾಡಳಿತ ನನ್ನ ಗಮನಕ್ಕೂ ತಾರದೆ ಶಾಲೆ ಉದ್ಘಾಟನೆ ಕಾರ್ಯಕ್ರಮ ಆಯೋಜನೆ ಮಾಡಿದೆ. ನಾನು ಸಚಿವ ಸಂಪುಟ ದರ್ಜೆಯ ಸ್ಥಾನಮಾನವನ್ನು ಹೊಂದಿದ್ದು, ಸಿಎಂ ಬೊಮ್ಮಾಯಿ ಅವರು ನನಗೆ ಸಿಂದಗಿ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸಲು ಹಾಕಿದ್ದಾರೆ. ಆದ್ದರಿಂದ ಅಲ್ಲಿ ಕೆಲಸ ಮಾಡುತ್ತಿದ್ದೀನಿ. ಆದ್ದರಿಂದ ಕಾರ್ಯಕ್ರಮವನ್ನು ರದ್ದು ಮಾಡಿ, ಮುಂದೇ ಒಂದು ದಿನ ದಿನಾಂಕ ನಿಗದಿ ಮಾಡಿ ಆಹ್ವಾನ ನೀಡಬೇಕು. ಆಗ 1 ಲಕ್ಷ ಮಂದಿಯನ್ನು ಕರೆದುಕೊಂಡು ಕಾರ್ಯಕ್ರಮಕ್ಕೆ ಬರುತ್ತೇನೆ ಎಂದು ಗರಂ ಆಗಿ ಮಾತನಾಡಿದ್ರು. ಬಾಬುರಾವ್​​ ಚಿಂತನಸೂರ ಅವರ ಆಕ್ರೋಶಕ್ಕೆ ಮಣಿದ ಸಚಿವರು ಕಾರ್ಯಕ್ರಮವನ್ನು ರದ್ದು ಮಾಡಿ, ವಾಪಸ್​ ಆದ್ರು.

 

News First Live Kannada

Leave a comment

Your email address will not be published. Required fields are marked *