ಚಿಕ್ಕಬಳ್ಳಾಪುರ: ಆರೋಗ್ಯ ಸಚಿವರ ಜೊತೆಯಲ್ಲೇ ಬಂದು ವೈದ್ಯರಿಗೆ ಅಧಿಕಾರಿಯೊಬ್ಬರು ಬ್ಲಾಕ್ ಮೇಲ್​ ಮಾಡಿ, ರೆಮ್​ಡೆಸಿವಿರ್ ಪಡೆದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಮೇ 12 ರಂದು ಶಿಡ್ಲಘಟ್ಟ-ಬಾಗೇಪಲ್ಲಿ ಆಸ್ಪತ್ರೆಗೆ ಸಚಿವ ಸುಧಾಕರ್ ಜೊತೆ ಆಗಮಿಸಿದ್ದ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಮುರುಳಿ ಕೃಷ್ಣ, ಆಸ್ಪತ್ರೆಯ ಸಹಾಯಕ ವೈದ್ಯಾಧಿಕಾರಿಗಳಿಗೆ ಬ್ಲಾಕ್ ಮೇಲ್ ಮಾಡಿ 10 ರೆಮ್​ಡೆಸಿವಿರ್ ಇಂಜೆಕ್ಷನ್ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಜೊತೆಗೆ ಖಾಸಗಿ ಆಸ್ಪತ್ರೆಯ ವೈದ್ಯರ ಬಳಿ ಸಹ ಹಣ ವಸೂಲಿಗೆ ಮುಂದಾಗಿದ್ದು, ಡಿಹೆಚ್ಓ ಬಳಿ 5 ವೆಂಟಿಲೇಟರ್​ಗಳಿಗೆ ಡಿಮ್ಯಾಂಡ್ ಮಾಡಿದ್ದಾರೆ ಎಂದು ಹೇಳಲಾಗಿದೆ.

ಈ ಸಂಬಂಧ ಮುರುಳಿ ಕೃಷ್ಣ ವಿರುದ್ಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನನ್ವಯ ಮುರುಳಿಕೃಷ್ಣ ಅವರನ್ನ ಪೊಲೀಸರು ಬಂಧಿಸಿ, ಬಳಿಕ ಜಾಮೀನಿನ ಮೇಲೆ ರಿಲೀಸ್ ಮಾಡಿದ್ದಾರೆ.

 

The post ಸಚಿವರ ಜೊತೆಯಲ್ಲೇ ತೆರಳಿ ವೈದ್ಯರಿಗೆ ಬ್ಲಾಕ್​ಮೇಲ್: ಅಧಿಕಾರಿ ವಿರುದ್ಧ ಕೇಸ್ appeared first on News First Kannada.

Source: newsfirstlive.com

Source link