ಸಚಿವರ ತಲೆಗೆ ‘ಬಿಟ್​’ ಹುಳ: ಗಲಿಬಿಲಿಗೊಂಡಿರುವ ಮಿನಿಸ್ಟರ್ಸ್​ಗೆ ಕಾಡ್ತಿದ್ಯಂತೆ 6 ಗೊಂದಲ..!


ಬೆಂಗಳೂರು: ಬಿಟ್ ಕಾಯಿನ್ ದಂಧೆ ಪ್ರಕರಣ ಭಾರೀ ಸದ್ದು ಮಾಡ್ತಿದೆ. ಬೊಮ್ಮಾಯಿ ಸರ್ಕಾರದ ಮೇಲೆ ಕಾಂಗ್ರೆಸ್​​ ನೇರ ದಾಳಿ ನಡೆಸ್ತಿದೆ. ಸವಾಲು ಮೆಟ್ಟೋದು ಹೇಗೆ ಅನ್ನೋ ಬಗ್ಗೆ ಸಚಿವರು ಆತಂಕಕ್ಕಿಡಾಗಿದ್ದಾರೆ. ಕಾಂಗ್ರೆಸ್​​​ ಬಿಟ್ಟ ಹುಳದಿಂದ ಸಚಿವರು ತಲೆ ಕೆರೆದುಕೊಳ್ತಿದ್ದಾರೆ. ಬಿಟ್​​ ಕಾಯಿನ್​​ ಅಂದ್ರೆ ಏನು ಅಂತ ಗಲಿಬಿಲಿಗೊಂಡು ಚಡಪಡಿಸ್ತಿದ್ದಾರೆ.

ಬಿಟ್​​ ಕಾಯಿನ್​​ ಪ್ರಕರಣ​​​ ಬಗ್ಗೆ ಗೊಂದಲಕ್ಕೆ ಬಿದ್ದ ಸಚಿವರು
ಕೈ ‘ಬಿಟ್’ ಹುಳದಿಂದ ತಲೆ ಕೆರೆದುಕೊಳ್ಳುತ್ತಿರುವ ಸಚಿವರು

ರಾಜ್ಯದಲ್ಲಿ ಬಿಟ್ ಕಾಯಿನ್ ದಂಧೆ ಪ್ರಕರಣ ಭಾರೀ ಸದ್ದು ಮಾಡ್ತಿದ್ದು, ಈ​​ ಕೇಸ್​​​ ಬಗ್ಗೆ ಸಚಿವರು ಗೊಂದಲಕ್ಕೆ ಬಿದಿದ್ದಾರೆ. ಬಿಟ್​​ ಕಾಯಿನ್​​​ ವಿಚಾರವಾಗಿ ಏನು ಮಾತನಾಡೋದು ಅಂತ ಕಾಂಗ್ರೆಸ್​​ ಆರೋಪಕ್ಕೆ ಗಲಿಬಿಲಿಗೊಂಡ ರಾಜ್ಯ ಸಚಿವರು ತೆಲೆಗೆ ಹುಳ ಬಿಟ್ಕೊಂಡಿದ್ದಾರೆ.

ಬಿಟ್​​ ಕಾಯಿನ್​​ ಗಲಿಬಿಲಿ!
ಬಿಟ್ ಕಾಯಿನ್ ದಂಧೆ ಪ್ರಕರಣ ಕುರಿತಂತೆ ಸಚಿವರು ಚರ್ಚೆಗೆ ಬಿದ್ದಿದ್ದಾರೆ. ಬೊಮ್ಮಾಯಿ ಸಂಪುಟ ಸಹದ್ಯೋಗಿಗಳಿಂದ ತೆರೆಮರೆಯ ಚರ್ಚೆ ನಡೀತಿದೆ. ಬಸವರಾಜ್​ ಬೊಮ್ಮಾಯಿ ಸಂಪುಟದಲ್ಲಿರುವ 29 ಸಚಿವರಲ್ಲಿ ಹಲವು ಸಚಿವರು ಬಿಟ್ ಕಾಯಿನ್ ದಂಧೆ ಬಗ್ಗೆ ಕಾಂಗ್ರೆಸ್​​ ಮಾಡ್ತಿರುವ ಆರೋಪಕ್ಕೆ ಗಲಿಬಿಲಿಗೊಂಡಿದ್ದಾರೆ ಎನ್ನಲಾಗಿದೆ.

ಅಷ್ಟಕ್ಕೂ ಬಿಟ್ ಕಾಯಿನ್ ವಿಚಾರದಲ್ಲಿ ಈ ಮಟ್ಟಕ್ಕೆ ಸಚಿವರು ತಲೆಕೆಡಿಸಿಕೊಳ್ಳೋಕೆ ಕಾರಣ ಅವರು ಅದ್ರಲ್ಲಿ ತೊಡಗಿಸಿಕೊಂಡಿದ್ದಾರೆ ಅಂತ ಅಲ್ಲ. ಅಸಲಿಗೆ ಬಿಟ್ ಕಾಯಿನ್ ಅಂದ್ರೇನು? ಈ ಬಗ್ಗೆ ಏನ್ ಮಾತಾಡೋದು ಅನ್ನೋದೆ ಕೆಲವರಿಗೆ ಗೊತ್ತಿಲ್ವಂತೆ.

ಸಚಿವರ ತಲೆಗೆ ‘ಬಿಟ್​’ ಹುಳ!

  • ಚರ್ಚೆ 1 : ಸದ್ಯ ಸುದ್ದಿ ಆಗುತ್ತಿರುವ ಬಿಟ್ ಕಾಯಿನ್ ದಂಧೆ ಅಂದರೇನು?
  • ಚರ್ಚೆ 2 : ಕಾಂಗ್ರೆಸ್ ನಾಯಕರ ಆರೋಪ ನೇರವಾಗಿ ನಮ್ಮ ಮೇಲೆ ಏಕೆ?
  • ಚರ್ಚೆ 3 : ಬಿಜೆಪಿಯ ಯಾವ್ಯಾವ ನಾಯಕರ ಹೆಸರು ಈ ಪ್ರಕರಣದಲ್ಲಿದೆ?
  • ಚರ್ಚೆ 4 : ಪಕ್ಷದ ನಾಯಕರು ಹೆಸರು ಬಂದ್ರೆ, ಹೈಕಮಾಂಡ್ ನಿಲುವೇನು?
  • ಚರ್ಚೆ 5 : ಹೈಕಮಾಂಡ್​​​ ನಾಯಕರು ಯಾವ ಕ್ರಮ ತೆಗೆದುಕೊಳ್ಳಬಹುದು?
  • ಚರ್ಚೆ 6 : ಅಷ್ಟಕ್ಕೂ ಬಿಟ್ ಕಾಯಿನ್ ಯಾವಾಗಿನಿಂದ ಚಾಲ್ತಿಗೆ ಬಂದಿದೆ?

ಒಟ್ನಲ್ಲಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ಕಾಂಗ್ರೆಸ್​​​ ಬಿಟ್ಟ ಬಿಟ್ ಕಾಯಿನ್ ಹುಳದಿಂದ ಸಚಿವರು ತಲೆ ಕೆರೆದುಕೊಳ್ತಿದ್ದಾರೆ. ಸಂಪುಟ ಸಹೋದ್ಯೋಗಿಗಳಿಂದ ಈ ಬಗ್ಗೆ ತೆರೆಮರೆಯಲ್ಲಿ ಭಾರೀ ಚರ್ಚೆಯಂತೂ ನಡೀತಿದೆ.

The post ಸಚಿವರ ತಲೆಗೆ ‘ಬಿಟ್​’ ಹುಳ: ಗಲಿಬಿಲಿಗೊಂಡಿರುವ ಮಿನಿಸ್ಟರ್ಸ್​ಗೆ ಕಾಡ್ತಿದ್ಯಂತೆ 6 ಗೊಂದಲ..! appeared first on News First Kannada.

News First Live Kannada


Leave a Reply

Your email address will not be published. Required fields are marked *