ಸಚಿವರ ಹೆಸರಿನಲ್ಲಿ ನಕಲಿ ನೇಮಕಾತಿ ಅಧಿಸೂಚನೆ ಪ್ರಕರಣ: ಕನ್ನಡ ಶಿಕ್ಷಕ ಜ್ಞಾನದೇವ್ ಜಾಧವ್​ ಬಂಧನ | Fake recruitment notification case in minister’s name: jnandev Jadhav arrested


ಸರ್ಕಾರದ ಮುಖ್ಯ ಕಾರ್ಯದರ್ಶಿ ಹೆಸರಿನಲ್ಲಿ ನಕಲಿ ನೇಮಕಾತಿ ಆದೇಶದ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಸಚಿವರ ಹೆಸರಿನಲ್ಲಿ ನಕಲಿ ನೇಮಕಾತಿ ಅಧಿಸೂಚನೆ ಪ್ರಕರಣ: ಕನ್ನಡ ಶಿಕ್ಷಕ ಜ್ಞಾನದೇವ್ ಜಾಧವ್​ ಬಂಧನ

ಕನ್ನಡ ಶಿಕ್ಷಕ ಜ್ಞಾನದೇವ್ ಜಾಧವ್ ಬಂಧಿತ ಆರೋಪಿ

ಬೆಂಗಳೂರು: ಸಚಿವರ ಹೆಸರಿನಲ್ಲಿ ನಕಲಿ (Duplicate) ನೇಮಕಾತಿ ಅಧಿಸೂಚನೆ ಪ್ರಕರಣ ಸಂಬಂಧ ಸಂಜಯನಗರ ಪೊಲೀಸರು ಜ್ಞಾನದೇವ್ ಜಾಧವ್ ಎಂಬಾತನನ್ನು ಬಂಧನ ಮಾಡಿದ್ದಾರೆ. ಪಶುಸಂಗೋಪನೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ವಂಚನೆ ಮಾಡಲಾಗಿತ್ತು. ಸಚಿವರಿಗೆ ಕನ್ನಡ ಕಲಿಸುತ್ತಿದ್ದ ಆರೋಪಿ ಜ್ಞಾನದೇವ್ ಜಾಧವ್, 2019ರಲ್ಲಿ ಕನ್ನಡ ಶಿಕ್ಷಕರಾಗಿ ಪ್ರಭು ಚೌಹಾಣ್ ನೇಮಿಸಿಕೊಂಡಿದ್ದರು. ಸಚಿವರು ನನಗೆ ಆಪ್ತರೆಂದು ಹೇಳಿ ಹಲವು ಅಭ್ಯರ್ಥಿಗಳಿಗೆ ವಂಚನೆ ಮಾಡಿದ್ದು, ಇಲಾಖೆಯ FDA, SDA ಹುದ್ದೆಗಳಿಗೆ ನಕಲಿ ಆದೇಶ ಪ್ರತಿ ಸೃಷ್ಟಿ ಮಾಡಲಾಗಿದೆ. ಹುದ್ದೆಗೆ ಅರ್ಜಿ ಸಲ್ಲಿಸಿದ 63 ಜನರನ್ನು ಆರೋಪಿ ಆಯ್ಕೆ ಮಾಡಿದ್ದ. 2 ರಿಂದ 4 ಲಕ್ಷ ರೂ.ಯಂತೆ 25 ಲಕ್ಷ ಹಣ ಪಡೆದು ವಂಚಿಸಿದ್ದ. ಸರ್ಕಾರಿ ನೇಮಕಾತಿ ಪ್ರಕ್ರಿಯೆ ಮಾದರಿಯಲ್ಲೇ ನಕಲಿ ನೇಮಕಾತಿ ಮಾಡಿದ್ದು, ಜುಲೈ 30ರೊಳಗೆ ಆಕ್ಷೇಪಗಳಿದ್ದರೆ ಅರ್ಜಿ ಸಲ್ಲಿಸುವಂತೆ ಇಲಾಖೆ ಹೆಸರಿನಲ್ಲಿ ಆದೇಶ ಹೊರಡಿಸಿದ್ದ. ಕೆಲ ಅಭ್ಯರ್ಥಿಗಳು ಇಲಾಖೆಗೆ ಸಂಪರ್ಕಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

TV9 Kannada


Leave a Reply

Your email address will not be published. Required fields are marked *