ದಾವಣಗೆರೆ: ಸಚಿವೆ ಶಶಿಕಲಾ ಜೊಲ್ಲೆ ಎದುರು ಜಗಳೂರು ಶಾಸಕ ಎಸ್​. ವಿ. ರಾಮಚಂದ್ರ ಕಣ್ಣೀರು ಹಾಕಿದ್ದಾರೆ. ಉಚ್ಚಂಗಿದುರ್ಗ ಗ್ರಾಮದ ಬಾಲಕನಿಗೆ ಹಾವು ಕಚ್ಚಿ ಸರಿಯಾದ ಚಿಕಿತ್ಸೆ ಸಿಗದೇ, ಸಾವನ್ನಪ್ಪಿರೋ ಹಿನ್ನಲೆ ತುಂಬಿದ ಸಭೆಯಲ್ಲೇ ಜಗಳೂರು ಶಾಸಕ ಎಸ್ ವ್ಹಿ ರಾಮಚಂದ್ರ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.

ವಿಜಯನಗರ ಜಿಲ್ಲೆ ಹರಪ್ಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಬಾಲಕನಿಗೆ ಕೆಲ ದಿನಗಳ ಹಿಂದೆ ಹಾವು ಕಚ್ಚಿತ್ತು. 10ವರ್ಷದ ಮಗುವಿಗೆ ಹಾವು ಕಚ್ಚಿದ್ದರಿಂದ ದಾವಣಗೆರೆ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಈ ವೇಳೆ ಒಂದುವರೆ ಗಂಟೆಯಾದ್ರೂ ಮಗುವಿಗೆ ಚಿಕಿತ್ಸೆ ನೀಡಿಲ್ಲ. ನಾನು ಕರೆ ಮಾಡಿ ತರಾಟೆಗೆ ತೆಗೆದುಕೊಂಡಾಗ ಯಾವುದೋ ಔಷದಿ ಕೊಟ್ಟು ಕಳುಹಿಸಿದ್ದಾರೆ. ಆದ್ರೆ, ಆ ಮಗುವಿಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರೋದಕ್ಕೆ ತುಂಬಿದ ಸಭೆಯಲ್ಲೇ ಕಣ್ಣೀರು ಹಾಕಿದ್ದಾರೆ ಎಂದು ಹೇಳಲಾಗಿದೆ.

The post ಸಚಿವೆ ಶಶಿಕಲಾ ಜೊಲ್ಲೆ ಎದುರು ಜಗಳೂರು ಶಾಸಕ ರಾಮಚಂದ್ರ ಕಣ್ಣೀರು appeared first on News First Kannada.

Source: newsfirstlive.com

Source link