ಸಚಿವ ಈಶ್ವರಪ್ಪ ವಿರುದ್ಧ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲಪಾಡ್ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ನಲಪಾಡ್, ರಾಷ್ಟ್ರಧ್ವಜ ತೆಗೆದುಹಾಕ್ತೀವಿ ಎನ್ನುವ ಅವರ ಮಾತು ಜನರನ್ನ ತಪ್ಪುದಾರಿಗೆ ಎಳೆಯುತ್ತದೆ. ಇದು ಕಾಂಗ್ರೆಸ್ ಪಕ್ಷದ ಧ್ವಜವಲ್ಲ, ನಮ್ಮ ರಾಷ್ಟ್ರದ ಧ್ವಜ. ಕ್ಯಾಬಿನೆಟ್ ಮಂತ್ರಿಯಾಗಿ ನಾಲಿಗೆ ಮೇಲೆ ಹಿಡಿತ ಇಲ್ಲದಿರುವ ಈಶ್ವರಪ್ಪ, ಮಂತ್ರಿಗಿರಿಗೆ ರಾಜೀನಾಮೆ ಕೊಟ್ಟು ಮನೆಯಲ್ಲಿರಬೇಕು ಅಂತಾ ಕಿಡಿಕಾರಿದ್ದಾರೆ.
ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಬಗ್ಗೆ ಏಕವಚನದಲ್ಲಿ ಮಾತಾಡ್ತಾರೆ. ಇದು ನಿಮ್ಮಪ್ಪನ ಮನೆಯಲ್ಲ ಅನ್ನೋಕೆ ಈಶ್ವರಪ್ಪಗೆ ಯಾರ್ ಅಧಿಕಾರ ಕೊಟ್ಟರು. ಪೊಲೀಸರು ಎಫ್ಐಆರ್ ರಿಜಿಸ್ಟರ್ ಮಾಡದಿದ್ರೆ ಕೊರ್ಟ್ ಹೋಗ್ತೀವಿ. ಈಶ್ವರಪ್ಪ ಮಂತ್ರಿಗಿರಿಗೆ ರಾಜೀನಾಮೆ ಕೊಟ್ಟು ಮನೆಯಲ್ಲಿ ಕುಳಿತುಕೊಳ್ಳಬೇಕು ಎಂದು ಆಗ್ರಹಿಸಿದರು.