ಸಚಿವ ಲಕ್ಷ್ಮಣ್​ ಸವದಿ ಅವರ ಸಹೋದರನ ಪುತ್ರ ಕೋವಿಡ್​ಗೆ ಬಲಿ

ಸಚಿವ ಲಕ್ಷ್ಮಣ್​ ಸವದಿ ಅವರ ಸಹೋದರನ ಪುತ್ರ ಕೋವಿಡ್​ಗೆ ಬಲಿ

ಬೆಳಗಾವಿ: ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಸಹೋದರನ ಪುತ್ರ ವಿನೋದ್ ಸವದಿ ಇಂದು ಬೆಳಗಿನ ಜಾವ ಕೋವಿಡ್​ನಿಂದಾಗಿ ಮೃತಪಟ್ಟಿದ್ದಾರೆ.

36 ವರ್ಷದ ವಿನೋದ್,​ ಲಕ್ಷ್ಮಣ ಸವದಿ ಅವರ ಸಹೋದರರಾದ ಪರಪ್ಪ ಸವದಿ ಅವರ ಪುತ್ರ. ಪರಪ್ಪ ಸವದಿ ಅವರು ಕೃಷ್ಣ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿದ್ದಾರೆ. ಯುವ ಮುಖಂಡ ವಿನೋದ್​ ಜಿಲ್ಲೆಯ ಹಲವು ಭಾಗದಲ್ಲಿ ಸಾರ್ವಜನಿಕ ಮತ್ತು ಸಾಮಾಜಿಕ ಕೆಲಸಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದರು.

ಕಳೆದ ಬಾರಿ ಲಾಕ್​ಡೌನ್ ಸಂದರ್ಭದಲ್ಲಿ ಬಡವರಿಗೆ ಆಹಾರ ಪದಾರ್ಥಗಳನ್ನು ಉಚಿತವಾಗಿ ಹಂಚಿಕೆ ಮಾಡಿದ್ದರು. ಅಲ್ಲದೇ, ಇತರ ಸಾಮಾಜಿಕ ಕೆಲಸಗಳಲ್ಲಿಯೂ  ಭಾಗಿಯಾಗಿ ಕೆಲಸ ಮಾಡುವ ಮೂಲಕ ಜನಮನ್ನಣೆ ಗಳಿಸಿದ್ದರು. ವಿನೋದ್​ ನಿಧನಕ್ಕೆ ಅವರ ಆತ್ಮೀಯ ಸ್ನೇಹಿತರ ಬಳಗ ಕಂಬನಿ ಮಿಡಿದಿದೆ.

The post ಸಚಿವ ಲಕ್ಷ್ಮಣ್​ ಸವದಿ ಅವರ ಸಹೋದರನ ಪುತ್ರ ಕೋವಿಡ್​ಗೆ ಬಲಿ appeared first on News First Kannada.

Source: newsfirstlive.com

Source link