ದಾವಣಗೆರೆ: ಜಿಲ್ಲೆಯ ಹರಿಹರದ ಕೆಎಚ್‌ಬಿ ಲೇಔಟ್ ಕಾಮಗಾರಿ ಪರಿಶೀಲನೆಗೆ ಬಂದ ವಸತಿ ಸಚಿವ ವಿ ಸೋಮಣ್ಣಗೆ ರೈತರು ತರಾಟೆ ತೆಗೆದುಕೊಂಡ ಘಟನೆ ಇಂದು ನಡೆಯಿತು.

ಲೇಔಟ್ ಕಾಮಗಾರಿಯಿಂದ ನೀರು ಬಸಿದು ತೋಟಕ್ಕೆ ಹೋಗ್ತಿದೆ. ಇದರಿಂದ ನಮ್ಮ ಬೆಳೆಗಳಿಗೆ ಹಾನಿಯಾಗ್ತಿದೆ. ಲೇಔಟ್ ಎತ್ತರ ಹೆಚ್ಚಿಸಿದ ಕಾರಣ ತೋಟಗಳಿಗೆ ನೀರು‌ ನುಗ್ಗುತ್ತಿದೆ. ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗ್ತಿಲ್ಲ ಎಂದು ರೈತ ರಾಜಶೇಖರ್ ಎಂಬಾತ ಕಿಡಿಕಾರಿದರು.

ನೀರು ಹರಿಯಲು ಕಾಲುವೆ ನಿರ್ಮಿಸಿಬೇಕು, ಸಮಸ್ಯೆ ಪರಿಹರಿಸದಿದ್ರೆ ಜೆಸಿಬಿಯಿಂದ ಲೇಔಟ್ ತೆರವುಗೊಳಿಸುವ ಎಚ್ಚರಿಕೆಯನ್ನ ನೀಡಿದ್ರು. ಈ ವೇಳೆ ಸಚಿವರು ರೈತರಿಗೆ ಸಮಜಾಯಿಸಿ ನೀಡಿ ಎಲ್ಲವನ್ನೂ ಸರಿಪಡಿಸುವ ಭರವಸೆಯನ್ನ ನೀಡಿದ್ರು.

The post ಸಚಿವ ವಿ.ಸೋಮಣ್ಣಗೆ ಮುತ್ತಿಗೆ ಹಾಕಿದ ರೈತರಿಂದ ವಾರ್ನಿಂಗ್.. ನಡೆದಿದ್ದೇನು..? appeared first on News First Kannada.

Source: newsfirstlive.com

Source link